ಚಿಕ್ಕಮಗಳೂರು: ಹುಟ್ಟುವಾಗಲೇ ಮಣ್ಣಿನ ಮಕ್ಕಳೆಂದು ಪೇಟೆಂಟ್ ಪಡೆದವರು ಲಾಭದಾಯಕ ಖಾತೆಗಳನ್ನೇಕೆ ಕೇಳುತ್ತಿದ್ದಾರೆ?, ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ನಾಯಕ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು, ಮಣ್ಣಿನ ಮಕ್ಕಳಿಗೆ ಪಶುಸಂಗೋಪನೆ, ತೋಟಗಾರಿಕೆ ಹಾಗೂ ಸಣ್ಣ ನೀರಾವರಿ ಅಂಥ ಖಾತೆಗಳೇಕೆ ಬೇಡ. ಇವರಿಗೆ ಬೇಕಾಗಿರುವುದು ಇಂಧನ, ಪಿಡಬ್ಲ್ಯೂಡಿ ಹಾಗೂ ಅಬಕಾರಿ ಅಂಥ ಲಾಭದಾಯಕ ಖಾತೆಗಳೇ. ಮಣ್ಣಿಗೂ ಈ ಲಾಭದಾಯಕ ಖಾತೆಗಳಿಗೂ ಏನು ಸಂಬಂಧ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಭಾರೀ ಜಟಾಪಟಿಗೆ ಕಾರಣವಾಗಿದ್ದ ಹಣಕಾಸು, ಲೋಕೋಪಯೋಗಿ ಮತ್ತು ಇಂಧನ ಖಾತೆಗಳನ್ನು ತನ್ನ ಸುಪರ್ದಿಯಲ್ಲಿಯೇ ಇರಿಸಿಕೊಳ್ಳಲು ಜೆಡಿಎಸ್ ಯಶಸ್ವಿಯಾಗಿದೆ.

Please follow and like us:
0
http://bp9news.com/wp-content/uploads/2018/06/index.jpghttp://bp9news.com/wp-content/uploads/2018/06/index-150x150.jpgPolitical Bureauಚಿಕ್ಕಮಗಳೂರುಪ್ರಮುಖರಾಜಕೀಯWhy are beneficial accounts for patent holders of clay children?ಚಿಕ್ಕಮಗಳೂರು: ಹುಟ್ಟುವಾಗಲೇ ಮಣ್ಣಿನ ಮಕ್ಕಳೆಂದು ಪೇಟೆಂಟ್ ಪಡೆದವರು ಲಾಭದಾಯಕ ಖಾತೆಗಳನ್ನೇಕೆ ಕೇಳುತ್ತಿದ್ದಾರೆ?, ಎಂದು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ವಿರುದ್ಧ ಬಿಜೆಪಿ ನಾಯಕ ಸಿ ಟಿ ರವಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾತನಾಡಿದ ಅವರು, ಮಣ್ಣಿನ ಮಕ್ಕಳಿಗೆ ಪಶುಸಂಗೋಪನೆ, ತೋಟಗಾರಿಕೆ ಹಾಗೂ ಸಣ್ಣ ನೀರಾವರಿ ಅಂಥ ಖಾತೆಗಳೇಕೆ ಬೇಡ. ಇವರಿಗೆ ಬೇಕಾಗಿರುವುದು ಇಂಧನ, ಪಿಡಬ್ಲ್ಯೂಡಿ ಹಾಗೂ ಅಬಕಾರಿ ಅಂಥ ಲಾಭದಾಯಕ ಖಾತೆಗಳೇ. ಮಣ್ಣಿಗೂ ಈ ಲಾಭದಾಯಕ ಖಾತೆಗಳಿಗೂ ಏನು ಸಂಬಂಧ...Kannada News Portal