ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ  ಇಮ್ರಾನ್​ ಖಾನ್​ ಒಬ್ಬ ಸಲಿಂಗಕಾಮಿ ಎಂದು ಆತನ ಮಾಜಿ ಪತ್ನಿ ರೆಹಾಂ ಖಾನ್​ ಹೇಳಿರುವ ಸ್ಫೋಟಕ ಮಾಹಿತಿಯೊಂದು ಈಗ ಇಡೀ ಪಾಕಿಸ್ತಾನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್ ಇತ್ತೀಚೆಗೆ ತಾವು ಬರೆದಿರುವ ಆತ್ಮಚರಿತ್ರೆ “ರೆಹಾಮ್ ಖಾನ್, ದಿ ಆಟೋ ಬಯಾಗ್ರಫಿ ” ಎಂಬ ಪುಸ್ತಕಕ್ಕೆ ಬಿಡುಗಡೆಗೂ ಮುನ್ನ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ರೆಹಂ ಖಾನ್​ ಬರೆದಿರುವ  ಆತ್ಮ ಚರಿತ್ರೆ  ಸಾಮಾಜಿಕ ಜಾಲತಾಣಗಳಲ್ಲಿ ಲೀಕ್​ ಆಗಿದ್ದು ಭಾರೀ ವಿವಾದ ಸೃಷ್ಟಿಯಾಗಿದೆ. ಪಾಕಿಸ್ತಾನದಲ್ಲಿ ಮುಂದಿನ ಪ್ರಧಾನಿಯೆಂದೇ ಬಿಂಬಿತವಾಗಿರುವ ಇಮ್ರಾನ್​ ಖಾನ್​ಗೆ ಇದರಿಂದ  ತೀವ್ರ ಮುಜುಗರವಾಗಿದೆ. ಈಕೆ ತನ್ನ ಪುಸ್ತಕದಲ್ಲಿ ಇಮ್ರಾನ್​ ಖಾನ್​ , ಪಾಕ್​ ನಟ  ಹಂಜಾ ಅಲಿ ಅಬ್ಬಾಸಿ ಮತ್ತು ಇಮ್ರಾನ್​ ಖಾನ್​ ಪಕ್ಷ “ಪಾಕಿಸ್ತಾನಿ ತೆಹರಿಕ್-ಇ​ -ಇನ್ಸಾಫ್​”(ಪಿಟಿಐ)ನ ಮಾಧ್ಯಮ ಸಲಹೆಗಾರ ಅನಲಾ ಖವಾಜ ಎಂಬುವವರ ಜೊತೆಗೂ  ದೈಹಿಕ ಸಂಬಂಧ ಇರಿಸಿಕೊಂಡಿದ್ದಾರೆಂಬುವ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.

ಅಲ್ಲದೇ ಇಮ್ರಾನ್​ ತನ್ನ ಪಕ್ಷದ ಹಲವು ಮುಖಂಡರ ಜೊತೆ ಇಂತಹ ಅನೈತಿಕ ಸಂಬಂಧವಿರಿಸಿಕೊಂಡಿದ್ದಾರೆಂದು ಬಹಿರಂಗಗೊಳಿಸಿದ್ದಾರೆ.

ಪಿಟಿಐ ನ ಮುಖ್ಯಸ್ಥ ಮುರಾದ್​ ಸಯೀದ್​ ಜೊತೆಗೂ ಇವರು ಸಂಬಂಧ ಇರಿಸಿಕೊಂಡಿದ್ದಾರೆ ಎಂದು ರೆಹಂ ಬರೆದುಕೊಂಡಿದ್ದಾರೆ. ಆದರೆ ಆಕೆ  ಹೆಸರಿಸಿರುವ ಯಾರೊಬ್ಬರೂ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ. ಮುರಾದ್​ ಸಯೀದ್​ ಮಾತ್ರ ಟ್ವಿಟ್ಟರ್​ ಮುಖಾಂತರ ರೆಹಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಅವರು, ಇದೊಂದು ನಾಚಿಗೇಡಿತನ ವಿಷಯ, ಈ ರೀತಿ ಮಹಿಳೆಯೊಬ್ಬರು ಬರೆಯುವ ಕೀಳು ಮಟ್ಟದ ಬರಹವನ್ನು ನಾನು ಎಂದಿಗೂ ಕಂಡಿಲ್ಲ, ಆಕೆ ಹೀಗೆ ಬರೆದಿರುವ ಹಿಂದೆ ಯಾರದ್ದೋ ಕೈವಾಡ ಇದೆ. ಆಕೆ ಈ ರೀತಿ ಬರೆಯುವವರಲ್ಲ,ಬೇರೆಯೇ ಉದ್ದೇಶವಿದೆ ಎಂದು ಟ್ವಿಟ್ಟರ್​ನಲ್ಲಿ ತಿಳಿಸಿದ್ದಾರೆ.

ರೆಹಂ ಖಾನ್​, ತನ್ನ ಪುಸ್ತಕದಲ್ಲಿ ಕ್ರಿಕೆಟಿಗ ವಾಸಿಂ ಅಕ್ರಮ್​ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ. ಅವರೊಬ್ಬ ವಿಕೃತ ಮನುಷ್ಯ. ತನ್ನ ಹೆಂಡತಿಯ ಆಸೆಗಳನ್ನು ಪೂರೈಸುವುದಕ್ಕಾಗಿಕಪ್ಪು ವ್ಯಕ್ತಿಯೊಬ್ಬನನ್ನು ಜೊತೆ ಮಾಡಿ  ಅವರು ನಡೆಸುವ ಆಟ-ಪಾಟಗಳನ್ನು ಒಂದು ಕೊಠಡಿಯಲ್ಲಿ ತಾನೇ ಖುದ್ದಾಗಿ ನೋಡುತ್ತಿದ್ದನು ಎಂದು  ಹೇಳಿದ್ದಾರೆ. ವಾಸಿಂ ಅಕ್ರಂ  ಕೂಡ ಈ ಹೇಳಿಕೆಗೆ ಮಾನನಷ್ಟ ಮೊಕದ್ದಮೆ ನೋಟೀಸ್​ನ್ನು ರೆಹಂ ಖಾನ್​ಗೆ ಕಳುಹಿಸಿದ್ದಾರೆ.

ಇದರಿಂದಾಗಿ ರೆಹಂ ಖಾನ್​ ಪುಸ್ತಕ, ಪಾಕಿಸ್ತಾನ ಕ್ರಿಕೆಟ್​ ಮತ್ತು ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.ಇಮ್ರಾನ್​ ಖಾನ್​, ರೆಹಂ ರನ್ನು ಜನವರಿ 2015 ರಲ್ಲಿ ಮದುವೆಯಾಗಿ, ಅಕ್ಟೋಬರ್ 2015ರಲ್ಲಿ  ವಿಚ್ಛೇಧನ ಪಡೆದುಕೊಂಡಿದ್ದಾರೆ. ನಂತರ ಇಮ್ರಾನ್​ ಬುಸ್ರಾ ಮಲಿಕಾರನ್ನು ಮದುವೆ ಮಾಡಿಕೊಂಡಿದ್ದಾರೆ.  ಇಮ್ರಾನ್​ ಇದಕ್ಕೂ ಮೊದಲೇ ಬ್ರಿಟಿಷ್ ನ ಜಮೀಮಾ ಗೋಲ್ಡ್​ಸ್ಮಿತ್​ ಎಂಬುವವರನ್ನು ಮದುವೆಯಾಗಿದ್ದರು. 9 ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿ ವಿಚ್ಚೇಧನ ಪಡೆದುಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/06/1528091080-Reham_Khan_Twitter.jpghttp://bp9news.com/wp-content/uploads/2018/06/1528091080-Reham_Khan_Twitter-150x150.jpgBP9 Bureauಅಂತಾರಾಷ್ಟ್ರೀಯಕ್ರೀಡೆಪ್ರಮುಖರಾಷ್ಟ್ರೀಯಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ  ಇಮ್ರಾನ್​ ಖಾನ್​ ಒಬ್ಬ ಸಲಿಂಗಕಾಮಿ ಎಂದು ಆತನ ಮಾಜಿ ಪತ್ನಿ ರೆಹಾಂ ಖಾನ್​ ಹೇಳಿರುವ ಸ್ಫೋಟಕ ಮಾಹಿತಿಯೊಂದು ಈಗ ಇಡೀ ಪಾಕಿಸ್ತಾನದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಾಮ್ ಖಾನ್ ಇತ್ತೀಚೆಗೆ ತಾವು ಬರೆದಿರುವ ಆತ್ಮಚರಿತ್ರೆ 'ರೆಹಾಮ್ ಖಾನ್, ದಿ ಆಟೋ ಬಯಾಗ್ರಫಿ ' ಎಂಬ ಪುಸ್ತಕಕ್ಕೆ ಬಿಡುಗಡೆಗೂ ಮುನ್ನ ಭಾರೀ ಬೇಡಿಕೆ ಸೃಷ್ಟಿಯಾಗಿದೆ. var domain = (window.location !=...Kannada News Portal