ಬೆಂಗಳೂರು : ಚುನಾವಣಾ ಫಲಿತಾಂಶ ಬಂದು 15 ದಿನವಾದ್ರೂ, ಮೈತ್ರಿ ಸರ್ಕಾರ ತಮ್ಮ ತಮ್ಮ ಪಾಲಿನ ಖಾತೆಗಳ ಬಗ್ಗೆ, ಜೆಡಿಎಸ್ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ವಿಜಯಪುರ ನಗರ ಶಾಸಕ, ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ ಯತ್ನಾಳರು ಕ್ಷೇತ್ರದ ಜನಸೇವೆಗಾಗಿ ದುಮುಕಿದ್ದಾರೆ.

ಹೌದು, ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರಿಗೆ ಆಶ್ರಯ ಮನೆ ಕೊಡಿಸಲು ಮತ್ತು ಇರುವ ಮನೆಯನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ಹಣ ಮತ್ತು ಫಾರಂಗಳನ್ನು ನೀಡಲಾಗಿದೆ, ತಾವು ನನ್ನ ಕಚೇರಿಗೆ ಆಗಮಿಸಿ ಸಂಬಂಧ ಪಟ್ಟ ದಾಖಲಾತಿ ಮತ್ತು ಮಾಹಿತಿ ಪಡೆಯುವಂತೆ ವಿನಂತಿಸಿ ಕೊಂಡಿದ್ದಾರೆ.

ಇನ್ನು ಯತ್ನಾಳರು ತಮ್ಮ ಫೇಸ್ಬುಕ್ ಮತ್ತು ವಾಟ್ಸಪ್ಗಳಲ್ಲಿ ಈ ಕೆಳಕಂಡಂತೆ ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಜಯಪುರ ಮಹಾನಗರ ಪಾಲಿಕೆಗೆ ಎಲ್ಲಾ ವರ್ಗದವರಿಗಾಗಿ ಆಶ್ರಯ ಮನೆಗಳು ಮತ್ತು ಮನೆ ಕಟ್ಟಿಕೊಳ್ಳಲು ಸಹಾಯಧನ ಬಂದಿದೆ. ಆಸಕ್ತರು ಬಿ.ಪಿ.ಎಲ್ ಕಾರ್ಡ, ಓಟರ್ ಐಡಿ, ಆಧಾರ ಕಾರ್ಡ, ಇವುಗಳ ಜೆರಾಕ್ಸ್ ಪ್ರತಿ ಜೊತೆ ಒಂದು ಫೋಟೊ ಕೂಡಲೆ ನೀಡಬೇಕು, ನಂತರ ಜಾತಿ ಧೃಡೀಕರಣ ಮತ್ತು ಆದಾಯ ಪ್ರಮಾಣ ಪತ್ರ , ಬ್ಯಾಂಕ್ ಪಾಸ ಬುಕ್ ನೀಡಬೇಕು. ಮತ್ತು ಎಸ್.ಸಿ,& ಎಸ್. ಟಿ ಜನಾಂಗದವರಿಗಾಗಿ ಮನೆ ಕಟ್ಟಿಕೊಳ್ಳಲು ಸಹಾಯಧನ ಬಂದಿದೆ. ಜಾಗದ ದಾಖಲಾತಿಗಳ ಜೊತೆ ಮೇಲಿನ ಎಲ್ಲಾ ಕಾಗದ ಪತ್ರ ನೀಡಬೇಕು. ಉಳಿದಂತೆ ಹೆಚ್ಚಿನ ಮಾಹಿತಿ ಮತ್ತು ಅರ್ಜಿಫಾರಂಗಾಗಿ ಶಾಸಕರ ಕಛೇರಿಯನ್ನು ಸಂಪರ್ಕಿಸಿರಿ ಎಂದು ಕೇಳಿಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/06/yathnalh.jpghttp://bp9news.com/wp-content/uploads/2018/06/yathnalh-150x150.jpgPolitical Bureauಪ್ರಮುಖರಾಜಕೀಯವಿಜಯಪುರwho has been the real mentor of the real society in 15 days as MLA,Yatnalಬೆಂಗಳೂರು : ಚುನಾವಣಾ ಫಲಿತಾಂಶ ಬಂದು 15 ದಿನವಾದ್ರೂ, ಮೈತ್ರಿ ಸರ್ಕಾರ ತಮ್ಮ ತಮ್ಮ ಪಾಲಿನ ಖಾತೆಗಳ ಬಗ್ಗೆ, ಜೆಡಿಎಸ್ ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಭಿ ನಡೆಸುತ್ತಿದ್ದಾರೆ. ಆದರೆ ಇತ್ತ ಬಿಜೆಪಿ ವಿಜಯಪುರ ನಗರ ಶಾಸಕ, ಹಿಂದೂ ಹುಲಿ ಖ್ಯಾತಿಯ ಬಸನಗೌಡ ಪಾಟೀಲ ಯತ್ನಾಳರು ಕ್ಷೇತ್ರದ ಜನಸೇವೆಗಾಗಿ ದುಮುಕಿದ್ದಾರೆ. ಹೌದು, ಸ್ವತಃ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಸಾಮಾಜಿಕ ಜಾಲತಾಣಗಳ ಮೂಲಕ ಕ್ಷೇತ್ರದ ಜನರಿಗೆ ಆಶ್ರಯ ಮನೆ ಕೊಡಿಸಲು...Kannada News Portal