ಸಿನಿಮಾ ಇಂಡಸ್ಟ್ರಿಯಲ್ಲಿ  ಅನಭಿಶಕ್ತೆ ನಾಯಕಿಯಾಗಿ ಮೆರೆದ  ನಟಿ ಅಂದ್ರೆ ಅದು ಶ್ರೀದೇವಿ. ದಶಕಗಳ ಕಾಲ ತಮ್ಮ  ನಂ.1 ತಾರೆಯಾಗಿ ಮೆರೆದವರು ಕನಸಿನ ರಾಣಿ ಶ್ರೀದೇವಿ. ಆದರೆ ದುರಂತ ಸಾವಿಗೆ ಬಲಿಯಾದ್ರು ಚಂದನದ ಚೆಲುವೆ. ಆದರೆ ಅವರ ನಟನೆ ಮಾತ್ರ ಅಚ್ಚಳಿಯದೇ ಉಳಿಯದು. ಅಮ್ಮ ಶ್ರೀದೇವಿಗೆ ಒಂದು ಆಸೆ ಇತ್ತಂತೆ ಏನಪ್ಪಾ ಅಂದ್ರೆ ಮಗಳು ಜಾಹ್ನವಿಯನ್ನು ಸಿನಿಮಾಗೆ ಪರಿಚಯಿಸಿ, ಅವಳನ್ನು ಅದ್ಭುತ ಕಲಾವಿದೆಯನ್ನಾಗಿ ಮಾಡಬೇಕೆಂಬ ಬಹುದೊಡ್ಡ ಕನಸಿತ್ತಂತೆ. ಆದರೆ ಮಗಳು ಸಿನಿಮಾ ಫೀಲ್ಡ್​ಗೆ  ಧಡಕ್​ ಚಿತ್ರದೊಂದಿಗೆ ಸಿನಿ ಜರ್ನಿ ಶುರು ಮಾಡಿದ್ರು , ಅದನ್ನು ನೋಡಲು ಅಮ್ಮನೇ ಇಲ್ಲ. ಆದರೆ ಅಪ್ಪ, ಮಗಳ ಸಿನಿ ಟ್ರೈಲರ್​ ನೋಡಿ ಸಿಕ್ಕಾಪಟ್ಟೆ ಕೊಂಡಾಡಿದ್ದಾರಂತೆ.

ಇದೀಗ ಅಮ್ಮನ ಆರ್ಶೀವಾದ ನಮ್ಮ ಮೇಲೆ ಇದೆ. ಜಾಹ್ನವಿ  ಕಪೂರ್​ ಅವರು ಧಡಕ್​ ಸಿನಿಮಾದೊಂದಿಗೆ ಸಿನಿ ಜರ್ನಿ ಆರಂಭ ಮಾಡಿದ್ದಾರೆ.  ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಿದ್ದಾರೆ. ಈಗಾಗಲೇ ಧಡಕ್​ ಸಿನಿಮಾ ಟ್ರೇಲರ್ ರಿಲೀಸ್​ ಆಗಿದ್ದು, ಬೋನಿ ಕಪೂರ್​ ವಾವ್ಹ್​ ಎಂತಹ ನೈಜ ಅಭಿನಯ ಮಾಡುತ್ತೀಯ ಎಂದು ಮಗಳಿಗೆ ಮೆಚ್ಚುಗೆ ನೀಡಿದ್ದಾರೆ. ಚಿತ್ರದಲ್ಲಿ  ಜಾಹ್ನವಿ ನಟನೆ ಕುರಿತು ಅವರ ತಂದೆ ಬೋನಿ ಕಪೂರ್​ ರವರ ಪ್ರತಿಕ್ರಿಯೆ ತಿಳಿಯಲು ಪ್ರೇಕ್ಷಕರು  ಕಾಯುತ್ತಿದ್ದರು.

ಚಿತ್ರದ ಪೋಸ್ಟರ್ ಗಳು ಹಾಗೂ ಮೊದಲ ಹಾಡು ಈಗಾಗಲೇ ರಿಲೀಸ್ ಆಗಿದ್ದು ನೋಡುಗರ ಮೆಚ್ಚುಗೆ ಪಡೆದಿದೆ. ಚಿತ್ರದ ಮೊದಲ ನೋಟವು ಪ್ರೇಕ್ಷಕರ ಹೃದಯ ಮುಟ್ಟಿದ್ದು, ಜಾಹ್ನವಿ ಅವರ ಕುಟುಂಬವೂ ಚಲನಚಿತ್ರಕ್ಕೆ ಮೆಚ್ಚುಗೆ ನೀಡಿದ್ದಾರೆ. ಇಡೀ ಕಪೂರ್ ಕುಟುಂಬವು ಚಿತ್ರದ ಟ್ರೇಲರ್ ಬಿಡುಗಡೆ ಸಮಯದಲ್ಲಿ ಜಾಹ್ನವಿಗೆ ಸಂಪೂರ್ಣ ಬೆಂಬಲ ನೀಡಿದೆ.

ಕರಣ್ ಜೊಹರ್ ವರ ಧರ್ಮ ಪ್ರೊಡಕ್ಷನ್‍ನಲ್ಲಿ ಈ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದಲ್ಲಿ ಜಾಹ್ನವಿ ಕಪೂರ್ ಅವರ ಜೊತೆ ಬಾಲಿವುಡ್‍ನ ಖ್ಯಾತ ನಟ ಶಾಹಿದ್ ಕಪೂರ್ ರವರ ಸಹೋದರ ಇಶಾನ್ ಖಟ್ಟರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಧಡಕ್ ಸೂಪರ್ ಹಿಟ್ ಮರಾಠಿಯ ‘ಸೈರಾಟ್’ ಚಿತ್ರದ ರಿಮೇಕ್ ಆಗಿದ್ದು ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಚಿತ್ರದ ಮೊದಲ ಹಾಡಿನಲ್ಲಿ ಜಾಹ್ನವಿ ಹಾಗೂ ಇಶಾನ್ ಜೋಡಿ ಪ್ರೇಕ್ಷಕರಿಗೆ ಬಹುಮೆಚ್ಚುಗೆ ಆಗಿದ್ದು, ಹಾಡಿನಲ್ಲಿ ಇಬ್ಬರೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಎರಡು ಹೃದಯಗಳು ಪ್ರೀತಿಸುವ ಕಥೆ ಇದಾಗಿದ್ದು, ಶಶಾಂಕ್ ಖೈತಾನ್ ಚಿತ್ರದ ನಿರ್ದೇಶಕರಾಗಿದ್ದು, ಅಜಯ್ ಅತುಲ್ ಸಂಗೀತ ನೀಡಿದ್ದಾರೆ. ಜುಲೈ 20 ರಂದು  ಚಿತ್ರ ಬಿಡುಗಡೆಯಾಗಲಿದೆ.

Please follow and like us:
0
http://bp9news.com/wp-content/uploads/2018/06/jhanvi-kapoor-640x480-51475495565-1504961808.jpghttp://bp9news.com/wp-content/uploads/2018/06/jhanvi-kapoor-640x480-51475495565-1504961808-150x150.jpgBP9 Bureauಸಿನಿಮಾಸಿನಿಮಾ ಇಂಡಸ್ಟ್ರಿಯಲ್ಲಿ  ಅನಭಿಶಕ್ತೆ ನಾಯಕಿಯಾಗಿ ಮೆರೆದ  ನಟಿ ಅಂದ್ರೆ ಅದು ಶ್ರೀದೇವಿ. ದಶಕಗಳ ಕಾಲ ತಮ್ಮ  ನಂ.1 ತಾರೆಯಾಗಿ ಮೆರೆದವರು ಕನಸಿನ ರಾಣಿ ಶ್ರೀದೇವಿ. ಆದರೆ ದುರಂತ ಸಾವಿಗೆ ಬಲಿಯಾದ್ರು ಚಂದನದ ಚೆಲುವೆ. ಆದರೆ ಅವರ ನಟನೆ ಮಾತ್ರ ಅಚ್ಚಳಿಯದೇ ಉಳಿಯದು. ಅಮ್ಮ ಶ್ರೀದೇವಿಗೆ ಒಂದು ಆಸೆ ಇತ್ತಂತೆ ಏನಪ್ಪಾ ಅಂದ್ರೆ ಮಗಳು ಜಾಹ್ನವಿಯನ್ನು ಸಿನಿಮಾಗೆ ಪರಿಚಯಿಸಿ, ಅವಳನ್ನು ಅದ್ಭುತ ಕಲಾವಿದೆಯನ್ನಾಗಿ ಮಾಡಬೇಕೆಂಬ ಬಹುದೊಡ್ಡ ಕನಸಿತ್ತಂತೆ. ಆದರೆ ಮಗಳು...Kannada News Portal