ಹೊಸದಿಲ್ಲಿ: ಪ್ಲಾಸ್ಟಿಕ್ ಮಾಲಿನ್ಯ ಜಾಗೃತಿಗೆಆಕೆಯದು ಸದಾ ಪರಿಸರಕ್ಕಾಗಿ ತುಡಿಯುವ ಮನಸ್ಸು. ಪರಿಸರವಿದ್ದರೆ ನಾವೆನ್ನುವ ಆಕೆ ಇದೇ ಉದ್ದೇಶಕ್ಕಾಗಿ ಪಾದಯಾತ್ರೆ ಕೈಗೊಂಡು ಸುದ್ದಿಯಾಗಿದ್ದಾಳೆ. ಪರಿಸರ ರಕ್ಷಣೆ ಜಾಗೃತಿಗೆ ಕಾಲ್ನಡಿಗೆಯಲ್ಲಿ ಹೊರಟ ಆಕೆ ಕ್ರಮಿಸಿದ್ದು ಬರೋಬ್ಬರಿ 1,100 ಕಿಮೀಗಳನ್ನು. 32 ವರ್ಷದ ರಾಜೇಶ್ವರಿ ಸಿಂಗ್ ಏಪ್ರೀಲ್ 22 ರಂದು ವಡೋದರಾದಿಂದ ತಮ್ಮ ನಡಿಗೆಯನ್ನು ಆರಂಭಿಸಿ, 45 ದಿನಗಳ ಬಳಿಕ ವಿಶ್ವ ಪರಿಸರ ದಿನದ ಮುನ್ನದಿನ ಜೂನ್ 4 ರ (ಸೋಮವಾರ) ಮುಂಜಾನೆ ರಾಷ್ಟ್ರ ರಾಜಧಾನಿಯನ್ನು ತಲುಪಿದ್ದಾಳೆ.

ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯ( ‘ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಿ’ )ವನ್ನು ಮನಸ್ಸಿನಲ್ಲಿಟ್ಟುಕೊಂಡ ಸಿಂಗ್ ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ನಿರ್ಧರಿಸಿ ಗುಜರಾತಿನ ವಡೋದರಾದಿಂದ ಪಾದಯಾತ್ರೆಯನ್ನುಆರಂಭಿಸಿದರು. ರಾಜಸ್ಥಾನ, ಹರಿಯಾಣಾ ಮಾರ್ಗವಾಗಿ ಪ್ರಯಾಣಿಸಿದ ಸಿಂಗ್ ತಮಗೆದುರಾದ ಗ್ರಾಮ, ನಗರವಾಸಿಗಳ ಜತೆ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವುದರ ಅಗತ್ಯದ ಬಗ್ಗೆ ಚರ್ಚಿಸುತ್ತ ಮುನ್ನಡೆದರು.

ವಿಶ್ವ ಪರಿಸರ ದಿನದ ಮುನ್ನಾದಿನ ರಾಜಧಾನಿ ತಲುಪಿದ ಅವರನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ)ದ ವತಿಯಿಂದ ಎರಿಕ್ ಸೊಲ್ಹೆಮ್ ಸನ್ಮಾನಿಸಿದರು. ಸಿಂಗ್ ಅವರು ತಮ್ಮ ಪ್ರಯಾಣದ ಕೊನೆಯ ಹೆಜ್ಜೆಗಳನ್ನು ಸಂಪನ್ನಗೊಳಿಸುವ ಸಂದರ್ಭದಲ್ಲಿ ಹುರಿದುಂಬಿಸಲು ನಟಿ ದಿಯಾ ಮಿರ್ಜಾ ಉಪಸ್ಥಿತರಿದ್ದರು.

ತಮ್ಮ ಪ್ರಯಾಣದಲ್ಲಿ ಅವರು ನೀರಿನ ಬಾಟಲಿಯನ್ನು ಇಟ್ಟುಕೊಂಡಿರಲಿಲ್ಲ. ಇದರಿಂದ ನನಗ್ಯಾವ ಸಮಸ್ಯೆಯೂ ಆಗಲಿಲ್ಲ. ಆದರೆ ಜನರು ಪ್ಲಾಸ್ಟಿಕ್ ಬಾಟಲಿಗಳ ಮೇಲೆ ಎಷ್ಟೊಂದು ಅವಲಂಬಿತರಾಗಿದ್ದಾರೆ? ನಿಮ್ಮದೇ ಆದ ನೀರಿನ ಬಾಟಲಿಯನ್ನು ಪ್ರಯಾಣದ ಸಂದರ್ಭದಲ್ಲಿ ಇಟ್ಟುಕೊಳ್ಳಿ. ಸಾಧ್ಯವಾದಾಗಲೆಲ್ಲ ಅದನ್ನು ತುಂಬಿಸಿಕೊಳ್ಳಿ. ವಿಶೇಷವಾಗಿ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡಬೇಕು . ಇಂತಹ ಸಣ್ಣಪುಟ್ಟ ಹೆಜ್ಜೆಗಳನ್ನಿಡುವುದರ ಮೂಲಕ ಪ್ರತಿಯೊಬ್ಬ ವ್ಯಕ್ತಿ ಕೂಡ ಬದಲಾವಣೆ ತರಲು ಸಾಧ್ಯ ಎನ್ನುತ್ತಾರೆ ಸಿಂಗ್.

Please follow and like us:
0
http://bp9news.com/wp-content/uploads/2018/06/ES-image-1-3.jpghttp://bp9news.com/wp-content/uploads/2018/06/ES-image-1-3-150x150.jpgPolitical Bureauಕೃಷಿಪ್ರಮುಖ100 km for environment,Woman hiking 1ಹೊಸದಿಲ್ಲಿ: ಪ್ಲಾಸ್ಟಿಕ್ ಮಾಲಿನ್ಯ ಜಾಗೃತಿಗೆಆಕೆಯದು ಸದಾ ಪರಿಸರಕ್ಕಾಗಿ ತುಡಿಯುವ ಮನಸ್ಸು. ಪರಿಸರವಿದ್ದರೆ ನಾವೆನ್ನುವ ಆಕೆ ಇದೇ ಉದ್ದೇಶಕ್ಕಾಗಿ ಪಾದಯಾತ್ರೆ ಕೈಗೊಂಡು ಸುದ್ದಿಯಾಗಿದ್ದಾಳೆ. ಪರಿಸರ ರಕ್ಷಣೆ ಜಾಗೃತಿಗೆ ಕಾಲ್ನಡಿಗೆಯಲ್ಲಿ ಹೊರಟ ಆಕೆ ಕ್ರಮಿಸಿದ್ದು ಬರೋಬ್ಬರಿ 1,100 ಕಿಮೀಗಳನ್ನು. 32 ವರ್ಷದ ರಾಜೇಶ್ವರಿ ಸಿಂಗ್ ಏಪ್ರೀಲ್ 22 ರಂದು ವಡೋದರಾದಿಂದ ತಮ್ಮ ನಡಿಗೆಯನ್ನು ಆರಂಭಿಸಿ, 45 ದಿನಗಳ ಬಳಿಕ ವಿಶ್ವ ಪರಿಸರ ದಿನದ ಮುನ್ನದಿನ ಜೂನ್ 4 ರ (ಸೋಮವಾರ) ಮುಂಜಾನೆ...Kannada News Portal