ಬಾಲಿವುಡ್​ನ ಬಾಕ್ಸ್​ ಆಫೀಸ್​ನ ” ಸಂಜು”  ಸಿನಿಮಾದಲ್ಲಿ  ಇಂಟ್ರೆಸ್ಟಿಂಗ್​ ವಿಚಾರಗಳು, ಮನಸಿನ ಮೂಲೆಯಲ್ಲಿ  ಉಳಿದುಕೊಂಡು ಬಿಡುತ್ತವೆ. ಇನ್ನೂ ಕೆಲವು ಅರ್ಥಕ್ಕೆ  ಸಿಲುಕದಷ್ಟೂ ತರ್ಕಕ್ಕೆ ಒಳಗಾಗಿ ಬಿಡುತ್ತವೆ ಇದನ್ನು ಸ್ವತಃ ನಿರ್ದೇಶಕ ಹಿರಾನಿಯವರೇ ಸಂದರ್ಶನವೊಂದರಲ್ಲಿ  ಹೇಳಿಕೊಂಡಿದ್ದರು.  ಸಂಜು ಸಿನಿಮಾ ನೋಡಿದ ಅಭಿಮಾನಿಗಳ ಅಭಿಪ್ರಾಯವೂ ಇದೇ  ಆಗಿದೆ.

ಬಾಲಿವುಡ್​ ಚಿತ್ರರಂಗ ಕಂಡಂತಹ ಒಂದು ಅದ್ಭುತ ಶಕ್ತಿ ಸಂಜಯ್​ ದತ್​.  ವಿಚಿತ್ರ ಆದ್ರೂ, ವಿಶೇಷ ವ್ಯಕ್ತಿತ್ವ ಸಂಜಯ್​ ದತ್ ಅವರದ್ದು. ​ ಆತ್ಮಕಥಾ ಸಿನಿಮಾವಾಗಿ ರಿಲೀಸ್​ ಆಗಿ ಯಶಸ್ಸು ಕಾಣುತ್ತಿದೆ.   ಈ ನಡುವೆ ಸಂಜು ತಂದೆ ಸುನೀಲ್​ ಅವರ ಬಗ್ಗೆ ಮಾತನಾಡಿದ, ಸಂಜು ಸಿನಿಮಾದಲ್ಲಿ ಸುನೀಲ್​ ಪಾತ್ರ ನಿರ್ವಹಿಸಿರುವ ಪರೇಶ್​ ಅವರೇ ಹೇಳಿರುವ ಪ್ರಕಾರ……

ಸಂಜಯ್​ ಅವರ ತಂದೆ ಸುನೀಲ್​ ದತ್​ ಅವರಿಗೆ ಈ ಥರದ ಮಗನ  ಲೈಫ್​ ಇಟ್ಟುಕೊಂಡು ಸಿನಿಮಾ ಬರುತ್ತದೆ ಎಂದು ಮೊದಲೇ ತಿಳಿದಿತ್ತು ಎಂದು ಕಾಣುತ್ತದೆ. ಅದಕ್ಕಾಗಿಯೇ ಅವರು ಸಂಜು ಸಿನಿಮಾದಲ್ಲಿ ಸಂಜು ತಂದೆಯ ಪಾತ್ರ ನಿರ್ವಹಿಸಿರುವ ಪರೇಶ್​ ರಾವಲ್​​​ ಅವರಿಗೆ ಲೆಟರ್​ ಒಂದನ್ನು ಬರೆದಿದ್ದರಂತೆ.  ಮೇ. 25 , 2005 ರಲ್ಲಿ  ಪರೇಶ್​ ಮನೆಗೆ ಒಂದು ಲೆಟರ್​ ಬಂದಿತ್ತಂತೆ.

ಆ ಸಮಯದಲ್ಲಿ ಪರೇಶ್​ ಮನೆಯಲ್ಲಿ ಇರಲಿಲ್ಲ. ಬದಲಾಗಿ ಪರೇಶ್​ ಪತ್ನಿ ಆ ಲೆಟರ್​ ಅನ್ನು ಸ್ವೀಕರಿಸಿದ್ದಾರೆ. ಆ ಲೆಟರ್​ ಓದುತ್ತಿರುವಾಗಲೇ, ಪತಿ ಪರೇಶ್​ ರಿಂದ ಫೋನ್​ ಕಾಲ್​ ಬಂದಿತ್ತು. ಪರೇಶ್​, ನಾನು ಮನೆಗೆ ಲೇಟ್​ ಆಗಿ ಬರುತ್ತೇನೆ, ಸುನೀಲ್​ ದತ್​ ತೀರಿ ಹೋಗಿದ್ದಾರೆ. ಅಲ್ಲಿಗೆ ಹೋಗಿ ಬರುತ್ತೇನೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿ ತಬ್ಬಿಬ್ಬಾದ ಪರೇಶ್​ ಪತ್ನಿ,  ಪರೇಶ್​ ಅವರನ್ನು ಉದ್ದೇಶಿಸಿ ಸುನೀಲ್​ ದತ್​ ಅವರೇ ಒಂದು ಪತ್ರ ಬರೆದಿದ್ದಾರೆ. ಅಲ್ಲಿ ನಿಮ್ಮ ಬರ್ತ್​ ಡೇಗೆ ವಿಶ್​ ಮಾಡಿದ್ದಾರೆ. ಆ ಪತ್ರವನ್ನೇ ನಾನು ಓದುತ್ತಿದ್ದೇನೆ ಎಂದರು. ಪರೇಶ್​ಗೆ ಆಶ್ಚರ್ಯವಾಗುತ್ತದೆ. ಯಾವತ್ತೂ ಪತ್ರ ಬರೆಯದ, ಹುಟ್ಟುಹಬ್ಬಕ್ಕೆ ವಿಶ್​ ಮಾಡದ ಸುನೀಲ್​ ದತ್​, 5 ದಿನ ಮುಂಚಿತವಾಗಿಯೇ ಈ ಲೆಟರ್​ ಬರೆದ ಉದ್ದೇಶ ಏನು ಎಂಬುದನ್ನು ತಲೆಕೆಡಿಸಿಕೊಳ್ಳುತ್ತಾರೆ.

ಆ ನಂತರ ಆ ಪತ್ರದಲ್ಲಿ ಬಂದಂತಹ ವಿಚಾರವನ್ನು ಯಾರಿಗೂ  ಹೇಳದೇ ಆ ಪತ್ರವನ್ನು ಗುಟ್ಟಾಗಿಯೇ ಇಟ್ಟರು.  2017 ರ ಜನವರಿ 3 ರಂದು ಮತ್ತೊಂದು ಆಶ್ಚರ್ಯ ಕಾದಿತ್ತು ಪರೇಶ್​ ಅವರಿಗೆ. ನಿರ್ದೇಶಕ ರಾಜ್​ ಕುಮಾರ್​ ಇರಾನಿ, ಸಿನಿಮಾ ವಿಚಾರವಾಗಿ ಪರೇಶ್​ ಅವರನ್ನು ಭೇಟಿಯಾಗಲೆಂದು ತಮ್ಮ ಡಾಕ್ಯುಮೆಂಟ್ಸ್​ ಸಮೇತ  ಹೋಗಿರುತ್ತಾರೆ. 12 ವರ್ಷಗಳ ಹಿಂದೆ  ಬರೆದ ಪತ್ರವನ್ನು ಮತ್ತೊಮ್ಮೆ ನೋಡುತ್ತಾರೆ. ಹಿರಾನಿ , ಪರೇಶ್​ ಅವರನ್ನು  ಸಂಜಯ್​ ದತ್​ ಅವರ ತಂದೆ ಸುನೀಲ್​ ದತ್​ ಅವರ ಪಾತ್ರವನ್ನು ನಿರ್ವಹಿಸಲು ಕೇಳಿಕೊಂಡು ಬಂದಿರುತ್ತಾರೆ.

ಪರೇಶ್​ ರಾವಲ್​​ಗೆ ಕ್ಷಣ ಆಶ್ಚರ್ಯವಾಗುತ್ತದೆ. ಹೋ, ಮಗನ ಸಿನಿಮಾಗಾಗಿಯೇ ಸುನೀಲ್​ ನನಗೆ  ಬರ್ತ್​ ಡೇ ನೆಪದಲ್ಲಿ ಪತ್ರ  ಬರೆದಿದ್ದಾರೆ ಎಂಬುದು. ಇದೊಂದು ನನಗೆ ಆಶ್ಚರ್ಯ  ಆಗಿದ್ದಂತೂ ಸತ್ಯ ಎಂದು ಪರೇಶ್​ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/07/sanjay_dutt_3.jpeghttp://bp9news.com/wp-content/uploads/2018/07/sanjay_dutt_3-150x150.jpegBP9 Bureauಸಿನಿಮಾಬಾಲಿವುಡ್​ನ ಬಾಕ್ಸ್​ ಆಫೀಸ್​ನ '' ಸಂಜು''  ಸಿನಿಮಾದಲ್ಲಿ  ಇಂಟ್ರೆಸ್ಟಿಂಗ್​ ವಿಚಾರಗಳು, ಮನಸಿನ ಮೂಲೆಯಲ್ಲಿ  ಉಳಿದುಕೊಂಡು ಬಿಡುತ್ತವೆ. ಇನ್ನೂ ಕೆಲವು ಅರ್ಥಕ್ಕೆ  ಸಿಲುಕದಷ್ಟೂ ತರ್ಕಕ್ಕೆ ಒಳಗಾಗಿ ಬಿಡುತ್ತವೆ ಇದನ್ನು ಸ್ವತಃ ನಿರ್ದೇಶಕ ಹಿರಾನಿಯವರೇ ಸಂದರ್ಶನವೊಂದರಲ್ಲಿ  ಹೇಳಿಕೊಂಡಿದ್ದರು.  ಸಂಜು ಸಿನಿಮಾ ನೋಡಿದ ಅಭಿಮಾನಿಗಳ ಅಭಿಪ್ರಾಯವೂ ಇದೇ  ಆಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute...Kannada News Portal