ಸಿನಿಮಾ ಟಾಕ್ :  ಕಲರ್​ಫುಲ್​  ದುನಿಯಾ ಅಂದ್ರೆ ಹಾಗೇ. ಅವರ   ಫೋಟೋ, ವಿಡಿಯೋ,  ಸ್ಟೇಟ್​ಮೆಂಟ್​ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಅವರ ಸುದ್ದಿಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿರುತ್ತವೆ. ಸದ್ಯ ಪ್ರಜ್ವಲ್​ ದೇವರಾಜ್​ ಅವರ ವಿಡಿಯೋವೊಂದು ವೈರಲ್​ ಆಗಿದೆ.  ಯಾವ ಗಾಸಿಪ್​ಗೂ ಎಡೆ ಮಾಡಿಕೊಡದೇ  ಮಾಡೆಲ್​  ರಾಗಿಣಿ ಚಂದ್ರನ್​  ಅವರನ್ನು ಮದುವೆಯಾಗಿ ಮೂರು ವರ್ಷ ಕಳೆದಿದೆ. ಆದರೆ ಈಗ  ಪ್ರಜ್ವಲ್​ ಮತ್ತು ರಾಗಿಣಿ ವಿಡಿಯೋ ಈಗ ಸದ್ದಾಗುತ್ತಿರುವುದಾದರೂ ಯಾಕೆ ಅಂತಾ ಯೋಚಿಸ್ತಿದ್ದಿರಾ…?

 ಇತ್ತೀಚೆಗಷ್ಟೇ ಮೇಘನಾ-ಚಿರು ಮದುವೆ ಮುಗಿದಿದೆ, ಸ್ಯಾಂಡಲ್​ವುಡ್​ ದಂಡೇ ಅಲ್ಲಿ ನೆರೆದಿತ್ತು. ಮದುವೆಗೆ ಈ ಕ್ಯೂಟ್​ ಕಪಲ್​ ಪ್ರಜ್ಜು ಅಂಡ್​ ರಾಗಿಣಿ  ಕೂಡ ಹೋಗಿದ್ರು. ಅಷ್ಟೇ ಅಲ್ಲಾ ಮದುವೆಯಲ್ಲಿ  ಸೆಂಟರ್ ಆಫ್​ ಅಟ್ರಾಕ್ಷನ್​  ಆಗಿದ್ದರು. ಕಾರಣ ಇದೆ. ಏಕೆಂದರೆ ಪ್ರಜ್ವಲ್​ ಮಧುಮಗನಂತೆ  ವೈಟ್​ ಅಂಡ್​ ವೈಟ್​ನಲ್ಲಿ  ಪಂಚೆ ಧರಿಸಿ  ಮಿಂಚುತ್ತಿದ್ದರೆ, ರಾಗಿಣಿ ರೇಶಿಮೆ ಸೀರೆ ಧರಿಸಿ ದೃಷ್ಟಿಯಾಗುವಂತೆ ಕಾಣುತ್ತಿದ್ದರು.

ಅಂದಹಾಗೇ ಈ ಜೋಡಿ ತಮ್ಮ ಮದುವೆ ಸಮಯದಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋವಾಗಲೀ, ಅಥವಾ ಪೋಸ್ಟ್​ ವೆಂಡಿಂಗ್​ ಫೋಟೋ ಶೂಟ್​ ಆಗಲೀ ಮಾಡಿಸಿರಲಿಲ್ವಂತೆ ಈ ಕ್ಯೂಟ್​ ಕಪಲ್​. ಮೇಘನಾ-ಚಿರು ಮದುವೆಯನ್ನ ನೋಡಿ ಬಂದ್​ ಮೇಲೆ ಸದ್ಯ ವಿಡಿಯೋ ಮಾಡಿಸಿದ್ದಾರೆ. ಆ ವಿಡಿಯೋ ನೋಡಿಯೇ ಎಲ್ಲರೂ ಅಲೆಲೇ ಭಲೆ ಜೋಡಿ ಇದು ಅಂತಾ ಹೇಳ್ತಿದ್ದಾರಂತೆ. ಆ ವಿಡಿಯೋನೇ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು.

 ಒಟ್ಟಾರೆ ಕೊನೆಗೂ ತಮ್ಮ ಆಸೆಯನ್ನು ವಿಡಿಯೋ ಮಾಡಿಸುವುದರ ಮೂಲಕ ಪೂರೈಸಿಕೊಂಡಿದ್ದಾರೆ. ಆ ರೋಮ್ಯಾಂಟಿಕ್​ ವಿಡಿಯೋನೇ ಈಗ  ಸಿಕ್ಕಾಪಟ್ಟೆ ವೈರಲ್​ ಆಗಿರೋದು.

Please follow and like us:
0
http://bp9news.com/wp-content/uploads/2018/05/Prajwaldevraj-Ragini-Romantic-video-after-marriage.jpeghttp://bp9news.com/wp-content/uploads/2018/05/Prajwaldevraj-Ragini-Romantic-video-after-marriage-150x150.jpegBP9 Bureauಸಿನಿಮಾ ಸಿನಿಮಾ ಟಾಕ್ :  ಕಲರ್​ಫುಲ್​  ದುನಿಯಾ ಅಂದ್ರೆ ಹಾಗೇ. ಅವರ   ಫೋಟೋ, ವಿಡಿಯೋ,  ಸ್ಟೇಟ್​ಮೆಂಟ್​ ಎಲ್ಲವೂ ಸುದ್ದಿಯಾಗುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಅವರ ಸುದ್ದಿಗಳು ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡುತ್ತಿರುತ್ತವೆ. ಸದ್ಯ ಪ್ರಜ್ವಲ್​ ದೇವರಾಜ್​ ಅವರ ವಿಡಿಯೋವೊಂದು ವೈರಲ್​ ಆಗಿದೆ.  ಯಾವ ಗಾಸಿಪ್​ಗೂ ಎಡೆ ಮಾಡಿಕೊಡದೇ  ಮಾಡೆಲ್​  ರಾಗಿಣಿ ಚಂದ್ರನ್​  ಅವರನ್ನು ಮದುವೆಯಾಗಿ ಮೂರು ವರ್ಷ ಕಳೆದಿದೆ. ಆದರೆ ಈಗ  ಪ್ರಜ್ವಲ್​ ಮತ್ತು ರಾಗಿಣಿ ವಿಡಿಯೋ ಈಗ ಸದ್ದಾಗುತ್ತಿರುವುದಾದರೂ ಯಾಕೆ...Kannada News Portal