ಕ್ಯಾಮೆರಾ  ಮುಂದೆ ಇರಬೇಕಿದ್ದ ಸ್ಟಾರ್​ಗಳೆಲ್ಲಾ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದ್ದರು. ಥಿಯೇಟರ್​ನಲ್ಲಿರ ಬೇಕಾದ ಸ್ಟಾರ್​ ಅಭಿಮಾನಿಗಳು ಪ್ರೇಕ್ಷಕರ​ ಗ್ಯಾಲರಿಯಲ್ಲಿ ಕೂತು ಸಿಕ್ಸು,  ಫೋರ್​ ಅಂತಿದ್ರು. ಅದಕ್ಕೆ ಸಾಕ್ಷಿಯಾಗಿದ್ದು  ದಿನಾಂಕ 8 ಮತ್ತು 9 ಎರಡು ದಿನಗಳ ಕಾಲ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಸ್ಟಾರ್​ಗಳದ್ದೇ ಅಬ್ಬರ. ಕನ್ನಡ ಚಲನಚಿತ್ರ  ಕ್ರಿಕೆಟ್​ ಸದ್ಯ  ಮುಗಿದಿದೆ. ಆದರೆ ಆ ಮೈದಾನದಲ್ಲಿ ಕೆಲಸ  ಸ್ಟಾರ್​ಗಳು  ಮಿಸ್ಸಿಂಗ್​ .ಅದರಲ್ಲೂ ಬಾಕ್ಸ್​ ಆಫೀಸ್​ ಸುಲ್ತಾನ  ದರ್ಶನ್​. ಈ ಬಾರಿ ದರ್ಶನ್​ ಕ್ರಿಕೆಟ್​ ಆಡಲಿಲ್ಲ.  ಯಾಕೆ ಗೊತ್ತಾ…?

ಕೆಸಿಸಿ-2 ರಲ್ಲಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದ ದರ್ಶನ್​ ಕ್ರಿಕೆಟ್​ ಆಡಲು ಅಖಾಡಕ್ಕೆ ಇಳಿದಿಲ್ಲ. ಅಂದಹಾಗೇ ಅವರಿಗೆ ಕ್ರಿಕೆಟ್​ ಗೊತ್ತಿಲ್ಲದವರಲ್ಲ. ಕಳೆದ ಬಾರಿ ನಟ ದರ್ಶನ್​ ಆತ್ಮೀಯ ಸ್ನೇಹಿತ ಸೃಜನ್​ ಲೋಕೇಶ್​ ಆಡಿರಲಿಲ್ಲ. ಆದರೆ ಈ ಬಾರಿ ಬಂದಿದ್ದರು. ಆದರೆ ಆಟ ಆಡೋಕೆ ಅಲ್ಲ, ನಿರೂಪಕನಾಗಿ. ಕಮೆಂಟ್ರಿ ಬಾಕ್ಸ್​ನಲ್ಲಿ ಕೂತು ಕೆಸಿಸಿಗೆ   ಚೀರ್​ಅಪ್​ ಮಾಡ್ತಿದ್ರು. ಅಂದಹಾಗೇ ​  ಕೆಸಿಸಿ ಆರಂಭವಾಗೋ  ಮುಂಚೆ ಕೆಸಿಸಿ ಪ್ರೆಸ್​ಮೀಟ್​ವೊಂದರಲ್ಲಿ  ದರ್ಶನ್​  ಕ್ರಿಕೆಟ್​ ಆಡಲ್ವಾ ಅಂತಾ ಕೇಳಿದ ಪ್ರಶ್ನೆಗೆ  ದರ್ಶನ್​ಗೆಯಾರು ಬರಬೇಡಿ ಅಂದಿಲ್ಲ. ಯಾರು ಬೇಕಾದ್ರೂ ಆಡಬಹುದು. ಯಾರಿಗೂ ವೈಯಕ್ತಿಕವಾಗಿ ಆಮಂತ್ರಣ ನೀಡಿಲ್ಲ ಅಂದಿದ್ರು.

ಈ ಬಗ್ಗೆ ದರ್ಶನ್​ ಕೂಡ ಎಲ್ಲೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.  ಕೆಸಿಸಿಯಲ್ಲೂ ಭಾಗವಹಿಸಲೇ ಇಲ್ಲ. ಆದ್ರೆ ದರ್ಶನ್​​ ಆಪ್ತ ಸೃಜನ್​​​ ಕೆಸಿಸಿಗೆ ಬಂದರೂ, ಸ್ನೇಹಿತನ ಸಲುವಾಗಿ ಅಂದ್ರೆ ಸ್ನೇಹಕ್ಕೆ ಬೆಲೆಕೊಟ್ಟ ಸ್ನೇಹಿತ ಇಲ್ಲದ ಆಟದಲ್ಲಿ ತಾನೂ ಭಾಗಿಯಾಗಬಾರದು ಅಂತ ಸ್ಕ್ರೀಸ್​ಗೆ ಇಳಿಯದೇ ಕಂಮೆಂಟ್ರಿ ಕೊಡುತ್ತಲ್ಲೆ ಅರೆ ಮನಸ್ಸಿನಲ್ಲಿ ಕೆಸಿಸಿಯಲ್ಲಿ ಪಾಲ್ಗೊಂಡರು. ಒಟ್ಟಿನಲ್ಲಿ ಶುರುವಾದಾಗ ಕೆಸಿಸಿಗಿದ್ದ ಕ್ರೇಜ್​ಗೂ, ಸ್ಟಾರ್​ಗಳ ರೆಸ್ಪಾನ್ಸ್​ಗೂ ಈ ಬಾರಿ ಸಿಕ್ಕ ರೆಸ್ಪಾನ್ಸ್​ಗೂ ತುಂಬಾನೇ ಬದಲಾವಣೆಗಳಾಗಿವೆ, ಮುಂದಿನ ಸೀಸನ್​ಗಳಲ್ಲಾದ್ರು ದರ್ಶನ್​​​​ ಅಖಾಡಕ್ಕಿಳೀತಾರಾ, ಅವ್ರ ಜೊತೆ ಸೃಜನ್ ಕೂಡ ಬ್ಯಾಟ್​ ಬೀಸ್ತಾರಾ ನೋಡ್ಬೇಕು.

Please follow and like us:
0
http://bp9news.com/wp-content/uploads/2018/09/chingaridarshan1.jpghttp://bp9news.com/wp-content/uploads/2018/09/chingaridarshan1-150x150.jpgBP9 Bureauಸಿನಿಮಾಕ್ಯಾಮೆರಾ  ಮುಂದೆ ಇರಬೇಕಿದ್ದ ಸ್ಟಾರ್​ಗಳೆಲ್ಲಾ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದ್ದರು. ಥಿಯೇಟರ್​ನಲ್ಲಿರ ಬೇಕಾದ ಸ್ಟಾರ್​ ಅಭಿಮಾನಿಗಳು ಪ್ರೇಕ್ಷಕರ​ ಗ್ಯಾಲರಿಯಲ್ಲಿ ಕೂತು ಸಿಕ್ಸು,  ಫೋರ್​ ಅಂತಿದ್ರು. ಅದಕ್ಕೆ ಸಾಕ್ಷಿಯಾಗಿದ್ದು  ದಿನಾಂಕ 8 ಮತ್ತು 9 ಎರಡು ದಿನಗಳ ಕಾಲ ಚಿನ್ನಸ್ವಾಮಿಕ್ರೀಡಾಂಗಣದಲ್ಲಿ ಸ್ಟಾರ್​ಗಳದ್ದೇ ಅಬ್ಬರ. ಕನ್ನಡ ಚಲನಚಿತ್ರ  ಕ್ರಿಕೆಟ್​ ಸದ್ಯ  ಮುಗಿದಿದೆ. ಆದರೆ ಆ ಮೈದಾನದಲ್ಲಿ ಕೆಲಸ  ಸ್ಟಾರ್​ಗಳು  ಮಿಸ್ಸಿಂಗ್​ .ಅದರಲ್ಲೂ ಬಾಕ್ಸ್​ ಆಫೀಸ್​ ಸುಲ್ತಾನ  ದರ್ಶನ್​. ಈ ಬಾರಿ ದರ್ಶನ್​ ಕ್ರಿಕೆಟ್​ ಆಡಲಿಲ್ಲ. ...Kannada News Portal