ಮೈಸೂರು :  ಗೊಕುಲಂ ಕೊಳಗೇರಿಯ ವಿವಿಧ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ  ಗೋಕುಲಂ ನಿವಾಸಿಗಳು  ಪ್ರತಿಭಟನೆ ಮಾಡುತ್ತಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಳು ಸಂಕಷ್ಟದಲ್ಲಿ ಇದ್ದಾರೆ ಎಂದು ನಿವಾಸಿಗಳು ಅಳಲನ್ನು ತೋಡಿಕೊಂಡರು.  ಈ ಬಡಾವಣೆ ಯನ್ನು ರಾಜ್ಯ ಕೊಳಗೇರಿ ಮಂಡಳಿ ನಿರ್ಮಾಣ ಮಾಡಿತ್ತು. ಆದರೆ ಈ ಬಡಾವಣೆಗೆ ಯಾವ ಮೂಲಭೂತ ಸೌಕರ್ಯಗಳ ಭಾಗ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಅದೆಷ್ಟೂ ದೂರು ನೀಡಿದ್ರೂ ಪ್ರಯೋಜನವಾಗುತ್ತಿಲ್ಲ. ಬಡಾವಣೆ ಸಮಸ್ಯೆಗಳ ಆಗರ ಎನಿಸಿದೆ. ಸ್ವಚ್ಛತೆ,  ಕುಡಿಯುವ ನೀರಿನ ಸಮಸ್ಯೆ ತಾಂಡವಾಡುತ್ತಿದೆ, ಕಂಡು ಕಾಣದಂತಿರುವ ಅಧಿಕಾರಿಗಳಿಗೆ ನಮ್ಮ ಗೋಳು ಕಾಣುತ್ತಿಲ್ಲ ಎಂದರು.


ಸದ್ಯ ಕೊಳಗೇರಿ ಮಂಡಳಿ ಬಳಿಯೇ ಮೌನ  ಪ್ರತಿಭಟನೆಗೆ ಕೊಳಗೇರಿ ನಿವಾಸಿಗಳು ಶರಣಾಗಿದ್ದಾರೆ. ಪಾಲಿಕೆ ಸದಸ್ಯ ಎಸ್ ಬಿ ಎಂ ಮಂಜು ನೇತೃತ್ವದಲ್ಲಿ ಕಚೇರಿ ಮುಂಭಾಗ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ  ಹಿರಿಯ ಅಧಿಕಾರಗಳು ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಪ್ರತಿಭಟನೆ ಮುಂದುವರೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Karnatakada-Miditha-76.jpeghttp://bp9news.com/wp-content/uploads/2018/06/Karnatakada-Miditha-76-150x150.jpegBP9 Bureauಪ್ರಮುಖಮೈಸೂರುಮೈಸೂರು :  ಗೊಕುಲಂ ಕೊಳಗೇರಿಯ ವಿವಿಧ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವಂತೆ  ಗೋಕುಲಂ ನಿವಾಸಿಗಳು  ಪ್ರತಿಭಟನೆ ಮಾಡುತ್ತಿದ್ದಾರೆ.ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿವಾಸಿಗಳು ಸಂಕಷ್ಟದಲ್ಲಿ ಇದ್ದಾರೆ ಎಂದು ನಿವಾಸಿಗಳು ಅಳಲನ್ನು ತೋಡಿಕೊಂಡರು.  ಈ ಬಡಾವಣೆ ಯನ್ನು ರಾಜ್ಯ ಕೊಳಗೇರಿ ಮಂಡಳಿ ನಿರ್ಮಾಣ ಮಾಡಿತ್ತು. ಆದರೆ ಈ ಬಡಾವಣೆಗೆ ಯಾವ ಮೂಲಭೂತ ಸೌಕರ್ಯಗಳ ಭಾಗ್ಯವಿಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಅದೆಷ್ಟೂ ದೂರು ನೀಡಿದ್ರೂ ಪ್ರಯೋಜನವಾಗುತ್ತಿಲ್ಲ. ಬಡಾವಣೆ ಸಮಸ್ಯೆಗಳ ಆಗರ ಎನಿಸಿದೆ. ಸ್ವಚ್ಛತೆ,  ಕುಡಿಯುವ ನೀರಿನ...Kannada News Portal