ಬಾಲಿವುಡ್​ ಬಾದ್​ ಶಾ ಎಂದೇ ಪ್ರಸಿದ್ಧಿ ಪಡೆದ ಶಾರುಖ್​ ಖಾನ್​ ಜೊತೆ  ಆ್ಯಕ್ಟ್​ ಮಾಡಲು ನಟಿಯರು  ತುದಿಗಾಲಲ್ಲಿ ನಿಂತಿರುತ್ತಿರುತ್ತಾರೆ. ಆದರೆ ಇಲ್ಲೊಬ್ಬ ನಟಿ ನಾನು ಶಾರುಖ್​ ಜೊತೆ ನಟಿಸಲ್ಲ ಎಂದು ಸಾರಸಗಟಾಗಿ  ವಿರೋಧಿಸಿರುವ  ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

 ಸದ್ಯ ಶಾರುಖ್​  ಖಾನ್​ ಝೀರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಸೆಲ್ಯೂಟ್​ ಗಾಗಿ ತಯಾರಿ ನಡೆಯುತ್ತಿದೆ. ಗಗನಯಾತ್ರಿ ರಾಖೇಶ್​ ಶರ್ಮಾ ಅವರ ಜೀವನಾಧಾರಿತ  ಚಿತ್ರವಾಗಿರುವ ಸೆಲ್ಯೂಟ್​  ಚಿತ್ರಕ್ಕಾಗಿ ಕರೀನಾ ಕಪೂರ್​ ಆವರನ್ನು ಅಪ್ರೋಚ್​ ಮಾಡಲಾಗಿತ್ತು. ಆದರೆ ಆಕೆ ಶಾರುಖ್​ ಜೊತೆ ನಟಿಸಲು ಒಪ್ಪಿಗೆ ಕೊಟ್ಟಿಲ್ಲ  ಎಂಬ ಮಾತುಗಳು ಮಾತ್ರ ಸಿಕ್ಕಾಪಟ್ಟೆ  ಬಿ ಟೌನ್​ನಲ್ಲಿ ಕೇಳಿಬರುತ್ತಿವೆ.

 ಇತ್ತೀಚಿಗಷ್ಟೇ  ವೇರ್​ ದಿ ವೆಡ್ಡಿಂಗ್​ ಪ್ರಚಾರದಲ್ಲಿ  ಭಾಗಿಯಾಗಿದ್ದ  ಕರೀನಾ ಕಪೂರ್​ ‘ ನಾನು ಈಗ ಹೊಸದನ್ನು  ಮಾಡಲು  ಇಷ್ಟಪಡುತ್ತೇನೆ . ಬೇರೆ ಏನಾದರು ಮಾಡಬೇಕು ಎನ್ನಿಸುತ್ತದೆ.  ನಾನು ಈಗ ದೊಡ್ಡ ಬಜೆಟ್​ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ.  ಈಗ ಬೇರೆಯದ್ದೇ ಯೋಚನೆ ಮಾಡುತ್ತಿದ್ದೇನೆ ಎಂದು ಕರೀನಾ ಉತ್ತರಿಸಿದ್ದಾರೆ. ಅಂದಹಾಗೇ  ಇವರ ಹೇಳಿಕೆಯನ್ನು ಸ್ಪಷ್ಟವಾಗುತ್ತೆ…

ಕರೀನಾ ಅವರು ಶಾರುಖ್​ ಜೊರೆ ಸ್ಕ್ರೀನ್​  ಶೇರ್​  ಮಾಡದೇ  ಇರುವ ವಿಚಾರ  ಸೂಚ್ಯವಾಗಿ ಈ ರೀತಿ ಹೇಳಿದ್ದಾರೆ. ಎನ್ನುವ   ಮಾತು  ಈಗ ಬಾಲಿವುಡ್​ನಲ್ಲಿ ಹಾರಿದಾಡುತ್ತಿದೆ. ಅಲ್ಲದೇ ಅವರು ಈ ಅವಕಾಶವನ್ನು ನಿರಾಕರಿಸಿದ ಕಾರಣ  ಆ ಪಾತ್ರಕ್ಕೆ ಐಶ್ವರ್ಯ ರೈ ಅಥವಾ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಲಾಗುತ್ತಿದೆಯಂತೆ. 

ಆದರೆ ಬಾಲಿವುಡ್​ ನ ಐಶ್ವರ್ಯ ರೈ ಈಗಾಗಲೇ ಮೂರು ಸಿನಿಮಾಗಳಲ್ಲಿ ಬ್ಯುಸಿ  ಆಗಿದ್ದಾರೆ. ಇನ್ನು ದೀಪಿಕಾ ಪಡುಕೋಣೆ ಗೆ ಬೆನ್ನು ನೋವಿದ್ದು ಶಾರುಖ್​ ಜೊತೆ ನಟಿಸಲು  ಒಪ್ಪುತ್ತಾರಾ ಎಂಬುದು ಅನುಮಾನ  ಮೂಡಿದೆ.

ಒಟ್ಟಾರೆ  ಸೆಲ್ಯೂಟ್​ ಸಿನಿಮಾಗೆ  ಶಾರುಖ್​ ಜೊತೆ ನಟಿಸಲು ಫೈನಲ್​ ಹಿರೋಯಿನ್ ಯಾರು​ ಆಗ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Please follow and like us:
0
http://bp9news.com/wp-content/uploads/2018/05/681135.jpghttp://bp9news.com/wp-content/uploads/2018/05/681135-150x150.jpgBP9 Bureauಸಿನಿಮಾ ಬಾಲಿವುಡ್​ ಬಾದ್​ ಶಾ ಎಂದೇ ಪ್ರಸಿದ್ಧಿ ಪಡೆದ ಶಾರುಖ್​ ಖಾನ್​ ಜೊತೆ  ಆ್ಯಕ್ಟ್​ ಮಾಡಲು ನಟಿಯರು  ತುದಿಗಾಲಲ್ಲಿ ನಿಂತಿರುತ್ತಿರುತ್ತಾರೆ. ಆದರೆ ಇಲ್ಲೊಬ್ಬ ನಟಿ ನಾನು ಶಾರುಖ್​ ಜೊತೆ ನಟಿಸಲ್ಲ ಎಂದು ಸಾರಸಗಟಾಗಿ  ವಿರೋಧಿಸಿರುವ  ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.  ಸದ್ಯ ಶಾರುಖ್​  ಖಾನ್​ ಝೀರೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಮುಂದಿನ ಸಿನಿಮಾ ಸೆಲ್ಯೂಟ್​ ಗಾಗಿ ತಯಾರಿ ನಡೆಯುತ್ತಿದೆ. ಗಗನಯಾತ್ರಿ ರಾಖೇಶ್​ ಶರ್ಮಾ ಅವರ ಜೀವನಾಧಾರಿತ  ಚಿತ್ರವಾಗಿರುವ ಸೆಲ್ಯೂಟ್​  ಚಿತ್ರಕ್ಕಾಗಿ ಕರೀನಾ ಕಪೂರ್​...Kannada News Portal