ಕಾಸ್ಟಿಂಗ್​ ಕೌಚ್​ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ  ನಟಿ ಶ್ರೀ ರೆಡ್ಡಿ ಅವರ ಹಾಟ್​ ವಿಡಿಯೋವೊಂದು ವೈರಲ್​ ಆಗಿದೆ.  ನಟರ, ನಿರ್ಮಾಪಕರು ತನ್ನನ್ನು ನಂಬಿಸಿ ಕೈ ಕೊಟ್ಟಿದ್ದಾರೆ, ಅವಕಾಶ ಕೊಡಿಸುವುದಾಗಿ ಹೇಳಿ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ರು. ಶ್ರೀರೆಡ್ಡಿ ಹೊತ್ತಿಸಿದ ಕಿಡಿಯಿಂದಾಗಿ ಅನೇಕರು ತಮಗಾದ ಕಾಸ್ಟಿಂಗ್​ ಕೌಚ್​ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ  ಹೇಳಿಕೊಂಡಿದ್ದರು. ಸದ್ಯ ಮತ್ತೊಮ್ಮೆ ಶ್ರೀರೆಡ್ಡಿ ಸುದ್ದಿಯಲ್ಲಿದ್ದಾರೆ. ಕಾಸ್ಟಿಂಗ್​ ಕೌಚ್​ ಬದಲಾಗಿ ಅವರು ಈ ಬಾರಿ ಹಾಟ್​ ವಿಡಿಯೋ ಮೂಲಕ ನ್ಯೂಸ್​ನಲ್ಲಿದ್ದಾರೆ.

ಹೌದು ಇತ್ತೀಚೆಗಷ್ಟೆ ಶ್ರೀರೆಡ್ಡಿ ಅವರ ಹಾಟ್​ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದ್ದು, ರೆಡ್ಡಿ ಮತ್ತೊಮ್ಮೆ ಹಾಟ್​ ಸೀಟ್​ ಮೇಲೆ ಕುಳಿತ್ತಿದ್ದಾರೆ. ಇದು ಯಾವ ಹಾಟ್​ ವಿಡಿಯೋ ಅಂತೀರಾ ಈ ವರದಿ ಓದಿ ನಿಮಗೆ ತಿಳಿಯುತ್ತೆ.

ಎಲ್ಲೆಡೆ ಈಗ ಅಪಾಯಕಾರಿ ‘ಕಿಕಿ’ ಚಾಲೆಂಜ್​ ಮೇಲೆ ನಿಷೇಧ ಹೇರಲಾಗಿದೆ. ಆದರೂ ಮತ್ತೊಮ್ಮೆ ಈ ಕಿರಿಕ್​ ಬ್ಯೂಟಿ ಈ ನಿಷೇಧಿತ ಸವಾಲನ್ನು ಸ್ವೀಕರಿಸಿದ್ದು, ‘ಕಿಕಿ ಮೈ ಫೀಲಿಂಗ್ಸ್​ ಹಾಡಿಗೆ ಹೆಜ್ಜೆ’  ಹಾಕಿದ್ದಾರೆ.  ತಾವು ‘ಕಿಕಿ’ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಖುದ್ದು ಶ್ರೀರೆಡ್ಡಿ ತಮ್ಮ ಫೇಸ್​ಬುಕ್​ನಲ್ಲಿ ಶೇರ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/08/sri-reddy-759.jpghttp://bp9news.com/wp-content/uploads/2018/08/sri-reddy-759-150x150.jpgBP9 Bureauಸಿನಿಮಾ  ಕಾಸ್ಟಿಂಗ್​ ಕೌಚ್​ ವಿಚಾರವಾಗಿ ಸದಾ ಸುದ್ದಿಯಲ್ಲಿದ್ದ  ನಟಿ ಶ್ರೀ ರೆಡ್ಡಿ ಅವರ ಹಾಟ್​ ವಿಡಿಯೋವೊಂದು ವೈರಲ್​ ಆಗಿದೆ.  ನಟರ, ನಿರ್ಮಾಪಕರು ತನ್ನನ್ನು ನಂಬಿಸಿ ಕೈ ಕೊಟ್ಟಿದ್ದಾರೆ, ಅವಕಾಶ ಕೊಡಿಸುವುದಾಗಿ ಹೇಳಿ ನನ್ನನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ರು. ಶ್ರೀರೆಡ್ಡಿ ಹೊತ್ತಿಸಿದ ಕಿಡಿಯಿಂದಾಗಿ ಅನೇಕರು ತಮಗಾದ ಕಾಸ್ಟಿಂಗ್​ ಕೌಚ್​ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿಯೇ  ಹೇಳಿಕೊಂಡಿದ್ದರು. ಸದ್ಯ ಮತ್ತೊಮ್ಮೆ ಶ್ರೀರೆಡ್ಡಿ ಸುದ್ದಿಯಲ್ಲಿದ್ದಾರೆ. ಕಾಸ್ಟಿಂಗ್​ ಕೌಚ್​ ಬದಲಾಗಿ...Kannada News Portal