ಹ್ಯಾಟ್ರಿಕ್​ ಹೀರೋ  ಶಿವರಾಜ್​ಕುಮಾರ್​ ಫ್ಯಾಮಿಲಿ ಜೊತೆ  ಔಟಿಂಗ್​ನಲ್ಲ್ಲಿ ಬ್ಯುಸಿ  ಆಗಿದ್ದಾರೆ.  ಶಿವರಾಜ್​ ಕುಮಾರ್​  ಅಂದ್ರೆ ಸೆಂಚುರಿ ಸ್ಟಾರ್​ ಸಿನಿಮಾ ಗೆಲುವಿಗೆ  ಸಿಕ್ಕಾಪಟ್ಟೆ ವರ್ಕೌಟ್​ ಮಾಡುವ  ಅವರ​  ಎನರ್ಜಿಗೆ ಅವರ ಫ್ಯಾಮಿಲಿ ಕೂಡ ಸಾಥ್​ ಕೊಡುತ್ತಿದೆ. ಅದರಲ್ಲಿ ಎರಡೂ ಮಾತಿಲ್ಲ ಎನ್ನುತ್ತಿದೆ ಸ್ಯಾಂಡಲ್​ವುಡ್​. ಸದ್ಯ ಶೂಟಿಂಗ್​ ಜೊತೆ ಜೊತೆಗೆ ರಿಲ್ಯಾಕ್ಷ್​ ಮೂಡ್​ನಲ್ಲಿದ್ದಾರೆ. ಮಗಳು, ಪತ್ನಿಯೊಟ್ಟಿಗೆ ಊಟಿಯ ಹಚ್ಚ ಹಸಿರಿನಿನ ತಂಗಾಳಿ ಸವಿಯುತ್ತಿದ್ದಾರೆ ಶಿವಣ್ಣ ಅಂಡ್​  ಫ್ಯಾಮಿಲಿ. ಸದ್ಯಕ್ಕೆ  ಶಿವರಾಜ್​ ಕುಮಾರ್​ ಕವಚ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿ ಇದ್ರೂ ಒಂದಷ್ಟೂ ಸಮಯವನ್ನು ಫ್ಯಾಮಿಲಿ ಮೆಂಬರ್ಸ್​ ಗೆ ಕೊಡುತ್ತಿದ್ದಾರೆ.

ಸಮಯ ಸಿಕ್ಕಾಗಲೆಲ್ಲಾ ಶಿವಣ್ಣ ತನ್ನ ಸಂಸಾರದೊಟ್ಟಿಗೆ ಹೊರಗಡೆ ಸುತ್ತಾಡುವುದು ಅವರ ಜೊತೆ  ಕಾಲ ಕಳೆಯುವ ಅಭ್ಯಾಸ ಮಾಡಿಕೊಂಡಿದ್ದಾರೆ.  ಊಟಿಯಲ್ಲಿ ಕವಚ ಶೂಟಿಂಗ್​ ನಡೆಯುತ್ತಿದ್ದು  ಅಲ್ಲಿಯೇ  ಫ್ಯಾಮಿಲಿ ಜೊತೆ  ಕಾಳ ಕಳೆಯುತ್ತಿದ್ದಾರೆ.

ಮೈಸೂರು, ಚಿಕ್ಕಮಗಳೂರಿನ ಸುತ್ತಮುತ್ತ ಶೂಟಿಂಗ್​ ಮುಗಿಸಿರೋ ಚಿತ್ರತಂಡವೀಗ ಊಟಿಗೆ ಶಿಫ್ಟ್​ ಆಗಿದೆ. ಕಳೆದ ಮೂರು ದಿನಗಳಿಂದ ಊಟಿಯ ಸುಂದರ ಪರಿಸರದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದರ ಮಧ್ಯೆ ಶಿವಣ್ಣ, ಕುಟುಂಬದ ಜೊತೆ ಊಟಿ ರೌಂಡ್ಸ್​ ಹೋಗಿದ್ದಾರೆ. ಪತ್ನಿ ಗೀತಾ ಮತ್ತು ಪುತ್ರಿ ನಿವೇದಿತಾ ಜೊತೆಗಿರೋ ಶಿವಣ್ಣನ ಫೋಟೋ ಇದೀಗ ಸಾಮಾಜಿಕ ಜಾಲಕತಾಣಗಳಲ್ಲಿ ವೈರಲ್​ ಆಗಿದ್ದು, ಹ್ಯಾಟ್ರಿಕ್​ ಹೀರೊ  ಸಿಕ್ಕಾಪಟ್ಟೆ  ಖುಷಿಯಲ್ಲಿದ್ದಾರೆ. ಅಂದಹಾಗೇ ಮಲಯಾಳಂ ಒಪ್ಪಂ ಸಿನಿಮಾ ರಿಮೇಕ್​  ಆಗಿದ್ದು , ಚಿತ್ರದಲ್ಲಿ  ಶಿವಣ್ಣ  ಕುರುಡನ ಪಾತ್ರದಲ್ಲಿ ನಟಿಸ್ತಾ ಇದ್ದಾರೆ.

Please follow and like us:
0
http://bp9news.com/wp-content/uploads/2018/06/shivanna-3.jpghttp://bp9news.com/wp-content/uploads/2018/06/shivanna-3-150x150.jpgBP9 Bureauಸಿನಿಮಾಹ್ಯಾಟ್ರಿಕ್​ ಹೀರೋ  ಶಿವರಾಜ್​ಕುಮಾರ್​ ಫ್ಯಾಮಿಲಿ ಜೊತೆ  ಔಟಿಂಗ್​ನಲ್ಲ್ಲಿ ಬ್ಯುಸಿ  ಆಗಿದ್ದಾರೆ.  ಶಿವರಾಜ್​ ಕುಮಾರ್​  ಅಂದ್ರೆ ಸೆಂಚುರಿ ಸ್ಟಾರ್​ ಸಿನಿಮಾ ಗೆಲುವಿಗೆ  ಸಿಕ್ಕಾಪಟ್ಟೆ ವರ್ಕೌಟ್​ ಮಾಡುವ  ಅವರ​  ಎನರ್ಜಿಗೆ ಅವರ ಫ್ಯಾಮಿಲಿ ಕೂಡ ಸಾಥ್​ ಕೊಡುತ್ತಿದೆ. ಅದರಲ್ಲಿ ಎರಡೂ ಮಾತಿಲ್ಲ ಎನ್ನುತ್ತಿದೆ ಸ್ಯಾಂಡಲ್​ವುಡ್​. ಸದ್ಯ ಶೂಟಿಂಗ್​ ಜೊತೆ ಜೊತೆಗೆ ರಿಲ್ಯಾಕ್ಷ್​ ಮೂಡ್​ನಲ್ಲಿದ್ದಾರೆ. ಮಗಳು, ಪತ್ನಿಯೊಟ್ಟಿಗೆ ಊಟಿಯ ಹಚ್ಚ ಹಸಿರಿನಿನ ತಂಗಾಳಿ ಸವಿಯುತ್ತಿದ್ದಾರೆ ಶಿವಣ್ಣ ಅಂಡ್​  ಫ್ಯಾಮಿಲಿ. ಸದ್ಯಕ್ಕೆ  ಶಿವರಾಜ್​ ಕುಮಾರ್​...Kannada News Portal