shana

ಬೆಂಗಳೂರು: ತಾತನ ಮುದ್ದಿನ ಮೊಮ್ಮಗ ಹೇರಂಭ ಶಾನ್, ತಂದೆ ತಾಯಿಯ ಮುದ್ದಿನ ಮಗ, 7ನೇ ತರಗತಿವರೆಗೆ ನಗರದಲ್ಲಿ ವ್ಯಾಸಂಗ ಮಾಡಿದ, ನಂತರ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಡಿಪ್ಲೊಮಾ ಓದಿರುವ ಈತನಿಗೆ ವಿದೇಶದಲ್ಲಿ ಗೆಳೆಯರು ಹೆಚ್ಚು ಇದ್ದಾರೆ. ತಮ್ಮ ಬಹುದಿನದ ಬದಲಾವಣೆಯ ಬಯಕೆಯಿಂದ ಮಹಿಳೆಯಾಗಿ ಬದಲಾಗಿದ್ದಾರೆ. ಆದರೆ ಇವರು ಬದಲಾಗುವುದಕ್ಕೂ ಮುಂಚಿನ ಕೆಲವು ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು. ಡಾ.ಜಿ ಪರಮೇಶ್ವರ್​ ಮತ್ತು ಕನ್ನಿಕಾ ಪರಮೇಶ್ವರಿಯದ್ದು ಪ್ರೇಮ ವಿವಾಹ. ಈ ಸುಖಿ ಕುಟುಂಬದಲ್ಲಿ ಹುಟ್ಟಿದ ಗಂಡು ಮಗುವೇ ಶಶಾಂಕ್​. ಏಕೈಕ ಮಗನಾಗಿದ್ದ ಇವರ ಮೊದಲ ಹೆಸರು “ಹೇರಂಭ” ಅಂದರೆ ಗಣೇಶ ಎಂದು ಇಡಲಾಗಿತ್ತು. ಪರಮೇಶ್ವರ್​ ಅವರ ತಂದೆ ಎಚ್​. ಎಂ. ಗಂಗಾಧರಯ್ಯ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಆಗ ಬೌದ್ಧ ಧರ್ಮದ ಪ್ರಕಾರ ತಮ್ಮ ಮೊಮ್ಮಗನಿಗೆ ಹೆಸರಿಡುವ ಆಸೆ ವ್ಯಕ್ತಪಡಿಸಿದರು, ಅವರ ತಾತನವರ ಆಸೆಯಂತೆ ಹೇರಂಭ ಹೆಸರಿನ ಬದಲಾಗಿ “ಶಶಾಂಕ್”​ ಎಂದು ತಮ್ಮ ಮಗನಿಗೆ ಪರಮೇಶ್ವರ್​ ದಂಪತಿಗಳು ಮರು ನಾಮಕರಣ ಮಾಡಿದ್ದರು.

G parameshwar Familyಈ ಬಗ್ಗೆ ಒಂದು ಸಂದರ್ಶನದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಪರಮೇಶ್ವರ್​ ಅವರು ‘‘ ಪೈಲಟ್​ ಟ್ರೈನಿಂಗ್​ಗೆ ನ್ಯೂಜಿಲೆಂಡ್​ಗೆ ಹೋಗಿದ್ದ ಶಶಾಂಕ್​ ಅಲ್ಲಿಂದ ಕರೆ ಮಾಡಿ ನಾನು ನನ್ನ ಹೆಸರನ್ನು ಬದಲಾಯಿಸಿಕೊಳ್ಳಬೇಕು ಎಂದು ಕೇಳಿದ್ದರು. ಆಗ ನಾನು ಯಾಕಪ್ಪ ಇದೇ ಚನ್ನಾಗಿದ್ಯಲ್ಲ ಎಂದು ಹೇಳಿದ್ದೆ. ಆದರೆ ತನ್ನ ಹೆಸರನ್ನು ಶಶಾಂಕ್​ ನಿಂದ ಶಾನ್​ ಎಂದು ಮಾಡಿಕೊಂಡಿದ್ದಾನೆ ಎಂದು ಪರಮೇಶ್ವರ್​ ಅವರು ಹೇಳಿದ್ದರು.

ಈಗ ಶಾನ್​ ಆಗಿದ್ದ ಪರಮೇಶ್ವರ್​ ಅವರ ಮಗ ಶಾನಾ ಆಗಿ ತಮ್ಮ ಲಿಂಗತ್ವವನ್ನೇ ಬದಲಾವಣೆ ಮಾಡಿಕೊಂಡಿದ್ದಾರೆ. ಈ ಲಿಂಗತ್ವ ಬದಲಾವಣೆ ಬಗ್ಗೆಯೂ ಅವರು ಹೇಳಿದ್ದು, ದಶಕಗಳ ಕಾಲ ತನ್ನಲ್ಲಾದ ಬದಲಾವಣೆಯ ಪರಿಣಾಮವಾಗಿ ನಾನು ಹೆಣ್ಣಾಗಿ ಪರಿವರ್ತನೆ ಆಗಿದ್ದೇನೆ ಆದರೆ ನಾನು ಸಲಿಂಗಿಯಲ್ಲ ಎಂದು ಅವರು ಹೇಳಿಕೊಂಡಿರುವುದು ಅವರ ಮನೋಧೈರ್ಯಕ್ಕೆ ಹಿಡಿದ ಕನ್ನಡಿ.

ಮಹಿಳೆಯರ ಏಳಿಗೆಗಾಗಿ ತಮ್ಮ ಜೀವನ ಮುಡಿಪು…!!!

shanaಮಹಿಳೆಯಾಗಿ ಬದಲಾವಣೆಯಾದ ಮುಖ್ಯ ಉದ್ದೇಶವೇ ನೊಂದ ಮಹಿಳೆಯರ ಕಲ್ಯಾಣಕ್ಕಾಗಿ ದುಡಿಯುವುದು,  ದಶಕಗಳಿಂದ ಅವರನ್ನು ಕಾಡಿದ ಭಾವನೆಗಳು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾದ ಮಹಿಳೆಯರ ಕಲ್ಯಾಣಕ್ಕಾಗಿ ಅವರು ತಮ್ಮ ಸ್ವ ಇಚ್ಛೆಯಂತೆ ಅವರಿಗೆ ಇಷ್ಟವಾದ ಲಿಂಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಒಂದು ಸ್ವತಂತ್ರ ಸಂಸ್ಥೆ ಸ್ಥಾಪಿಸಿ ಯುದ್ಧದಲ್ಲಿ ಮಡಿದ ಯೋಧರ ಮಡದಿಯರು, ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯರು ಸೇರಿದಂತೆ ಸಮಾಜದಲ್ಲಿ ತುಳಿತಕ್ಕೊಳಗಾದ ಮಹಿಳೆಯರ ಉದ್ದಾರಕ್ಕೆ ತಮ್ಮನ್ನು ತಾವು ಮುಡಿಪಾಗಿಡುವುದಾಗಿ ಹೇಳಿದ್ದಾರೆ.

ಆಟೋಮೊಬೈಲ್​ ಉದ್ದಿಮೆಯ ಜೊತೆಗೆ ಮಹಿಳಾ ಸಬಲೀಕರಣದ ಆಶಯ…!

ಸ್ಪೋರ್ಟ್ಸ್​​ ಆಟೋಮೊಬೈಲ್ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿ ಯಶಸ್ವಿ ಉದ್ಯಮಿಯಾಗಿದ್ದ ಶಾನ್​, ಶಾನಾ ಆದಮೇಲು ಅದನ್ನು ಮುಂದುವರೆಸಲಿದ್ದು ಅದರ ಜೊತೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಭಾರತದಲ್ಲಿ ಮಹಿಳೆಯರ ಕಷ್ಟಕ್ಕೆ ಸ್ಪಂಧಿಸುವ ಮತ್ತು ಅವರನ್ನು ಸಬಲೀಕರಣಗೊಳಿಸುವ ಕಾಯಕಕ್ಕೆ ಇವರು ಕೈ ಹಾಕಲಿದ್ದಾರೆ.

ಗಂಡು ಹೆಣ್ಣಾಗುವುದು ಎಂದರೆ ಕೇವಲ ದೈಹಿಕ ಬದಲಾವಣೆ ಮಾತ್ರವಲ್ಲ…!!!!

shanaa

ಪುರುಷ ಪ್ರಧಾನ ಈ ಸಮಾಜದಲ್ಲಿ ಹೆಣ್ಣನ್ನು ಅಬಲೆ ಎಂದೇ ನೋಡುತ್ತಾರೆ, ಆದರೆ ಒಬ್ಬ ಗಂಡು ಹೆಣ್ಣಾಗಿ ಬದಲಾಗುವುದು ಎಂದರೆ ಅದು ಕೇವಲ ದೈಹಿಕ ಬದಲಾವಣೆ ಮಾತ್ರ ಆಗಲಾರದು, ಲಿಂಗ ಬದಲಾವಣೆ ಎಂದರೆ ಅದು ಸಾಮಾನ್ಯವೂ ಅಲ್ಲ, ಹಾಗಾಗಿ ಈಗ ತಮ್ಮ ಅಚಲ ನಿರ್ಧಾರದಂತೆ ಹೆಣ್ಣಾಗಿ ಆ ಸಮುದಾಯದ ಏಳಿಗೆಗಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿರುವುದರಿಂದ ಅವರು ಅಂದುಕೊಂಡಿರುವ ಕೆಲಸಗಳೆಲ್ಲಾ ಕೈಗೂಡಲಿ. ಕಟ್ಟುಪಾಡಿನ ಸಮಾಜದಲ್ಲಿ ಇವರ ನಿರ್ಧಾರ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ.

Please follow and like us:
0
http://bp9news.com/wp-content/uploads/2018/03/shana-1.jpghttp://bp9news.com/wp-content/uploads/2018/03/shana-1-150x150.jpgBP9 News Bureauಪ್ರಮುಖG Parmeshwar family,shasank to shaana,Why HM ganagadaraiahs grand son herambha converted to shanaಬೆಂಗಳೂರು: ತಾತನ ಮುದ್ದಿನ ಮೊಮ್ಮಗ ಹೇರಂಭ ಶಾನ್, ತಂದೆ ತಾಯಿಯ ಮುದ್ದಿನ ಮಗ, 7ನೇ ತರಗತಿವರೆಗೆ ನಗರದಲ್ಲಿ ವ್ಯಾಸಂಗ ಮಾಡಿದ, ನಂತರ ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಡಿಪ್ಲೊಮಾ ಓದಿರುವ ಈತನಿಗೆ ವಿದೇಶದಲ್ಲಿ ಗೆಳೆಯರು ಹೆಚ್ಚು ಇದ್ದಾರೆ. ತಮ್ಮ ಬಹುದಿನದ ಬದಲಾವಣೆಯ ಬಯಕೆಯಿಂದ ಮಹಿಳೆಯಾಗಿ ಬದಲಾಗಿದ್ದಾರೆ. ಆದರೆ ಇವರು ಬದಲಾಗುವುದಕ್ಕೂ ಮುಂಚಿನ ಕೆಲವು ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು. ಡಾ.ಜಿ ಪರಮೇಶ್ವರ್​ ಮತ್ತು ಕನ್ನಿಕಾ ಪರಮೇಶ್ವರಿಯದ್ದು ಪ್ರೇಮ ವಿವಾಹ. ಈ ಸುಖಿ ಕುಟುಂಬದಲ್ಲಿ ಹುಟ್ಟಿದ...Kannada News Portal