ದಾನಮ್ಮದೇವಿ
ದಾನಮ್ಮದೇವಿ

 ವಿಜಯಪುರ : ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ನೆಲೆಸಿರುವ 12 ನೇ ಶತಮಾನದ ಮಹಾನ್​ ಶಿವ ಶರಣೆ ಶ್ರೀ ದಾನಮ್ಮದೇವಿ ಜಾತ್ರೆ ಬರುವ ಚಟ್ಟಿ ಅಮಾವಸ್ಯೆಯಂದು ವಿಜೃಂಭಣೆಯಿಂದ ಲಕ್ಷಾಂತರ  ಜನರ ಸಾಕ್ಷಿಯಾಗಿ ಜರುಗಲಿದೆ.

ದೇವಿಯು ಮಹಾರಾಷ್ಟ್ರದಲ್ಲಿ ನೆಲೆಸಿದರೂ ಭಕ್ತರು ಮಾತ್ರ ಕರ್ನಾಟಕದಾದ್ಯಂತ ಅದರಲ್ಲೂ ಹೆಚ್ಚು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ದೇವಿ ಭಕ್ತರಿದ್ದಾರೆ. ಆ ಭಾಗದಲ್ಲಿ ದೇವಸ್ಥಾನಗಳನ್ನು ಭಕ್ತರು ನಿರ್ಮಿಸಿ ನಿತ್ಯ ತಾಯಿಯ ದರ್ಶನ  ಪಡೆದು ತಮ್ಮ ಉದ್ಯೋಗದಲ್ಲಿ ತೊಡಗುತ್ತಾರೆ.

ಅದರಂತೇ ವಿಜಯಪುರ ನಗರದ ಆನಂದ ನಗರದಲ್ಲಿ ಕಳೆದ ಆರು ವರ್ಷಗಳ ಹಿಂದೆ ವಿಜಯಪುರದ ಎಲ್ಲಾ ಭಕ್ತರ ದಾನದಿಂದಲೇ   ನಿರ್ಮಾಣವಾಗಿದ್ದು ಶ್ರೀ ದಾನಮ್ಮದೇವಿಯ ಭವ್ಯ ದೇವಸ್ಥಾನ. ಕಳೆದ ಆರುವರ್ಷಗಳಿಂದ ಸತತ ಧಾರ್ಮಿಕ ಕಾರ್ಯಕ್ರಮ ಹಾಗೂ ದಾಸೋಹ ನಡೆಸುತ್ತಾ ಬಂದಿರುವ ಬಡಾವಣೆಯ ಭಕ್ತರು ಈ ಬಾರಿಯೂ ಕೂಡ ವಿಜೃಂಭಣೆಯ ದೇವಿ ಜಾತ್ರೆ ನಡೆಸಲು ಮುಂದಾಗಿದ್ದಾರೆ.

ನಾಳೆ ದಿ.9-11-2017 ರಂದು 6 ನೇ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಬೆಳಿಗ್ಗೆ 4.30 ಕ್ಕೆ ಗೋ ಪೂಜೆಯೊಂದಿಗೆ ಸಕಲ ಧಾರ್ಮಿಕ ಕಾರ್ಯಕ್ರಮಗಳು ಪ್ರಧಾನ ಅರ್ಚಕರಾದ ಫಕೀರಯ್ಯಾ ಹಿರೇಮಠ ಅವರ ನೇತೃತ್ವದಲ್ಲಿ ಜರುಗಲಿದೆ. ಸಂಜೆ 6 ಘಂಟೆಗೆ ಸಕಲ ಭಕ್ತಾದಿಗಳ ಸಮ್ಮುಖದಲ್ಲಿ ಪರಮಪೂಜ್ಯ ಬಸವಲಿಂಗ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಕಾರ್ತಿಕ ದೀಪೋತ್ಸವಕ್ಕೆ ಚಾಲನೆ ದೊರೆಯಲಿದೆ.

ದಿನಾಂಕ10-11-2017 ಶುಕ್ರವಾರ ಬೆಳಗ್ಗೆ 9.30ಕ್ಕೆ ಬಡಾವಣೆಯ ಅಕ್ಕನ ಬಳಗದವರ ನೇತೃತ್ವದಲ್ಲಿ  ಕನ್ನೂರಿನ ಶ್ರೀ ಷ ಬ್ರ ರೇವಣಸಿದ್ಧ ಶಿವಚಾರ್ಯ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ  ಮತ್ತು ಪರಮಪೂಜ್ಯ ಬಸವಲಿಂಗ ಸ್ವಾಮಿಗಳ ಸಮ್ಮುಖದಲ್ಲಿ 5001 ಮುತ್ತೈದರ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು  ಸಂಜೆ 6.30 ಕ್ಕೆ ನಾಡುನುಡಿ ಸಂಸ್ಕೃತಿಯ ಸಾರುವ ಆನಂದ ಸಿರಿ 20017 ಕಾರ್ಯಕ್ರಮ ಜರುಗಲಿದೆ. ವಿಧಾನಪರಿಷತ್​ ಸದಸ್ಯರಾದ ಬಸನಗೌಡ ಪಾಟೀಲ ಯತ್ನಾಳರು  ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ದಿನಾಂಕ 11-11-2017 ಕ್ಕೆ ಕಾರ್ಯಕ್ರಮದ ಸಮಾರೊಪ ಸಮಾರಂಭ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯ ಜಲ ಸಂಪನ್ಮೂಲ ಸಚಿವರಾದ  ಎಂ.ಬಿ.ಪಾಟೀಲ ಹಾಗೂ     ನಾಗಠಾಣ ಕ್ಷೇತ್ರ ಶಾಸಕರಾದ ರಾಜು ಅಲಿಗೂರ  ಭಾಗವಹಿಸಲಿದ್ದಾರೆ.

ಒಟ್ಟಾರೆ ಶಿವಶರಣೆ ದಾನಮ್ಮದೇವಿ ಜಾತ್ರೆ 3 ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದ್ದು  ಧಾರ್ಮಿಕ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೆ  ಭಕ್ತಾದಿಗಳು   ಭಾಗವಹಿಸಿ ದೇವಿ ಕೃಪೆಗೆ ಪಾತ್ರರಾಗಬೇಕೆಂದು ದಾನಮ್ಮ ದೇವಿ ದೇವಸ್ಥಾನ ಕಮಿಟಿ ಅಧ್ಯಕ್ಷರಾದ  ಅಪ್ಪು ಇಟ್ಟಂಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
0
http://bp9news.com/wp-content/uploads/2017/11/WhatsApp-Image-2017-11-08-at-4.31.34-PM-1.jpeghttp://bp9news.com/wp-content/uploads/2017/11/WhatsApp-Image-2017-11-08-at-4.31.34-PM-1-150x150.jpegBP9 Bureauಆಧ್ಯಾತ್ಮವಿಜಯಪುರ ವಿಜಯಪುರ : ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ನೆಲೆಸಿರುವ 12 ನೇ ಶತಮಾನದ ಮಹಾನ್​ ಶಿವ ಶರಣೆ ಶ್ರೀ ದಾನಮ್ಮದೇವಿ ಜಾತ್ರೆ ಬರುವ ಚಟ್ಟಿ ಅಮಾವಸ್ಯೆಯಂದು ವಿಜೃಂಭಣೆಯಿಂದ ಲಕ್ಷಾಂತರ  ಜನರ ಸಾಕ್ಷಿಯಾಗಿ ಜರುಗಲಿದೆ. ದೇವಿಯು ಮಹಾರಾಷ್ಟ್ರದಲ್ಲಿ ನೆಲೆಸಿದರೂ ಭಕ್ತರು ಮಾತ್ರ ಕರ್ನಾಟಕದಾದ್ಯಂತ ಅದರಲ್ಲೂ ಹೆಚ್ಚು ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ದೇವಿ ಭಕ್ತರಿದ್ದಾರೆ. ಆ ಭಾಗದಲ್ಲಿ ದೇವಸ್ಥಾನಗಳನ್ನು ಭಕ್ತರು ನಿರ್ಮಿಸಿ ನಿತ್ಯ ತಾಯಿಯ ದರ್ಶನ  ಪಡೆದು ತಮ್ಮ ಉದ್ಯೋಗದಲ್ಲಿ ತೊಡಗುತ್ತಾರೆ. ಅದರಂತೇ...Kannada News Portal