ಸಿಂದಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಾಲಕಿ ಜ್ಯೋತಿ ಕೋರಿ ಸಾವಿನ ಘಟನೆ ಖಂಡಿಸಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಭಾಗಣ್ಣ ಹೂಗಾರ ಮಾತನಾಡಿ, ಇದೊಂದು ಕೆಟ್ಟ ಘಟನೆ. ಇಲ್ಲಿ ಜ್ಯೋತಿ ನಮ್ಮ ಸಹೋದರಿ. ಆಕೆಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ಸರಕಾರ ಹಾಗೂ ಆಡಳಿತ ಮತ್ತು ಅಧಿಕಾರಿಗಳ ಅಪ್ರಾಮಾಣಿಕತೆಯಿಂದಾಗಿ ಸೂಕ್ತ ಭದ್ರತೆಗಳಿಲ್ಲದೇ ದುಷ್ಕರ್ಮಿಗಳ ಕೃತ್ಯಕ್ಕೆ ಈ ಹಿಂದೆ ದಾನಮ್ಮಳಂತೆ ಇಂದು ಜ್ಯೋತಿ ಬಲಿಯಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಮೇಲೆ ನಡೆಸಲಾಗುತ್ತಿರುವ ದೌರ್ಜನ್ಯವನ್ನು ತಡೆಯುವಲ್ಲಿ ಸರಕಾರಗಳು ಅಧಿಕಾರಿಗಳು ತಮ್ಮ ಭ್ರಷ್ಟತೆಯಿಂದ ವಿಫಲರಾಗುತ್ತಿದ್ದಾರೆ. ಅಲ್ಲದೇ ಎಲ್ಲರ ಸಂವಿಧಾನಾತ್ಮಕ ಹಕ್ಕುಗಳನ್ನು ರಕ್ಷಿಸುವಲ್ಲಿ ಮುಂದಾಗಬೇಕಿರುವ ಪೊಲೀಸ್ ವ್ಯವಸ್ಥೆಯೂ  ಭ್ರಷ್ಟಾಚಾರದಿಂದಾಗಿ ಹಾಳಾಗುತ್ತಿದೆ ಎಂದು ಆರೋಪಿಸಿದರು.

ಬಾಲಕಿ ಜ್ಯೋತಿಯ ಬಡ ಕುಟುಂಬಕ್ಕೆ ಆಸರೆಯಾಗುವಲ್ಲಿ ಎಲ್ಲರೂ ಪರಸ್ಪರ ಕೈ ಜೋಡಿಸಬೇಕು. ಅಲ್ಲದೇ ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ರಕ್ಷಿಸದೇ ಅವರ ರಕ್ಕಸ ಕೃತ್ಯಕ್ಕೆ ತಕ್ಕ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರಲ್ಲದೇ, ಕಾನೂನು ಉಲ್ಲಂಘಿಸುವವರ ವಿರುದ್ಧ ತಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಿದ್ರಾಮ ಭಾಸಗಿ, ಷಡಕ್ಷರಿ ಹಿರೇಮಠ, ಅರುಣಕುಮಾರ ಎ.ಎಸ್, ಸಿದ್ದು ಲಕ್ಕುಂಡಿ, ಶ್ರೀಧರ ಭಜಂತ್ರಿ, ನಾಗೇಶ ಪಾಟೀಲ, ಮಂಜುನಾಥ ತಳವಾರ, ಅವಿನಾಶ ಹಿರೇಮಠ, ಪ್ರಕಾಶ ಆಹೇರಿ, ಸಿದ್ದು ಪಾಟೀಲ ಸೇರಿದಂತೆ ನೂರಾರು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಇದ್ದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-31-at-4.55.22-PM-1024x435.jpeghttp://bp9news.com/wp-content/uploads/2018/05/WhatsApp-Image-2018-05-31-at-4.55.22-PM-150x150.jpegBP9 Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ವಿಜಯಪುರಸಿಂದಗಿ : ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಾಲಕಿ ಜ್ಯೋತಿ ಕೋರಿ ಸಾವಿನ ಘಟನೆ ಖಂಡಿಸಿ ತಾಲೂಕು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನೂರಾರು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ ಡಿ.ಎಸ್.ಜಮಾದಾರ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡ ಭಾಗಣ್ಣ ಹೂಗಾರ ಮಾತನಾಡಿ, ಇದೊಂದು ಕೆಟ್ಟ ಘಟನೆ. ಇಲ್ಲಿ ಜ್ಯೋತಿ ನಮ್ಮ ಸಹೋದರಿ. ಆಕೆಯ ಸಾವಿಗೆ ನ್ಯಾಯ ಕೇಳುತ್ತಿದ್ದೇವೆ. ಸರಕಾರ ಹಾಗೂ ಆಡಳಿತ ಮತ್ತು ಅಧಿಕಾರಿಗಳ...Kannada News Portal