ಮೊನ್ನೆ ಮೊನ್ನೆಯಷ್ಟೇ ನಟಿ ಅನುಷ್ಕಾ ಶರ್ಮಾ ಅವರು ವ್ಯಕ್ತಿಯೊಬ್ಬರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್​ ಆಗಿತ್ತು. ಆ ನಂತರ ಆ ಯುವಕನು ಕೂಡ ತನ್ನ ಫೇಸ್​ಬುಕ್​ ಮೂಲಕ ಅನುಷ್ಕಾಳಿಗೆ ತಿರುಗೇಟು ಕೊಟ್ಟಿದ್ದರು. ಅಷ್ಟಕ್ಕೂ ಸುಮ್ಮನಾಗದೇ ಆ ವಿಚಾರ ಮತ್ತಷ್ಟು ಮುಂದುವರೆದಿತ್ತು.  ಯುವಕ ಅರ್ಹಾನ್​ ಸಿಂಗ್​ ತಾಯಿ ಕೂಡ  ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಅವರನ್ನು ಉದ್ದೇಶಿಸಿ  ತೀಕ್ಷ್ಣವಾಗಿ ಬೈದಿದ್ದರು. ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವ  ಆ ಯುವಕ ಯಾರು ಗೊತ್ತಾ? ಇಲ್ಲಿದೆ ಆತನ ಇಂಟ್ರೆಸ್ಟಿಂಗ್​ ವಿಚಾರ.

 

ಆ ವಿಡಿಯೋ ವೈರಲ್​ ಆಗಿದ್ದೇ  ಇವೆಲ್ಲಾ ಬೆಳವಣಿಗೆಗಳಿಗೆ ಕಾರಣವಾಯ್ತು. ರಸ್ತೆ  ಮಧ್ಯೆ ಬಾಟಲಿ ಬಿಸಾಕಿ ತೀವ್ರ ವಿರೋಧಕ್ಕೆ ಕಾರಣವಾದ, ಆ ವೈರಲ್​ ವಿಡಿಯೋ ಹೀರೋ ಯಾರು ಗೊತ್ತಾ…|

ಆತ ಅರ್ಹಾನ್​ ಸಿಂಗ್​, ಈತನು ಕೂಡ ಆ್ಯಕ್ಟರ್​ ಅಂತೆ.  ಈತ ಬಾಲಿವುಡ್​ ನಟ ಎನ್ನಲಾಗಿದ್ದು, ಶಾರುಖ್​ ಖಾನ್​ ಸಿನಿಮಾಗಳಲ್ಲಿ ಈತ ಅಭಿನಯಿಸಿದ್ದಾನಂತೆ. ಬಾಲನಟನಾಗಿ ಬಾಲಿವುಡ್​ ಗೆ ಕಾಲಿಟ್ಟಿದ್ದ ಅರ್ಹಾನ್​ ಸಿಂಗ್​ ಹಲವಾರು ಧಾರವಾಹಿ, ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎನ್ನಲಾಗಿದೆ. ಆದರೆ ಆ ವಿಡಿಯೋ ಹಾಕಿದ್ದು ವಿರಾಟ್​ ಕೊಹ್ಲಿ, ಆ ನಂತರ ಸ್ಟಾರ್​ ದಂಪತಿ ಕೂಡ ತೀವ್ರ ಟೀಕೆಗೆ ಗುರಿಯಾದ್ರು. ಒಂದು ಲೆಕ್ಕಾಚಾರದಲ್ಲಿ  ಅರ್ಹಾನ್​ ಸಿಂಗ್​ ಕೂಡ ಸೆಲೆಬ್ರಿಟಿ. ಸೆಲೆಬ್ರಿಟಿ ಅಂದಾಕ್ಷಣ ಹಿಗ್ಗಾಮುಗ್ಗಾ ,ಬೀದಿ ಬದಿಯ ವ್ಯಕ್ತಿಗಳಂತೆ ವರ್ತಿಸುವುದು ಸರಿಯಾ…? ರಸ್ತೆಯಲ್ಲಿ ಬಿಸಾಡುವ ಕಸಕ್ಕಿಂತ ಅನುಷ್ಕಾ ಬಾಯಿಂದ ಬಂದ ಶಬ್ಧವೇ ಕಸಕ್ಕಿಂತ ಜೋರಾಗಿತ್ತು ಎಂದು ಅರ್ಹಾನ್​ ಸಿಂಗ್​ ಟ್ವೀಟ್​  ಮಾಡಿದ್ದರರು. ನೆಟ್ಟಿಗರು ಆ ಯುವಕ ಯಾರು ಎಂದು ತಿಳಿದುಕೊಳ್ಳಲು ಇಷ್ಟೆಲ್ಲಾ ಕಷ್ಟಪಟ್ಟು ಮಾಹಿತಿ ಕಲೆ ಹಾಕಿದ್ದಾರೆ.ಈ ಎಲ್ಲಾ ಬೆಳವಣಿಗೆಗೆ ಕಾರಣವಾಗಿದ್ದು ಆ ಒಂದು ವಿಡಿಯೋ.

Please follow and like us:
0
http://bp9news.com/wp-content/uploads/2018/06/ವಿರಅಆರ್​.jpghttp://bp9news.com/wp-content/uploads/2018/06/ವಿರಅಆರ್​-150x150.jpgBP9 Bureauಸಿನಿಮಾಮೊನ್ನೆ ಮೊನ್ನೆಯಷ್ಟೇ ನಟಿ ಅನುಷ್ಕಾ ಶರ್ಮಾ ಅವರು ವ್ಯಕ್ತಿಯೊಬ್ಬರಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ವಿಡಿಯೋ ವೈರಲ್​ ಆಗಿತ್ತು. ಆ ನಂತರ ಆ ಯುವಕನು ಕೂಡ ತನ್ನ ಫೇಸ್​ಬುಕ್​ ಮೂಲಕ ಅನುಷ್ಕಾಳಿಗೆ ತಿರುಗೇಟು ಕೊಟ್ಟಿದ್ದರು. ಅಷ್ಟಕ್ಕೂ ಸುಮ್ಮನಾಗದೇ ಆ ವಿಚಾರ ಮತ್ತಷ್ಟು ಮುಂದುವರೆದಿತ್ತು.  ಯುವಕ ಅರ್ಹಾನ್​ ಸಿಂಗ್​ ತಾಯಿ ಕೂಡ  ಅನುಷ್ಕಾ ಮತ್ತು ವಿರಾಟ್​ ಕೊಹ್ಲಿ ಅವರನ್ನು ಉದ್ದೇಶಿಸಿ  ತೀಕ್ಷ್ಣವಾಗಿ ಬೈದಿದ್ದರು. ಇಷ್ಟೆಲ್ಲಾ ತಲೆಕೆಡಿಸಿಕೊಳ್ಳುತ್ತಿರುವ  ಆ ಯುವಕ ಯಾರು...Kannada News Portal