ಕಣ್ಣೋಟದ ಚೆಲುವೆ  ಪ್ರಿಯಾ ವಾರಿಯರ್​ ರಾತ್ರೋ  ರಾತ್ರಿ ಸುದ್ದಿಯಾದಂತೇ ಇಲ್ಲೊಬ್ಬ ಅಂಕಲ್​ ರಾತ್ರೋ ರಾತ್ರಿ ಸ್ಟಾರ್​ ಆಗಿದ್ದಾರೆ. ಆಕೆ ಕಣ್ಣು ಹುಬ್ಬು  ಕುಣಿಸುವ ಸ್ಟೈಲ್​ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡರೇ, ಈ ಅಂಕಲ್​  ಡ್ಯಾನ್ಸ್​ ಮೂಲಕ ಎಲ್ಲರ ಮನಸೂರೆಗೊಂಡಿದ್ದಾರೆ. ಈಗಾಗಲೇ ಅಂಕಲ್​  ಡ್ಯಾನ್ಸ್​   ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ ಸಿಕ್ಕಾಪಟ್ಟೆ  ಫೇಮಸ್ಸ್ ​. ಅವರು ಯಾವ ಹೀರೋ ಗೂ ಕಡಿಮೆ ಇಲ್ಲದಂತೆ ಸೊಂಟ ಕುಣಿಸ್ತಾ   ಇದ್ರೆ ಬಿಟ್ಟ ಕಣ್ಣು ಬಿಟ್ಟಂತಯೇ ನೋಡುವಂತೆ  ಮಸ್ತ್​ ಡ್ಯಾನ್ಸ್ ಮಾಡಿದ್ದಾರೆ.

ಆ ಡ್ಯಾನ್ಸಿಂಗ್​ ಆಣಕಲ್​ ಬೇರೆ ಯಾರು ಅಲ್ಲ, ಮಧ್ಯಪ್ರದೇಶದ ಪ್ರೋಫೆಸರ್‌ ಅಂತೆ ಇವರು ಮಾಡಿರುವ ಡ್ಯಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಯಾವ  ಹಿರೋಗಳು ಈ ಅಂಕಲ್​ ಮುಂದೆ ಡಮ್ಮಿ ಎಂಬ ಸಂದೇಶ ಕೂಡ ವಿಡಿಯೋ ಅಡಿಯಲ್ಲಿ ಬರೆಯುತ್ತಿದ್ದಾರೆ.

ಡ್ಯಾನ್ಸಿಂಗ್ ಅಂಕಲ್ ಎಂದೇ ಖ್ಯಾತರಾಗಿರುವ 50ರ ಹರೆಯದ ಸಂಜೀವ್ ಶ್ರೀವಾತ್ಸವ್ ಅವರು ಭೋಪಾಲ್ ನ ಬಾಬಾ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಪ್ರೊಫೆಸರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್ ಅವರು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ ಈ ಹಾಡಿನ  ಖುದ್​ಗರ್ಜ್​ ಚಿತ್ರದ ‘ಆಪ್ ಕೆ ಆ ಜಾನೆ ಸೆ ‘ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮೇ 30ರಂದು ಟ್ವೀಟ್ ಮಾಡಲಾದ ವಿಡಿಯೋವನ್ನು ಸಾವಿರಾರೂ ಮಂದಿ ರೀ ಟ್ವೀಟ್ ಮಾಡಿದ್ದು 2 ಕೋಟಿಗೂ  ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.

 

 

 

 

Please follow and like us:
0
http://bp9news.com/wp-content/uploads/2018/06/uncle-ant.jpghttp://bp9news.com/wp-content/uploads/2018/06/uncle-ant-150x150.jpgBP9 Bureauಟೈಮ್ ಪಾಸ್ಪ್ರಮುಖಸಿನಿಮಾಕಣ್ಣೋಟದ ಚೆಲುವೆ  ಪ್ರಿಯಾ ವಾರಿಯರ್​ ರಾತ್ರೋ  ರಾತ್ರಿ ಸುದ್ದಿಯಾದಂತೇ ಇಲ್ಲೊಬ್ಬ ಅಂಕಲ್​ ರಾತ್ರೋ ರಾತ್ರಿ ಸ್ಟಾರ್​ ಆಗಿದ್ದಾರೆ. ಆಕೆ ಕಣ್ಣು ಹುಬ್ಬು  ಕುಣಿಸುವ ಸ್ಟೈಲ್​ ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡರೇ, ಈ ಅಂಕಲ್​  ಡ್ಯಾನ್ಸ್​ ಮೂಲಕ ಎಲ್ಲರ ಮನಸೂರೆಗೊಂಡಿದ್ದಾರೆ. ಈಗಾಗಲೇ ಅಂಕಲ್​  ಡ್ಯಾನ್ಸ್​   ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸಿಂಗ್​ ಅಂಕಲ್​ ಅಂತಾನೇ ಸಿಕ್ಕಾಪಟ್ಟೆ  ಫೇಮಸ್ಸ್ ​. ಅವರು ಯಾವ ಹೀರೋ ಗೂ ಕಡಿಮೆ ಇಲ್ಲದಂತೆ ಸೊಂಟ ಕುಣಿಸ್ತಾ...Kannada News Portal