ಬಾಲಿವುಡ್​ನ  ಕಿಂಗ್​ಖಾನ್​ ಶಾರುಖ್​ ಖಾನ್​  ಸುದ್ದಿಯಾಗಿದ್ದಿಕ್ಕಿಂತ ಮಗಳೇ ಸುದ್ದಿಯಾಗಿದ್ದೇ ಹೆಚ್ಚು. ಸದ್ಯ ಸುಹಾನ್​ ಖಾನ್​ ಹುಡುಗನೊಂದಿಗೆ ಆತ್ಮೀಯವಾಗಿರುವ ಫೋಟೋವೊಂದು ವೈರಲ್​ ಆಗಿದೆ.   ಸುಹಾನಾ ಖಾನ್​  ಸ್ನೇಹಿತರ ಜೊತೆ ಓಡಾಟ-ಅವಳ ಡ್ರೆಸ್​, ಮೇಕಪ್​ ಹೀಗೆ ಎಲ್ಲಾ  ವಿಚಾರದಲ್ಲೂ ಶಾರುಖ್​ ಪುತ್ರಿ ಗಾಸಿಪ್​ಗೆ ಒಳಗಾಗುತ್ತಲೇ ಇದ್ದಾರೆ.   ಸ್ವಲ್ಪ ದಿನಗಳ ಹಿಂದಷ್ಟೇ ಸುಹಾನಖಾನ್​ ರಿಗೆ ಅಪ್ಪ ಶಾರುಖ್​ ಬರ್ತ್​ ಡೆ ವಿಶ್​ ಮಾಡಿ ಸ್ಟೇಟ್​ಮೆಂಟ್​ವೊಂದನ್ನು ಹೇಳಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ನೆಟ್ಟಿಗರಿಂದ ಟ್ರೋಲ್​ಗೂ ಒಳಗಾಗಿತ್ತು. ಸದ್ಯ ಮತ್ತೆ  ಸುದ್ದಿಯಲ್ಲಿದ್ದಾರೆ  ಶಾರುಖ್​ ಪುತ್ರಿ ಸುಹಾನಾ ಖಾನ್​.

ಇನ್ನು ಗೌರಿಖಾನ್​ ಕೂಡ ಮಗಳಿಗೆ ಫೋಟೋ  ಶೂಟ್​ ಮಾಡಿಸಿರುವ, ಅವಳ ಕೆಲ ಫೋಟೋಗಳನ್ನು ಇನ್ಸ್​ ಟ್ರಾಗ್ರಾಂ ಮೂಲಕ ಶೇರ್​ ಮಾಡುತ್ತಾರೆ. ಯಾವ ಸಿನಿಮಾದಲ್ಲೂ ನಟಿಸದ  ಸುಹಾನಾ ಖಾನ್​ ಗೆ ಹೀಗಾಗಲೇ ದೊಡ್ಡ ಅಭಿಮಾನಿಗಳ ಬಳಗವೇ  ಹುಟ್ಟಿಕೊಂಡಿದೆ. ಸದ್ಯ ಕಳೆದ ರಾತ್ರಿ  ಸುಹಾನಾ ತನ್ನ ಕಾಲೇಜಿನ ಸ್ನೇಹಿತರೊಂದಿಗೆ ಪಾರ್ಟಿ  ಮಾಡಿಕೊಂಡಿದ್ದಾರೆ. ಅದರ ಕೆಲ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದು  ಇದೀಗ ಭಾರೀ  ಚರ್ಚೆಗೆ  ಗ್ರಾಸವಾಗಿದೆ.

ಅದು ಇಂಗ್ಲೆಂಡಿನಲ್ಲೇ  ಆರ್ಡಿಂಗ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸುಹಾನಾ ಅವರ ಕಾಲೇಜಿನ ಪಾರ್ಟಿಯಲ್ಲಿ ತೆಗೆದ ಚಿತ್ರಗಳು.  ಅದರಲ್ಲೂ ವಿದೇಶಿ ಯುವಕನನ್ನು ಆಲಂಗಿಸಿಕೊಂಡಿರುವ ಫೋಟೋ ಒಂದು ಈಗ ವೈರಲ್​ ಆಗುತ್ತಿದ್ದು, ಆ ಯುವಕನ ಕುರಿತಾಗಿ ತಿಳಿಯಲು ಸಾಕಷ್ಟು ಜಾಲತಾಣಿಗಳು ಉತ್ಸುಕರಾಗಿದ್ದಾರೆ. ಆ ಯುವಕನಿಗೂ ಸುಹಾನ್​ಗೂ ಎಂಥಹ ಸಂಬಂಧವಿದೆ ಎಂಬುದೇ  ಸಾಮಾಜಿಕ ಜಾಲತಾಣಗಳ ಫಾಲೋಯರ್ಸ್​​ ಕೌತುಕ.​  ಅಂದಹಾಗೇ ಈ ಎಲ್ಲಾ ಫೋಟೋಗಳು ಪೋಸ್ಟ್​ ಆಗಿದ್ದು ಅಮ್ಮ ಗೌರಿ ಖಾನ್​ ಅವರ ಟ್ವಿಟ್ಟರ್​ ಖಾತೆ ಮೂಲಕ.

ಆದರೆ ಸಾಮಾಜಿಕ ಜಾಲತಾಣಿಗರು ಎಷ್ಟೇ ಹುಡುಕಾಟ ನಡೆಸಿದರೂ ಆ ಹುಡುಗನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆತ ಸುಹಾನಾ ಅವರ ಕಾಲೇಜಿನಲ್ಲೇ ಓದುತ್ತಿರುವ ವಿದ್ಯಾರ್ಥಿ ಎಂದು ಮಾತ್ರ ತಿಳಿದು ಬಂದಿದೆ.

Please follow and like us:
0
http://bp9news.com/wp-content/uploads/2018/06/ಸಹಅರುಕಹ-ಕಹಅನ.jpghttp://bp9news.com/wp-content/uploads/2018/06/ಸಹಅರುಕಹ-ಕಹಅನ-150x150.jpgBP9 Bureauಸಿನಿಮಾಬಾಲಿವುಡ್​ನ  ಕಿಂಗ್​ಖಾನ್​ ಶಾರುಖ್​ ಖಾನ್​  ಸುದ್ದಿಯಾಗಿದ್ದಿಕ್ಕಿಂತ ಮಗಳೇ ಸುದ್ದಿಯಾಗಿದ್ದೇ ಹೆಚ್ಚು. ಸದ್ಯ ಸುಹಾನ್​ ಖಾನ್​ ಹುಡುಗನೊಂದಿಗೆ ಆತ್ಮೀಯವಾಗಿರುವ ಫೋಟೋವೊಂದು ವೈರಲ್​ ಆಗಿದೆ.   ಸುಹಾನಾ ಖಾನ್​  ಸ್ನೇಹಿತರ ಜೊತೆ ಓಡಾಟ-ಅವಳ ಡ್ರೆಸ್​, ಮೇಕಪ್​ ಹೀಗೆ ಎಲ್ಲಾ  ವಿಚಾರದಲ್ಲೂ ಶಾರುಖ್​ ಪುತ್ರಿ ಗಾಸಿಪ್​ಗೆ ಒಳಗಾಗುತ್ತಲೇ ಇದ್ದಾರೆ.   ಸ್ವಲ್ಪ ದಿನಗಳ ಹಿಂದಷ್ಟೇ ಸುಹಾನಖಾನ್​ ರಿಗೆ ಅಪ್ಪ ಶಾರುಖ್​ ಬರ್ತ್​ ಡೆ ವಿಶ್​ ಮಾಡಿ ಸ್ಟೇಟ್​ಮೆಂಟ್​ವೊಂದನ್ನು ಹೇಳಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ನೆಟ್ಟಿಗರಿಂದ ಟ್ರೋಲ್​ಗೂ...Kannada News Portal