ಮೈಸೂರು:ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.ಆದರೆ ಇಲ್ಲಿ ಸದಾ ಒಂದಲ್ಲ ಒಂದು ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದು,ಈಗ ಮತ್ತೊಂದು ಗೊಂದಲದ ಮೂಲಕ ಸದ್ದು ಮಾಡುತ್ತಿದೆ.

ಈಗ Crash Course ವಿಚಾರವಾಗಿ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿರುವ VTU ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ರಾಜ್ಯಾದ್ಯಂತ ಹೋರಾಟ ನಡೆಸಿದ್ದು,ಆ ಹಿನ್ನೆಲೆಯಲ್ಲಿ ಮೈಸೂರು ABVP ಘಟಕ ಕೂಡಾ ನಿನ್ನೆ ಮೈಸೂರಿನ VTU ನ ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸಿತು. ಸಾವಿರಾರು ವಿದ್ಯಾರ್ಥಿಗಳು VTU ನ ಪ್ರಾದೇಶಿಕ ಕಚೇರಿ ಎದುರು ಪ್ರತಿಭಟನೆ ನಡೆಸಿ ತಮ್ಮ ಬೇಡಿಕೆಗಳನ್ನು ಸಲ್ಲಿಸಿದರು.

Crash Course ಪದ್ದತಿಯ ಬಗ್ಗೆ  ವಿದ್ಯಾರ್ಥಿಗಳಲ್ಲಿರುವ ಗೊಂದಲವನ್ನು ನಿವಾರಿಸಬೇಕು, ಪರೀಕ್ಷೆ ಮುಗಿದ 1 ತಿಂಗಳೊಳಗಾಗಿ ಪಲಿತಾಂಶ ನೀಡಬೇಕು, ಮರುಮೌಲ್ಯಮಾಪನದಲ್ಲಿರುವ ಗೊಂದಲವನ್ನು ನಿವಾರಿಸಲು ಸೇರಿದಂತೆ ಅನೇಕ ಬೆಡಿಕೆಗಳನ್ನು VTU ಗೆ ನೀಡಿ ಬಗೆಹರಿಸಲು ABVP ಆಗ್ರಹಿಸಿದೆ.

 

Please follow and like us:
0
http://bp9news.com/wp-content/uploads/2017/09/WhatsApp-Image-2017-09-02-at-1.26.29-PM-1024x768.jpeghttp://bp9news.com/wp-content/uploads/2017/09/WhatsApp-Image-2017-09-02-at-1.26.29-PM-150x150.jpegBP9 Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಮೈಸೂರುಮೈಸೂರು:ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.ಆದರೆ ಇಲ್ಲಿ ಸದಾ ಒಂದಲ್ಲ ಒಂದು ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದು,ಈಗ ಮತ್ತೊಂದು ಗೊಂದಲದ ಮೂಲಕ ಸದ್ದು ಮಾಡುತ್ತಿದೆ. ಈಗ Crash Course ವಿಚಾರವಾಗಿ ವಿದ್ಯಾರ್ಥಿಗಳ ಜೊತೆ ಚೆಲ್ಲಾಟವಾಡುತ್ತಿರುವ VTU ವಿರುದ್ದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​​ ರಾಜ್ಯಾದ್ಯಂತ ಹೋರಾಟ ನಡೆಸಿದ್ದು,ಆ ಹಿನ್ನೆಲೆಯಲ್ಲಿ ಮೈಸೂರು ABVP ಘಟಕ ಕೂಡಾ ನಿನ್ನೆ ಮೈಸೂರಿನ VTU ನ ಪ್ರಾದೇಶಿಕ ಕಚೇರಿಗೆ ಮುತ್ತಿಗೆ ಹಾಕಿ...Kannada News Portal