ಸಿಂದಗಿ : ನೂತನ ಸರ್ಕಾರದಲ್ಲಿ ಎಂ.ಸಿ.ಮನಗೂಳಿ ಸಚಿವರಾದ ಹಿನ್ನಲೆ  ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತ ಸೇರಿದಂತೆ ಎಲ್ಲ ವೃತ್ತಗಳಲ್ಲಿ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಕುಮಾರ ದೇಸಾಯಿ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಂತರ  ಮಾತನಾಡಿದ ಕುಮಾರ ದೇಸಾಯಿ ಹಾಗೂ ಕೆಲವು ಹಿರಿಯ ಕಾರ್ಯಕರ್ತರು, ಮತಕ್ಷೇತ್ರದ ಜನತೆಗೆ ಚುನಾವಣಾ ಪೂರ್ವ ಮನಗೂಳಿ ಅವರನ್ನು ಗೆಲ್ಲಿಸಿ ಸಚಿವರನ್ನಾಗಿ ಮಾಡುವೆ ಎಂದು ಮಾತು ಕೊಟ್ಟು ಹೋಗಿದ್ದ ಸಿ.ಎಂ.ಕುಮಾರಸ್ವಾಮಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮೈತ್ರಿ ಸರಕಾರದಲ್ಲಿ ಮನಗೂಳಿ ಅವರಿಗೆ ಸಂಪುಟ ದರ್ಜೆ ಸ್ಥಾನ ನೀಡಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಎಸ್.ಬಿ.ಚಾಗಶೆಟ್ಟಿ, ಚನ್ನುಗೌಡ ಹೊಡ್ಲ, ಬಸವರಾಜ ತಾವರಖೇಡ, ರಮೇಶ ಸೊಡ್ಡಿ, ಪರಮೇಶ್ವರ ದೇಸಾಯಿ, ಬೀರು ಪೂಜಾರಿ, ಪ್ರದೀಪ ಸುಲ್ಪಿ, ಅಬ್ದುಲ್ ಮಾಯ, ಬಸು ಕಿರಣಗಿ, ವಿಶ್ವನಾಥ ಹಂಗರಗಿ, ಶ್ರೀಶೈಲ ರೆಬಿನಾಳ, ಜೈಭೀಮ್, ಮಹಿಬೂಬ ಬಾಗವಾನ, ಜಗದೀಶ ರುಕುಂಪುರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 

Please follow and like us:
0
http://bp9news.com/wp-content/uploads/2018/06/maxresdefault-1-4-1024x576.jpghttp://bp9news.com/wp-content/uploads/2018/06/maxresdefault-1-4-150x150.jpgBP9 Bureauರಾಜಕೀಯವಿಜಯಪುರಸಿಂದಗಿ : ನೂತನ ಸರ್ಕಾರದಲ್ಲಿ ಎಂ.ಸಿ.ಮನಗೂಳಿ ಸಚಿವರಾದ ಹಿನ್ನಲೆ  ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತ ಸೇರಿದಂತೆ ಎಲ್ಲ ವೃತ್ತಗಳಲ್ಲಿ ತಾಲೂಕು ಜೆಡಿಎಸ್ ಉಪಾಧ್ಯಕ್ಷ ಕುಮಾರ ದೇಸಾಯಿ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ  ಮಾತನಾಡಿದ ಕುಮಾರ ದೇಸಾಯಿ ಹಾಗೂ ಕೆಲವು ಹಿರಿಯ ಕಾರ್ಯಕರ್ತರು, ಮತಕ್ಷೇತ್ರದ ಜನತೆಗೆ ಚುನಾವಣಾ ಪೂರ್ವ ಮನಗೂಳಿ ಅವರನ್ನು ಗೆಲ್ಲಿಸಿ ಸಚಿವರನ್ನಾಗಿ ಮಾಡುವೆ ಎಂದು ಮಾತು ಕೊಟ್ಟು ಹೋಗಿದ್ದ ಸಿ.ಎಂ.ಕುಮಾರಸ್ವಾಮಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ....Kannada News Portal