ಚಾಲೆಂಜಿಂಗ್​  ಸ್ಟಾರ್​ ಇತ್ತೀಚಿಗಂತೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಒಂದು ಕಡೆ  ತಮ್ಮ ಸಿನಿಮಾಗಳ  ಮೂಲಕ ಸುದ್ದಿಯಾದ್ರೆ ಮತ್ತೊಂದು ಕಡೆ ತಾವು ಕೈಗೊಳ್ಳುತ್ತಿರುವ  ಸಾಮಾಜಿಕ ಕಾರ್ಯಗಳ ಬಗ್ಗೆ . ಅಂದಹಾಗೇ ನಟ ದರ್ಶನ್​ಗೆ ಪ್ರಾಣಿ ಅಂದ್ರೇನೆ ಬಲು ಪ್ರಿತಿ. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​​ ಬೆಂಗಳೂರಿನ ದೇವಾಲಯವೊಂದಕ್ಕೆ ಭೇಟಿ ನೀಡಿ, ದೇವರ ಆರ್ಶೀವಾದ ಪಡೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಆ  ದೇವಿಗೆ ತಮಗಿಷ್ಟವಾದ ಮುದ್ದು ಉಡುಗೊರೆಗಳನ್ನು ಕೊಟ್ಟಿದ್ದಾರೆ. ಅಂದಹಾಗೇ ದರ್ಶನ್​ ಅವರು ಭೇಟಿ ನೀಡಿರುವ ಬೇಂಗಳೂರಿನ ಚಾಮರಾಜಪೇಟೆಯ ಬಂಡಿ ಮಹಾ ಕಾಳಿಯಮ್ಮ ದೇವಾಲಯಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕಷ್ಟು ಬಾರಿ ಭೇಟಿ ನೀಡಿ ಅಮ್ಮನವನವರ ದರ್ಶನ ಪಡೆದಿದ್ದಾರೆ.

ಇದೀಗ ಸ್ಯಾಂಡಲ್​ವುಡ್​ನ  ಡಿ ಬಾಸ್​ ಆ ದೇವಾಲಯಕ್ಕೆ ಭೇಟಿ ನೀಡಿ, ಅಮ್ಮನವರ ದರ್ಶನ ಪಡೆದುಕೊಂಡು ಪ್ರತಿಯಾಗಿ ಆ ದೇವಾಲಯದ ಅರ್ಚಕರಿಗೆ ಮುದ್ದಾದ ಎರಡು ಚೀನಿ  ತಳಿಯ ನಾಯಿಮರಿಗಳನ್ನು ಕೊಟ್ಟಿದ್ದಾರೆ.

ದರ್ಶನ್​ ದೇವಾಲಯಕ್ಕೆ ಈ ರೀತಿ ಉಡುಗೊರೆ ಸಲ್ಲಿಸಿರುವುದರ ಹಿಂದೆ ಒಂದು ವಿಶೇಷತೆ ಅಡಗಿದೆ ಎನ್ನುತ್ತಾರೆ ಅವರ ಅಭಿಮಾನಿಗಳು. ಅವರಿಗೆ ಪ್ರಾಣಿ-ಪಕ್ಷಿಗಳನ್ನು ಸಾಕುವುದಂದ್ರೆ ಬಲು ಇಷ್ಟ. ಅದಕ್ಕಾಗಿಯೇ ತಮ್ಮ ಫಾರ್ಮ್​ ಹೌಸ್​ನಲ್ಲೂ ಹಲವು ಜಾತಿಯ ಪ್ರಾಣಿಗಳನ್ನು ತಂದು ಸಾಕುತ್ತಿದ್ದಾರೆ. ಇನ್ನು ಮೈಸೂರಿನ ಮೃಗಾಲಯದ ಅಂಬಾಸಿಡರ್​ ಆಗಿಯೂ ಆಯ್ಕೆಯಾಗಿದ್ದಾರೆ. ಬೇರೆ ಯಾವ  ಉಡುಗೊರೆಯನ್ನು ನೀಡದ  ದರ್ಶನ್​ ದೇವಾಲಯಕ್ಕೆ ನಾಯಿಮರಿಗಳನ್ನು  ಕಾಣಿಕೆಯಾಗಿ ನೀಡಿದ್ದಾರೆ.  ಈ ಬಗ್ಗೆ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿರುವ ಆ ದೇವಾಲಯದ  ಅರ್ಚಕರು  ದರ್ಶನ್​ ಕೊಟ್ಟ ನಾಯಿಮರಿ ಕಾಣಿಕೆ ಜೊತೆಗಿನ ಕೆಲ ಫೋಟೋಗಳನ್ನು  ಶೇರ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/darshan-in-ambareesha_140412770930.7da360-1.jpghttp://bp9news.com/wp-content/uploads/2018/06/darshan-in-ambareesha_140412770930.7da360-1-150x150.jpgBP9 Bureauಸಿನಿಮಾಚಾಲೆಂಜಿಂಗ್​  ಸ್ಟಾರ್​ ಇತ್ತೀಚಿಗಂತೂ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಒಂದು ಕಡೆ  ತಮ್ಮ ಸಿನಿಮಾಗಳ  ಮೂಲಕ ಸುದ್ದಿಯಾದ್ರೆ ಮತ್ತೊಂದು ಕಡೆ ತಾವು ಕೈಗೊಳ್ಳುತ್ತಿರುವ  ಸಾಮಾಜಿಕ ಕಾರ್ಯಗಳ ಬಗ್ಗೆ . ಅಂದಹಾಗೇ ನಟ ದರ್ಶನ್​ಗೆ ಪ್ರಾಣಿ ಅಂದ್ರೇನೆ ಬಲು ಪ್ರಿತಿ. ಇತ್ತೀಚಿಗೆ ಚಾಲೆಂಜಿಂಗ್ ಸ್ಟಾರ್​ ದರ್ಶನ್​​ ಬೆಂಗಳೂರಿನ ದೇವಾಲಯವೊಂದಕ್ಕೆ ಭೇಟಿ ನೀಡಿ, ದೇವರ ಆರ್ಶೀವಾದ ಪಡೆದುಕೊಂಡು ಬಂದಿದ್ದಾರೆ. ಅಷ್ಟೇ ಅಲ್ಲ ಆ  ದೇವಿಗೆ ತಮಗಿಷ್ಟವಾದ ಮುದ್ದು ಉಡುಗೊರೆಗಳನ್ನು ಕೊಟ್ಟಿದ್ದಾರೆ. ಅಂದಹಾಗೇ ದರ್ಶನ್​ ಅವರು...Kannada News Portal