ಮಂಗಳೂರು: ಆಷಾಡ ಕಳೆದು ಶ್ರಾವಣ ಬಂದಿದೆ. ಶ್ರಾಣಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನೂ ತುಳುನಾಡಿನಲ್ಲಿ ಈ ಮೊದಲ ಹಬ್ಬ ನಾಗರಪಂಚಮಿಯನ್ನ ತುಸು ಹೆಚ್ಚಿಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರಾವಳಿಯ ವಿವಿಧ ನಾಗನ ಸನ್ನಿಧಿಗಳಲ್ಲಿ ಲಕ್ಷಾಂತರ ಭಕ್ತರು ಹಾಲು, ಎಳನೀರು ಅರ್ಪಿಸಿ ನಾಗನಿಗೆ ಪೂಜೆ ಸಲ್ಲಿಸಿದರು.ಕುಡುಪು ಅನಂತಪದ್ಮನಾಭ ದೇವಸ್ಥಾನ ಹಾಗೂ ಇತಿಹಾಸ ಪ್ರಸಿದ್ದ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲೂ ಜನಸಾಗರದ ಸಮ್ಮುಖದಲ್ಲಿ ನಾಗಾರಾಧನೆ ಸಂಭ್ರಮದಿಂದ ನೆರವೇರಿತು.

ನಾಗರ ಪಂಚಮಿಯನ್ನು ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಕರಾವಳಿಯಲ್ಲಿ ನಾಗಪಂಚಮಿ ಅಂದರೆ ಹಬ್ಬಗಳ ಆರಂಭ. ಪ್ರಕೃತಿ ಪೂಜೆಯ ಸಂಕೇತವಾಗಿರುವ ಈ ಹಬ್ಬ ಸಂತಾನ ಅಭಿವೃದ್ಧಿ, ಕೌಟುಂಬಿಕ ನೆಮ್ಮದಿಗಾಗಿ ಲಕ್ಷಾಂತರ ಭಕ್ತರು ಪೂಜೆ ಸಲ್ಲಿಸುತ್ತಿದ್ದಾರೆ.

ನಾಗರ ಪಂಚಮಿ ನಾಡಿಗೆ ದೊಡ್ಡದು… ನಾರಿಯರೆಲ್ಲಾ ಕುಣಿದಾಡಿದರು… ಎಂಬ ಮಾತು ಧಾರ್ಮಿಕ ವಲಯದಲ್ಲೂ ಜನಪ್ರಿಯ. ಪಂಚಮಿ ಆಚರಣೆಯ ಮಹತ್ವವನ್ನು ಇದು ಸೂಚಿಸುತ್ತದೆ.

ಆಷಾಡ ಮುಗಿದ ಬಳಿಕ ಬರುವ ಶ್ರಾವಣದ ಪಂಚಮಿಯಂದು ನಾಗನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕೃತಿ ದ್ಯೋತಕವಾಗಿ ಬೃಹತ್ ಮರಗಳ ನಡುವೆ ದಟ್ಟ ಕಾನನದ ಬನಗಳಲ್ಲಿ ಇರುವ ನಾಗನಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸುವುದು ಸಂಪ್ರದಾಯ. ಇದರಿಂದ ನಾಗಬ್ರಹ್ಮ ಸಂತೃಪ್ತನಾಗುತ್ತಾನೆ ಎಂಬುದು ಭಕ್ತರ ನಂಬಿಕೆ.

ಜಿಲ್ಲೆಯ ಪ್ರಮುಖ ನಾಗಾರಾಧನಾ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ ಸಡಗರ ಸಂಭ್ರಮ ಮನೆ ಮಾಡಿದೆ. ಮುಂಜಾನೆಯಿಂದಲೇ ಭಕ್ತ ಜನಸಾಗರ ಹರಿದು ಬಂದಿದ್ದು, ಆದಿಶೇಷನಿಗೆ ಹಾಲಿನ ಅಮೃತ, ಎಳನೀರು ಸಮರ್ಪಿಸಿ ಸಂತುಷ್ಟಿಗೊಳಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ದೇವರ ಆಶೀರ್ವಾದ ಪಡೆದರು.

ನಾಗ ಸಂತಾನಾಭಿವೃದ್ಧಿಯ ಸಂಕೇತ ಕೂಡ. ಮಕ್ಕಳಾಗದವರು ವಿಶೇಷವಾಗಿ ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ, ಜೊತೆಗೆ ಕೌಟುಂಬಿಕ ನೆಮ್ಮದಿ, ಐಶ್ವರ್ಯ ವೃದ್ಧಿಗಾಗಿಯೂ ನಾಗನನ್ನು ಪೂಜಿಸುತ್ತಾರೆ ಎಂದು ಪುರಾಣಗಳಲ್ಲಿ ಉಲ್ಲೇಖ ಇದೆ.

ವರದಿ: ಅನುಶ್ ಕೊಟ್ಟಾರಿ ಮಂಗಳೂರು

Please follow and like us:
0
http://bp9news.com/wp-content/uploads/2017/07/WhatsApp-Image-2017-07-27-at-10.43.06-AM-1024x576.jpeghttp://bp9news.com/wp-content/uploads/2017/07/WhatsApp-Image-2017-07-27-at-10.43.06-AM-150x150.jpegBP9 Bureauಆಧ್ಯಾತ್ಮಪ್ರಮುಖಮಂಗಳೂರು: ಆಷಾಡ ಕಳೆದು ಶ್ರಾವಣ ಬಂದಿದೆ. ಶ್ರಾಣಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನ ಎಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇನ್ನೂ ತುಳುನಾಡಿನಲ್ಲಿ ಈ ಮೊದಲ ಹಬ್ಬ ನಾಗರಪಂಚಮಿಯನ್ನ ತುಸು ಹೆಚ್ಚಿಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕರಾವಳಿಯ ವಿವಿಧ ನಾಗನ ಸನ್ನಿಧಿಗಳಲ್ಲಿ ಲಕ್ಷಾಂತರ ಭಕ್ತರು ಹಾಲು, ಎಳನೀರು ಅರ್ಪಿಸಿ ನಾಗನಿಗೆ ಪೂಜೆ ಸಲ್ಲಿಸಿದರು.ಕುಡುಪು ಅನಂತಪದ್ಮನಾಭ ದೇವಸ್ಥಾನ ಹಾಗೂ ಇತಿಹಾಸ ಪ್ರಸಿದ್ದ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲೂ ಜನಸಾಗರದ ಸಮ್ಮುಖದಲ್ಲಿ...Kannada News Portal