ಬೆಂಗಳೂರು:ನಾವು ರಾಜಮಾರ್ಗದಲ್ಲೇ ನಡೆಯೋದು. ಹಿಂಬಾಗಿಲ ರಾಜಕಾರಣ ಯಾವತ್ತೂ ಮಾಡಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ.

ನಗರದ ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಅವರು ಬಿಜೆಪಿ ಯಾವತ್ತಿದ್ದರೂ ರಾಜಮಾರ್ಗದಲ್ಲೇ ನಡೆಯೋದು. 1996ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಬಹುಮತ ವ್ಯಕ್ತಪಡಿಸಿದ್ರು. ಆದ್ರೆ ಬಹುಮತ ಸಾಭೀತುಪಡಿಸಲು ಆಗದಿದ್ದಾಗ ರಾಜೀನಾಮೆ ಕೊಟ್ಟು ಹೊರಬಂದಿದ್ರು. ಅದು ನಿಜವಾದ ರಾಜಮಾರ್ಗ. ಆ ಮಾರ್ಗದಲ್ಲೇ ನಾವು ನಡೆಯೋದು. ಬಿಜೆಪಿ ಕಾಂಗ್ರೆಸ್‌ ರೀತಿ ಅಲ್ಲ ಎಂದಿದ್ದಾರೆ.

ಸಿದ್ದರಾಮಯ್ಯನವರಿಗೆ  ಬಿಜೆಪಿ ಅಧಿಕಾರಕ್ಕೆ ಬಂದ್ರೆ, ಅಕ್ರಮಗಳ ವಿರುದ್ಧ ತನಿಖೆ ನಡೆಯುತ್ತೆ ಅನ್ನೋ ಭಯವಿದೆ. ಹಾಗಾಗಿ ಜೆಡಿಎಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಸುಳ್ಳುಸುದ್ದಿ ಹಬ್ಬಿಸೋದ್ರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು, ಸುಳ್ಳೇ ಕಾಂಗ್ರೆಸ್‌ನವರ ಜಾಯಮಾನ ಅಂತ ಕಿಡಿಕಾರಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಅವ್ರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಅಂದಿದ್ರು.  ಆದ್ರೆ ಈಗ ಅವ್ರಿಗೇ ಸಪೋರ್ಟ್‌ ಮಾಡ್ತಿದ್ದಾರೆ ಎಂದು ಟೀಕಿಸಿದ್ರು.

ಕಾಂಗ್ರೆಸ್‌ ಶಾಸಕರಿಗೆ ಜೀವ ಭಯವಿದೆ ಎಂದು ರಮ್ಯ ಇವತ್ತು ಟ್ವೀಟ್‌ ಮಾಡಿದ್ರು. ಈ ಹೇಳಿಕೆಗೆ ಸಿಟಿ ರವಿ, ಯಾವ ಶಾಸಕರಿಗೆ ಜೀವ ಭಯವಿದೆ ಹೇಳಲಿ ಮತ್ತು ರಮ್ಯಾ ಅವರಿಗೂ ಜೀವ ಭಯವಿದ್ದರೆ ನಾನೇ ಡಿಜಿ ಮೂಲಕ ರಕ್ಷಣೆ ಕೊಡಿಸ್ತೀನಿ ಅಂತ ವ್ಯಂಗ್ಯವಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/04MNCTRAVI.jpghttp://bp9news.com/wp-content/uploads/2018/05/04MNCTRAVI-150x150.jpgBP9 Bureauಪ್ರಮುಖಬೆಂಗಳೂರು:ನಾವು ರಾಜಮಾರ್ಗದಲ್ಲೇ ನಡೆಯೋದು. ಹಿಂಬಾಗಿಲ ರಾಜಕಾರಣ ಯಾವತ್ತೂ ಮಾಡಲ್ಲ ಎಂದು ಮಾಜಿ ಸಚಿವ ಸಿಟಿ ರವಿ ಹೇಳಿದ್ದಾರೆ. ನಗರದ ಬಿಜೆಪಿ ಕಛೇರಿಯಲ್ಲಿ ಮಾತನಾಡಿದ ಅವರು ಬಿಜೆಪಿ ಯಾವತ್ತಿದ್ದರೂ ರಾಜಮಾರ್ಗದಲ್ಲೇ ನಡೆಯೋದು. 1996ರಲ್ಲಿ ಅಟಲ್‌ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಬಹುಮತ ವ್ಯಕ್ತಪಡಿಸಿದ್ರು. ಆದ್ರೆ ಬಹುಮತ ಸಾಭೀತುಪಡಿಸಲು ಆಗದಿದ್ದಾಗ ರಾಜೀನಾಮೆ ಕೊಟ್ಟು ಹೊರಬಂದಿದ್ರು. ಅದು ನಿಜವಾದ ರಾಜಮಾರ್ಗ. ಆ ಮಾರ್ಗದಲ್ಲೇ ನಾವು ನಡೆಯೋದು. ಬಿಜೆಪಿ ಕಾಂಗ್ರೆಸ್‌ ರೀತಿ ಅಲ್ಲ ಎಂದಿದ್ದಾರೆ. ಸಿದ್ದರಾಮಯ್ಯನವರಿಗೆ  ಬಿಜೆಪಿ ಅಧಿಕಾರಕ್ಕೆ ಬಂದ್ರೆ,...Kannada News Portal