ಬೆಂಗಳೂರು : ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡವರು ನಡೆಸುತ್ತಿರುವ ಚಟುವಟಿಕೆಗಳಿಂದ ನಾವ್ಯಾರು ಟೆನ್ಷನ್ ಮಾಡಿಕೊಂಡಿಲ್ಲ, ನಾವೆಲ್ಲರೂ ಕೂಲ್ ಆಗಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವುಗಳು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಕಳುಹಿಸಿದ ಬದಾಮಿ ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ಕೃತಜ್ಞತೆ ಹೇಳುವ ಕೆಲಸ ಮಾಡುತ್ತಿದ್ದಾರೆ.

ನಾವುಗಳು ಹಾಗೂ ಸಚಿವರಾಗಿರುವವರು ಇಲ್ಲಿ ದಿನನಿತ್ಯದ ಕೆಲಸಗಳನ್ನು ನಿರ್ವಹಿಸುತ್ತಿದ್ದೇವೆ. ಯಾರೂ ಟೆನ್ಷನ್ ಮಾಡಿಕೊಂಡಿಲ್ಲ, ಎಲ್ಲರೂ ಕೂಲ್ ಆಗಿದ್ದೇವೆ. ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕಾಗಿ ಶಾಸಕರು ಅಸಮಾಧಾನ ವ್ಯಕ್ತಪಡಿಸುವುದು ನಿಜ. ಅದನ್ನು ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದು ಪರಮೇಶ್ವರ್ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/04/Dr-G-Parameshwara.jpghttp://bp9news.com/wp-content/uploads/2018/04/Dr-G-Parameshwara-150x150.jpgPolitical Bureauಪ್ರಮುಖರಾಜಕೀಯWe are not bothered about unhappy legislators !!! : DCM Paramvar domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180607130759'); document.getElementById('div_3320180607130759').appendChild(scpt); ಬೆಂಗಳೂರು : ಸಚಿವ ಸ್ಥಾನ ಸಿಗದೆ ಅತೃಪ್ತಗೊಂಡವರು ನಡೆಸುತ್ತಿರುವ ಚಟುವಟಿಕೆಗಳಿಂದ ನಾವ್ಯಾರು ಟೆನ್ಷನ್ ಮಾಡಿಕೊಂಡಿಲ್ಲ, ನಾವೆಲ್ಲರೂ ಕೂಲ್ ಆಗಿದ್ದೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವುಗಳು ನಮ್ಮ ನಮ್ಮ ಕೆಲಸಗಳನ್ನು ಮಾಡುತ್ತಿದ್ದೇವೆ. ಮಾಜಿ ಮುಖ್ಯಮಂತ್ರಿ...Kannada News Portal