ಬೆಂಗಳೂರು: ‘ಆಕಾಶ್’ ವೇ ಚಪ್ಪರ, ‘ಪೃಥ್ವಿ’ ಯೇ ಹಸೆಮಣೆ, ಮದುವೆಯೇ ‘ಮಿಲನ’, ರಶ್ಮಿ‘ನಿನ್ನಿಂದಲೇ’  ಈ ನವೀನ ‘ಮೈತ್ರಿ’ ಬದುಕಿಗೆ ‘ಹೊಸ ಬೆಳಕು’ ಪ್ರೀತಿ. ‘ಪರಮಾತ್ಮ’ನ ಸ್ಮರಿಸುತ್ತಾ, ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ ‘ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ ‘ಬಿಂದಾಸ್’ ಆಗಿ ಬನ್ನಿ. ಆರತಕ್ಷತೆಯ ‘ಅಪ್ಪು’ಗೆ ಮೂಹೂರ್ತದ ‘ಪವರ್’ ಎಂದು ಹೀಗೆ ಪುನೀತ್ ಅವರ ಎಲ್ಲ ಸಿನಿಮಾ ಹೆಸರನ್ನು ಬಳಸಿಕೊಂಡು ಆಮಂತ್ರಣ ಪತ್ರಿಕೆ ರೆಡಿ ಮಾಡಿಸಿದ್ದಾರೆ ಇಲ್ಲೊಬ್ಬ ಅಪ್ಪು ರವರ ಅಪ್ಪಟ ಅಭಿಮಾನಿ.

ತಮ್ಮ ನೆಚ್ಚಿನ ಸ್ಟಾರ್​ಗಳ ಅಭಿಮಾನಕ್ಕಾಗಿ ಹೇಗೆ ಬೇಕಾದ್ರು ರಿಸ್ಕ್​ ತೆಗೆದುಕೊಳ್ಳುವುದಕ್ಕೆ ರೆಡಿಯಾಗಿರುತ್ತಾರೆ ಅಭಿಮಾನಿಗಳು. ನೆಚ್ಚಿನ ಸ್ಟಾರ್​ ಮತ್ತು ಹೆಸರು  ಟ್ಯಾಟೂ ಹಾಕಿಸಿಕೊಂಡು ಅದರ ಮುಖಾಂತರ ಅಭಿಮಾನ ತೋರಿಸುತ್ತಾರೆ. ಇದೀಗ ಇಲ್ಲೊಬ್ಬ ಪವರ್​ಸ್ಟಾರ್​ ಅಭಿಮಾನಿ ತಮ್ಮ ವೆಡ್ಡಿಂಗ್​ ಕಾರ್ಡ್​ ಅನ್ನು ವಿಶೇಷವಾಗಿ ಪ್ರಿಂಟ್​ ಹಾಕಿಸಿಕೊಂಡು ಹೊಸ ಬಗೆಯ ಪತ್ರಿಕೆ ಮಾಡಿ ಸುದ್ದಿಯಾಗಿದ್ದಾರೆ.

ಲಗ್ನ ಪತ್ರಿಕೆಯನ್ನು ತನ್ನ ನೆಚ್ಚಿನ ನಟ ಪುನೀತ್​ ಸಿನಿಮಾ ಹೆಸರುಗಳನ್ನು ಸೇರಿಸಿ ಮಾಡಿಸಿದ್ದಾರೆ. ನವೀನ್ ಗೆ ಹೊಸದಾಗಿ ಏನನ್ನಾದರೂ ಮಾಡಬೇಕು ಎನ್ನುತ್ತಿದ್ದಾಗ ಈ ಐಡಿಯಾ ಹೊಳೆದಿದೆ. ನವೀನ್ ಮೂಲತಃ ಬೆಂಗಳೂರಿನ ಮಾಗಡಿಯವರಾಗಿದ್ದು ಇವರ ಮದುವೆಯ ಆಮಂತ್ರಣ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಷ್ಟೇ ಅಲ್ಲದೇ ಟ್ವಿಟ್ಟರಿನಲ್ಲಿ ಪುನೀತ್ ರಾಜ್‍ಕುಮಾರ್ ನವೀನ್ ಹಾಗೂ ರಶ್ಮಿ ಜೋಡಿಗೆ ಶುಭಾಶಯ ಕೋರಿದ್ದಾರೆ. ನವೀನ್ ಹಾಗೂ ರಶ್ಮಿ ಮದುವೆ ಇದೇ ತಿಂಗಳು ಜೂನ್ 17 ಹಾಗೂ 18ರಂದು ನಡೆಯಲಿದೆ.

Please follow and like us:
0
http://bp9news.com/wp-content/uploads/2018/06/puneet.jpghttp://bp9news.com/wp-content/uploads/2018/06/puneet-150x150.jpgBP9 Bureauಪ್ರಮುಖಸಿನಿಮಾಬೆಂಗಳೂರು: ‘ಆಕಾಶ್’ ವೇ ಚಪ್ಪರ, ‘ಪೃಥ್ವಿ’ ಯೇ ಹಸೆಮಣೆ, ಮದುವೆಯೇ ‘ಮಿಲನ’, ರಶ್ಮಿ‘ನಿನ್ನಿಂದಲೇ’  ಈ ನವೀನ ‘ಮೈತ್ರಿ’ ಬದುಕಿಗೆ ‘ಹೊಸ ಬೆಳಕು’ ಪ್ರೀತಿ. ‘ಪರಮಾತ್ಮ’ನ ಸ್ಮರಿಸುತ್ತಾ, ನಮ್ಮೆಲ್ಲರ ‘ಅಭಿ’ಮಾನದ ಆಶೀರ್ವಾದ ಬಯಸುತ್ತಿರುವ ‘ಎರಡು ನಕ್ಷತ್ರಗಳು’ ನವೀನ್ ಕುಮಾರ್, ರಶ್ಮಿ ‘ಬಿಂದಾಸ್’ ಆಗಿ ಬನ್ನಿ. ಆರತಕ್ಷತೆಯ ‘ಅಪ್ಪು’ಗೆ ಮೂಹೂರ್ತದ ‘ಪವರ್’ ಎಂದು ಹೀಗೆ ಪುನೀತ್ ಅವರ ಎಲ್ಲ ಸಿನಿಮಾ ಹೆಸರನ್ನು ಬಳಸಿಕೊಂಡು ಆಮಂತ್ರಣ ಪತ್ರಿಕೆ ರೆಡಿ ಮಾಡಿಸಿದ್ದಾರೆ ಇಲ್ಲೊಬ್ಬ ಅಪ್ಪು...Kannada News Portal