ಅಬ್ಬಬ್ಬಾ …! ಈ ಹಾರರ್​ ಸಿನಿಮಾಗೆ ಅಷ್ಟೊಂದು ಡಿಮ್ಯಾಂಡಾ…ಹಾಲಿವುಡ್​ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ತೆರೆ ಕಂಡು ವಾರ ಕಂಪ್ಲೀಟ್​ ಘಾಉವ ಮುನ್ನವೇ 900ಕೋಟಿ ಬಾಚಿಕೊಂಡಿದೆ. ಅಂದಹಾಗೇ ಹಾಲಿವುಡ್​ ಹಾರರ್​ ಮೂವಿಗಳು ಭಾರತದಲ್ಲಿ  ಎಷ್ಟು  ಬೇಗ ರಿಲೀಸ್​ ಆಗುತ್ತೋ ಅಷ್ಟೇ ಬೇಗ ಮಾಯವಾಗಿ ಬಿಡುತ್ತವೆ. ಆದರೆ ಈ ಬಾರಿ ಮಾತ್ರ ಹಾಲಿವುಡ್​ ಸಿನಿಮಾ ‘ದ ನನ್​’ ಸಿನಿಮಾ ಮಾತ್ರ ಹೌಸ್​ಫುಲ್​ ಆಗಿದೆ. ಭರ್ಜರಿ ಹಿಟ್​ ಆಗ್ತಿದೆ.

ಟ್ರೇಲರ್​ನಲ್ಲೇ ಮೈ ಜುಂ ಎನಿಸುವ ಥ್ರಿಲ್ಲಿಂಗ್​ ಸೀನ್​ಗಳು ವೀಕ್ಷಕರಿಂದ ಭಾರೀ ಮೆಚ್ಚುಗೆ ಗಳಿಸಿಕೊಂಡಿವೆ. ಟ್ರೇಲರ್​ನಿಂದಲೇ ಚಿತ್ರಮಂದಿರಲ್ಲಿ ಎಲ್ಲರ ಬೆವರಿಳಿಸಿದ್ದ ‘ದ ನನ್​’ ಈಗ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಕಂಜೂರಿಂಗ್​ ಫ್ರಾಂಚೈಸಿಯ ಐದನೇ ಸಿನಿಮಾ ಇದಾಗಿದ್ದು, ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ.


ಈ ಸಿನಿಮಾದ ಕಥೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗುತ್ತಿದ್ದು, ತೆರೆಕಂಡ ಮೊದಲ ವಾರದಲ್ಲೇ ಹಾಕಿರುವ ಹಣಕ್ಕಿಂತ ಆರು ಪಟ್ಟು ಲಾಭ ಮಾಡಿಕೊಂಡಿದೆ. ಫೋಬ್ಸ್​ ನಿಯತಕಾಲಿಕೆಯ ವರದಿ ಪ್ರಕಾರ ಈ ಸಿನಿಮಾವನ್ನು 158.4 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿದ್ದು, ತೆರೆ ಕಂಡ ಮೊದಲ ವಾರದಲ್ಲೇ ಈ ಸಿನಿಮಾ 943.2 ಕೋಟಿ ಗಳಿಸಿದೆಯಂತೆ. ಮೊದಲ ವಾರಾಂತ್ಯದಲ್ಲಿ 385.2 ಕೋಟಿ ಹಣ ಮಾಡಿದ್ದರೆ, ಭಾರತದಲ್ಲಿ 8 ಕೋಟಿ ಹಣ ಮಾಡಿದೆ.

Please follow and like us:
0
http://bp9news.com/wp-content/uploads/2018/09/qwerghjkiuyhgt.jpghttp://bp9news.com/wp-content/uploads/2018/09/qwerghjkiuyhgt-150x150.jpgBP9 Bureauಸಿನಿಮಾಅಬ್ಬಬ್ಬಾ ...! ಈ ಹಾರರ್​ ಸಿನಿಮಾಗೆ ಅಷ್ಟೊಂದು ಡಿಮ್ಯಾಂಡಾ...ಹಾಲಿವುಡ್​ ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿದೆ. ತೆರೆ ಕಂಡು ವಾರ ಕಂಪ್ಲೀಟ್​ ಘಾಉವ ಮುನ್ನವೇ 900ಕೋಟಿ ಬಾಚಿಕೊಂಡಿದೆ. ಅಂದಹಾಗೇ ಹಾಲಿವುಡ್​ ಹಾರರ್​ ಮೂವಿಗಳು ಭಾರತದಲ್ಲಿ  ಎಷ್ಟು  ಬೇಗ ರಿಲೀಸ್​ ಆಗುತ್ತೋ ಅಷ್ಟೇ ಬೇಗ ಮಾಯವಾಗಿ ಬಿಡುತ್ತವೆ. ಆದರೆ ಈ ಬಾರಿ ಮಾತ್ರ ಹಾಲಿವುಡ್​ ಸಿನಿಮಾ ‘ದ ನನ್​’ ಸಿನಿಮಾ ಮಾತ್ರ ಹೌಸ್​ಫುಲ್​ ಆಗಿದೆ. ಭರ್ಜರಿ ಹಿಟ್​ ಆಗ್ತಿದೆ. ಟ್ರೇಲರ್​ನಲ್ಲೇ ಮೈ ಜುಂ...Kannada News Portal