ವಿಜಯಪುರ : ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾನಗರದ ಬಳಿಯ ಕೈಗಾರಿಕಾ ವಲಯದ ಖಾಲಿ ನಿವೇಶನದಲ್ಲಿ ಕಾಣೆಯಾಗಿದ್ದ 8 ವರ್ಷದ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಮಂಗಳವಾರ ಮಧ್ಯಾಹ್ನ ತನ್ನ ಸಾಕು ಕುರಿಗಳನ್ನು ಕಾಯುತ್ತಿದ್ದ ಬಾಲಕಿ ಜ್ಯೋತಿ ಕೋರಿ(8) ಕಾಣೆಯಾಗಿದ್ದಳು ಎಂದು ಪಾಲಕರು ಸಿಂದಗಿ ಪೊಲೀಸರಿಗೆ ದೂರು ಕೊಡಲು ಹೋಗಿದ್ದರು. ಆದರೆ ಪಾಲಕರ ದೂರು ಪಡೆಯದ ಪೊಲೀಸರು ಕಳೆದು ಹೋದ ಬಾಲಕಿಯನ್ನು ಹುಡುಕುವುದಾಗಿ ಹೇಳಿ ಕಳುಹಿಸುವ ಮೂಲಕ ತಮ್ಮ ದೂರಿಗೆ ಸ್ಪಂಧಿಸಲಿಲ್ಲ ಎಂಬುದು ಪಾಲಕರ ಆರೋಪವಾಗಿದೆ.

ಮಂಗಳವಾರ ತಡರಾತ್ರಿವರೆಗೆ ಜ್ಯೋತಿಯನ್ನು ಹುಡುಕಿದ ಪಾಲಕರು ಹಾಗೂ ಪೋಷಕರು ಮತ್ತು ಕುಟುಂಬ ಮಿತ್ರರು ಜ್ಯೋತಿ ಕುರಿತು ಯಾವುದೇ ಮಾಹಿತಿ ಸಿಗದೇ ದುಖಃತಪ್ತರಾಗಿದ್ದರು. ಆದರೆ ಬುಧವಾರ ಬೆಳಿಗ್ಗೆ ಕೈಗಾರಿಕಾ ವಲಯದ ಖಾಲಿ ನಿವೇಶನವೊಂದರಲ್ಲಿ ಸಂಶಯಾಸ್ಪದವಾಗಿ ಆಕೆಯ ಶವ ಬಿದ್ದದ್ದನ್ನು ಗಮನಿಸಿದ ಕೆಲವರು ಠಾಣೆಗೆ ಮಾಹಿತಿ ನೀಡಿದ್ದಾರೆ.

ನಂತರ ಸ್ಥಳಕ್ಕೆ ಸಿಪಿಐ ಮಂಜುನಾಥ ಧಾಮಣ್ಣವರ ಹಾಗೂ ಠಾಣಾಧಿಕಾರಿ ನಿಂಗಪ್ಪ ಪೂಜಾರಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮೃತ ಬಾಲಕಿಯ ಶವವನ್ನು ಶವಪರೀಕ್ಷೆಗಾಗಿ ಕಳುಹಿಸಲು ಪೊಲೀಸರು ಮುಂದಾದಂತೆ ಅಲ್ಲಿನ ಕೆಲವು ಮಹಿಳಾ ನಿವಾಸಿಗಳು ಡಿಸಿ ಬರುವವರೆಗೂ ಶವ ಕೊಡವುದಿಲ್ಲ. ಪೊಲೀಸರಿಗೆ ವಿದ್ಯಾನಗರದ ಸ್ಲಂ ನಿವಾಸಿಗಳು ಲೆಕ್ಕಕ್ಕೇ ಇಲ್ಲ. ಇಂತಹ ಪರಿಸ್ಥಿತಿ ಇಂದು ಜ್ಯೋತಿಗೆ ಬಂದಿದೆ. ಮುಂದೆ ನಮ್ಮ ಮಕ್ಕಳಿಗೂ ಬಂದರೆ ಯಾರು ಜವಾಬ್ದಾರಿ ಎಂದು ಸಿಪಿಐ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಶವಪರೀಕ್ಷೆ ನಡೆಸದೇ ಘಟನೆಯ ಕಾರಣ ಹಾಗೂ ತಪ್ಪಿತಸ್ಥರನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದ ನಂತರ ಬಾಲಕಿ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಯಿತು. ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಶವಪರೀಕ್ಷೆ ನಂತರ ಬಂದ ವರದಿ ಆಧರಿಸಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವದಾಗಿ ಪೊಲೀಸರು ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/WhatsApp-Image-2018-05-30-at-1.22.49-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-30-at-1.22.49-PM-150x150.jpegBP9 Bureauವಿಜಯಪುರವಿಜಯಪುರ : ಜಿಲ್ಲೆಯ ಸಿಂದಗಿ ಪಟ್ಟಣದ ವಿದ್ಯಾನಗರದ ಬಳಿಯ ಕೈಗಾರಿಕಾ ವಲಯದ ಖಾಲಿ ನಿವೇಶನದಲ್ಲಿ ಕಾಣೆಯಾಗಿದ್ದ 8 ವರ್ಷದ ಬಾಲಕಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಮಂಗಳವಾರ ಮಧ್ಯಾಹ್ನ ತನ್ನ ಸಾಕು ಕುರಿಗಳನ್ನು ಕಾಯುತ್ತಿದ್ದ ಬಾಲಕಿ ಜ್ಯೋತಿ ಕೋರಿ(8) ಕಾಣೆಯಾಗಿದ್ದಳು ಎಂದು ಪಾಲಕರು ಸಿಂದಗಿ ಪೊಲೀಸರಿಗೆ ದೂರು ಕೊಡಲು ಹೋಗಿದ್ದರು. ಆದರೆ ಪಾಲಕರ ದೂರು ಪಡೆಯದ ಪೊಲೀಸರು ಕಳೆದು ಹೋದ ಬಾಲಕಿಯನ್ನು ಹುಡುಕುವುದಾಗಿ ಹೇಳಿ ಕಳುಹಿಸುವ ಮೂಲಕ...Kannada News Portal