ನವದೆಹಲಿ : ಕೋಲ್ಕತ್ತದಲ್ಲಿರುವ ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರ ಆರ್ಟ್​ ಆಫ್​ ಲಿವಿಂಗ್​ ಟ್ರಸ್ಟ್​ಗೆ ಸೇರಿದ ಕಟ್ಟಡವನ್ನು ಕೆಡವಲು ಸುಪ್ರೀಂಕೋರ್ಟ್​​​ ಆದೇಶ ನೀಡಿದೆ. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎನ್ನುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್​.
ಕೋಲ್ಕತ್ತದ ಹೊರಭಾಗದಲ್ಲಿರುವ ಜೌಗು ಪ್ರದೇಶದಲ್ಲಿ ಆರ್ಟ್​ ಆಫ್​ ಲಿವಿಂಗ್​ನ ಅಂಗ ಸಂಸ್ಥೆಯಾಗಿರುವ ವೈದಿಕ್​ ಧರ್ಮ ಸನಾತನ ಟ್ರಸ್ಟ್​​ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ರಾಷ್ಟ್ರೀಯ ಹಸಿರು ಪ್ರಾಧಿಕಾರ ಈ ಕಟ್ಟಡ ನೆಲಸಮಗೊಳಿಸುವಂತೆ ಆದೇಶಿಸಿತ್ತು. ಒಂದೊಮ್ಮೆ ಕಟ್ಟಡ ನೆಲಕ್ಕುರುಳದ ಪಕ್ಷದಲ್ಲಿ, ಜೌಗು ಪ್ರದೇಶ ನಿರ್ವಹಣಾ ಇಲಾಖೆ ಹಾಗೂ ರಾಜ್ಯ ಪರಿಸರ ಇಲಾಖೆ ತಲಾ 50 ಲಕ್ಷ ರೂ. ದಂಡ ಕಟ್ಟಬೇಕು ಎನ್ನುವ ಆದೇಶ ಹೊರಡಿಸಿತ್ತು.

ರಾಷ್ಟ್ರೀಯ ಹಸಿರು ಪ್ರಾಧಿಕಾರದ ಕ್ರಮವನ್ನು ಪ್ರಶ್ನಿಸಿ ಆರ್ಟ್​​ ಆಫ್​ ಲಿವಿಂಗ್​ನವರು ಸುಪ್ರೀಂಕೋರ್ಟ್​​ ಮೆಟ್ಟಿಲೇರಿದ್ದರು. ಮದನ್​ ಬಿ. ಲೋಕೂರ್​ ಅವರನ್ನೊಳಗೊಂಡ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ವಾದ ಪ್ರತಿವಾದ ಆಲಿಸಿದ ನಂತರ ಸುಪ್ರೀಂಕೋರ್ಟ್​​ ಎನ್​ಜಿಟಿ ತೀರ್ಪನ್ನು ಎತ್ತಿ ಹಿಡಿದಿದೆ.

Please follow and like us:
0
http://bp9news.com/wp-content/uploads/2018/11/Art-of-living-1.pnghttp://bp9news.com/wp-content/uploads/2018/11/Art-of-living-1-150x150.pngBP9 Bureauಪ್ರಮುಖರಾಜಕೀಯರಾಷ್ಟ್ರೀಯನವದೆಹಲಿ : ಕೋಲ್ಕತ್ತದಲ್ಲಿರುವ ಶ್ರೀ ಶ್ರೀ ರವಿಶಂಕರ್​ ಗುರೂಜಿ ಅವರ ಆರ್ಟ್​ ಆಫ್​ ಲಿವಿಂಗ್​ ಟ್ರಸ್ಟ್​ಗೆ ಸೇರಿದ ಕಟ್ಟಡವನ್ನು ಕೆಡವಲು ಸುಪ್ರೀಂಕೋರ್ಟ್​​​ ಆದೇಶ ನೀಡಿದೆ. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿದೆ ಎನ್ನುವ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದ ಸುಪ್ರೀಂ ಕೋರ್ಟ್​. ಕೋಲ್ಕತ್ತದ ಹೊರಭಾಗದಲ್ಲಿರುವ ಜೌಗು ಪ್ರದೇಶದಲ್ಲಿ ಆರ್ಟ್​ ಆಫ್​ ಲಿವಿಂಗ್​ನ ಅಂಗ ಸಂಸ್ಥೆಯಾಗಿರುವ ವೈದಿಕ್​ ಧರ್ಮ ಸನಾತನ ಟ್ರಸ್ಟ್​​ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಿತ್ತು. ಜಾಗವನ್ನು...Kannada News Portal