ಬೆಂಗಳೂರು : ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸಲು ನೀವು ಮುಂದಾಗಿದ್ದರೆ ಆ ರಸ್ತೆಯ ಕಡೆ ಹೋಗಬೇಡಿ. ಭಾರಿ ಮಳೆಯ ಕಾರಣ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಅಲ್ಲದೆ ಈಗಾಗಲೇ ರಸ್ತೆಯಲ್ಲಿ ನಿಂತಿರುವ ವಾಹನಗಳು ನಿಂತಲ್ಲೇ ನಿಂತಿದ್ದು, ನೂರಾರು ಮಂದಿ ತಮ್ಮ ವಾಹನ ಸಮೇತ ಕಳೆದ 16 ಗಂಟೆಗಳಿಂದ ಅಲ್ಲಿಯೇ ಕಾಲ ಕಳೆಯುವಂತಾಗಿದೆ. ಇದೀಗ ಮತ್ತಷ್ಟ ಆ ಪ್ರಾಂತ್ಯದಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ತಗ್ಗಾದ ರಸ್ತೆಗೆ ನದಿಗಾತ್ರದ ನೀರು ಹರಿಯುತ್ತಿದ್ದು ವಾಹನ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ರಸ್ತೆಯಲ್ಲಿ ಆ ಮಳೆ ನೀರಿನಲ್ಲಿ ಸಿಲುಕಿರುವವರ ಸ್ಥಿತಿ ಚಿಂತಾಜನಿವಾಗಿದೆ.

ಅದರಲ್ಲೂ ವಯಸ್ಸಾದವರು ಹಾಗೂ ಮಕ್ಕಳು ಆಹಾರವಿಲ್ಲದೆ ಪರಿತಪಿಸುವಂತಾಗಿದೆ. ಘಾಟ್ ನಲ್ಲಿ ಸಿಲುಕಿಬಿದ್ದವರ ನೆರವಿಗೆ ಸ್ಥಳೀಯರು ಧಾವಿಸಿದ್ದು, ಬ್ರೆಡ್, ಹಾಲು ಹಾಗೂ ಬಿಸ್ಕೇಟ್ ಪೂರೈಸಿದ್ದಾರೆ. ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸಲು ಮುಂದಾದವರಿಗೆ ಬದಲಿ ಮಾರ್ಗಗಳನ್ನು ಸೂಚಿಸಲಾಗಿದೆ. ರಸ್ತೆಯಲ್ಲಿ ಬಿದ್ದಿರುವ ಮಣ್ಣು ತೆರವುಗೊಳಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ.

Please follow and like us:
0
http://bp9news.com/wp-content/uploads/2018/06/What-water-in-Ayapa-Charmed-Ghat-Traffic-is-coming-Karnatakada-Miditha.jpeghttp://bp9news.com/wp-content/uploads/2018/06/What-water-in-Ayapa-Charmed-Ghat-Traffic-is-coming-Karnatakada-Miditha-150x150.jpegPolitical Bureauಪ್ರಮುಖWhat water in Ayapa Charmed Ghat ??? Traffic is coming !!!ಬೆಂಗಳೂರು : ಚಾರ್ಮಾಡಿ ಘಾಟ್ ಮೂಲಕ ಪ್ರಯಾಣಿಸಲು ನೀವು ಮುಂದಾಗಿದ್ದರೆ ಆ ರಸ್ತೆಯ ಕಡೆ ಹೋಗಬೇಡಿ. ಭಾರಿ ಮಳೆಯ ಕಾರಣ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ರಸ್ತೆ ಸಂಚಾರ ಬಂದ್ ಆಗಿದೆ. ಅಲ್ಲದೆ ಈಗಾಗಲೇ ರಸ್ತೆಯಲ್ಲಿ ನಿಂತಿರುವ ವಾಹನಗಳು ನಿಂತಲ್ಲೇ ನಿಂತಿದ್ದು, ನೂರಾರು ಮಂದಿ ತಮ್ಮ ವಾಹನ ಸಮೇತ ಕಳೆದ 16 ಗಂಟೆಗಳಿಂದ ಅಲ್ಲಿಯೇ ಕಾಲ ಕಳೆಯುವಂತಾಗಿದೆ. ಇದೀಗ ಮತ್ತಷ್ಟ ಆ ಪ್ರಾಂತ್ಯದಲ್ಲಿ ವರುಣನ ಆರ್ಭಟ...Kannada News Portal