ಬೆಂಗಳೂರು : ಈ ಬಾರಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎಂಬ ವದಂತಿಗೆ  ತೆರೆಬಿದ್ದಿದೆ. ಮತ್ತೊಮ್ಮೆ ಏಷ್ಯಾದ ಅತಿದೊಡ್ಡ ಏರ್​ ಶೋಗೆ ಬೆಂಗಳೂರು ಸಾಕ್ಷಿಯಾಗಲಿದೆ.

ಕೊನೆಗೂ ಕನ್ನಡಿಗರ ಬೇಡಿಕೆ ಮತ್ತು ಹೋರಾಟಕ್ಕೆ ಜಯಸಿಕ್ಕಿದಂತಾಗಿದೆ, ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ಸರ್ಕಾರ ಬೆಂಗಳೂರನಲ್ಲೇ ಏರೋ ಇಂಡಿಯಾ ಪ್ರದರ್ಶನ ನಡೆಸಲು ತೀರ್ಮಾನಿಸಿದೆ. 2019ರ ಫೆಬ್ರವರಿ 20ರಿಂದ 24ರವರೆಗೆ​ ಯಲಹಂಕದಲ್ಲಿ ಏರ್​ ಶೋ ನಡೆಯಲಿದೆ.

ಕಳೆದ ತಿಂಗಳಿನಲ್ಲಿ ಕೇಂದ್ರ ರಕ್ಷಣಾ ಇಲಾಖೆಯ ಮೂಲಗಳು ಏರೋ ಇಂಡಿಯಾ ಈ ಬಾರಿ ಉತ್ತರ ಪ್ರದೇಶದ ಲಖನೌ ನಗರಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಿತ್ತು. ಅತ್ತ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ವೈಮಾನಿಕ ಪ್ರದರ್ಶನವನ್ನು ಲಖನೌನಲ್ಲಿ ನಡೆಸಲು ಅನುಮತಿ ನೀಡುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​ ಅವರ ಬಳಿ ಕೇಳಿದ್ದರು ಎಂಬ ಸುದ್ದಿಯೂ ಹೊರಬಿದ್ದಿತ್ತು.

ಇದಕ್ಕೆ ರಾಜ್ಯ ರಾಜಕೀಯದಿಂದ ಮತ್ತು ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಖುದ್ದು ಸಿಎಂ ಕುಮಾರಸ್ವಾಮಿಯವರೇ ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.  ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ನಿರ್ಮಲಾ ಸೀತಾರಾಮನ್​ ಅವರ ಬಳಿ ಈ ಬಗ್ಗೆ ಮನವಿ ಮಾಡಿದ್ದರು. ಟ್ವಿಟ್ಟರ್​ನಲ್ಲಿ ಅಭಿಯಾನವೂ ನಡೆದಿತ್ತು. ಇದೆಲ್ಲದರ ಪ್ರತಿಫಲವಾಗಿ   ಕರ್ನಾಟಕದಲ್ಲೇ ಈ ಬಾರಿಯ ವೈಮಾನಿಕ ಪ್ರದರ್ಶನ ನಡೆಸಲು ತೀರ್ಮಾನಿಸಲಾಗಿದೆ.

Please follow and like us:
0
http://bp9news.com/wp-content/uploads/2018/09/air-show-2.jpghttp://bp9news.com/wp-content/uploads/2018/09/air-show-2-150x150.jpgBP9 Bureauಪ್ರಮುಖಬೆಂಗಳೂರುರಾಜಕೀಯರಾಷ್ಟ್ರೀಯvar domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','33'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_3320180903135112'); document.getElementById('div_3320180903135112').appendChild(scpt); ಬೆಂಗಳೂರು : ಈ ಬಾರಿಯ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಉತ್ತರ ಪ್ರದೇಶದ ಲಖನೌನಲ್ಲಿ ನಡೆಯಲಿದೆ ಎಂಬ ವದಂತಿಗೆ  ತೆರೆಬಿದ್ದಿದೆ. ಮತ್ತೊಮ್ಮೆ ಏಷ್ಯಾದ ಅತಿದೊಡ್ಡ ಏರ್​ ಶೋಗೆ ಬೆಂಗಳೂರು ಸಾಕ್ಷಿಯಾಗಲಿದೆ. ಕೊನೆಗೂ ಕನ್ನಡಿಗರ ಬೇಡಿಕೆ ಮತ್ತು...Kannada News Portal