ಕಿಚ್ಚ ಸುದೀಪ್​ ಅಭಿನಯದ ದಿ ವಿಲನ್ ಸಿನಿಮಾದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಮಾಸ್​ ಎಂಟ್ರಿಗೆ,  ಜೋಗಿ ಪ್ರೇಮ್​ ಒಂದು ಸೂಪರ್​ ಸಾಂಗ್ ಮಾಡಿದ್ದಾರೆ.  ನಿನ್ನೆ-ಮೊನ್ನೆ ಬಂದೋರೆಲ್ಲಾ ನಂಬರ್​  ಒನ್​ ಅಂತಾರೋ…! ಅನ್ನೋ ಲಿರಿಕ್ಸ್​ನಿಂದ ಆರಂಭವಾಗುವ ಹಾಡಿಗೆ ಕೋ ಡ್ಯಾನ್ಸರ್​ಗಳ ಜೊತೆಗೆ  ಶಿವಣ್ಣ ಸಖತ್​ ಎನರ್ಜಿಟಿಕ್​ ಆಗಿ ಹೆಜ್ಜೆ ಹಾಕಿದ್ದಾರೆ.  ಈ ಹಾಡಿನ ಶೂಟ್​ ಮೂಲಕ ಬಹುತೇಕ  ದಿ ವಿಲನ್​ ಸಿನಿಮಾ  ಶೂಟಿಂಗ್  ಮುಕ್ತಾಯವಾಗಿದ್ದು, ಅಭಿಮಾನಿಗಳು ಸಿನಿಮಾ ರಿಲೀಸ್​ಗಾಗಿ ಕಾದು ಕುಳಿತಿದ್ದಾರೆ.

ಅಂದಹಾಗೇ ಕಿಚ್ಚ ಸುದೀಪ್​ ಮತ್ತು ಮಾಸ್​ ಹೀರೋ ಕಾಂಬೀನೇಷನ್​ನ ದಿ ವಿಲನ್​ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದ್ದ, ಅಭಿಮಾನಿಗಳು ಮತ್ತಷ್ಟು ಕೌತುಕವನ್ನಿಟ್ಟುಕೊಳ್ಳುವಂತೆ ಮಾಡಿದೆ. ಅಲ್ಲದೇ ಶಿವಣ್ಣನ   ಈ ಮಾಸ್​ ಸಾಂಗ್​ ಒಂದಷ್ಟು ಸ್ಟಾರ್​ ಅಭಿಮಾನಿಗಳು ಯೋಚಿಸುವಂತೆ ಮಾಡಿರೋದು ಸತ್ಯ.

ಮಾಸ್​ ಲುಕ್​ನಲ್ಲಿ ಕಾಣಿಸಿಕೊಂಡಿರುವ  ಶಿವಣ್ಣ ಈ ಹಾಡಿನಲ್ಲಿ  ಕೋ ಡ್ಯಾನ್ಸರ್​ಗಳು  ಹ್ಯಾಟ್ರಿಕ್​ ಹೀರೋನ ಎನರ್ಜಿಗೆ ಸ್ಟೆಪ್​  ಹಾಕಿದ್ದಾರೆ.ಇನ್ನು  ಅದ್ಧೂರಿ ಸೆಟ್​ ನಿರ್ಮಾಣ ಮಾಡಲಾಗಿದ್ದು, ಹಾಡಿಗೆ ಕೊರಿಯೋಗ್ರಾಫರ್​ ನಾಗೇಶ್​ ಡ್ಯಾನ್ಸ್ ಕಂಪೋಸ್​ ಮಾಡಿದ್ದಾರೆ. ಅರ್ಜುನ್​ ಜನ್ಯಾ ಮ್ಯೂಸಿಕ್​ ಕಂಪೋಸ್​  ಮಾಡಿರೋ ಈ ಎನರ್ಜಿಟಿಕ್​ ಹಾಡಿಗೆ  ಪ್ರೇಮ್​ ಅವರೇ ಲಿರಿಕ್ಸ್​ ಬರೆದಿದ್ದಾರೆ. ಈ ಸಾಂಗ್​ನ ನಂತರ  ಸಿನಿಮಾದ ಇನ್ನೊಂದು ಸಾಂಗ್​​ನ ಚಿತ್ರೀಕರಣ ಬಾಕಿ ಇದ್ದು, ಈ ಹಾಡಿನ ಚಿತ್ರೀಕರಣದೊಂದಿಗೆ ದಿ ವಿಲನ್​​ ಸಿನಿಮಾದ ಶೂಟಿಂಗ್​ ಕಂಪ್ಲೀಟ್ ಆಗಲಿದೆ. ಜನರು ತುಂಬಾ ದಿನದಿಂದ ಕಾಯ್ತಾ ಇರೋ ದಿ ವಿಲನ್​ ಸಿನಿಮಾ ಶೂಟ್​ ಕಂಪ್ಲೀಟ್​ ಆಗ್ತಾ ಇದ್ದು.ಪ್ರೇಮ್​​ ಈ ಮೊದಲೇ ಹೇಳಿರೋ ಡೇಟ್​​ಗೆ ಸಿನಿಮಾ ರಿಲೀಸ್​ ಮಾಡ್ತಾರಾ, ಕಾದು ನೊಡ್ಬೇಕು.

ಸ್ಯಾಂಡಲ್​ವುಡ್​ನಲ್ಲಿ ಬಾಸ್​ ಯಾರು ಎಂದು ಅಭಿಮಾನಿಗಲ ಕೋಲ್ಡ್​ ವಾರ್​ ನಡೆಯುತ್ತಿದ್ದಾಗಲೇ ರಾಕಿಂಗ್​ ಸ್ಟಾರ್​ ಬಾಸ್ ಎಂದು ಸಂಕೇತಿಸುವ​ ನಂ. ಕೊಂಡುಕೊಂಡ್ರು ತಮ್ಮ ಹೊಸ ಕಾರ್​ಗೆ ಎಂಬ ವಿಚಾರ ಬಹಳ ಸದ್ದು ಮಾಡಿತ್ತು. ಸುದೀಪ್​, ಶಿವಣ್ಣ ಹಾಗೂ ರಾಕಿಂಗ್​ ಸ್ಟಾರ್​ ಯಶ್​ ನಡುವೆ  ಬಾಸ್​ ವಿಚಾರಕ್ಕಾಗಿ ಅಭಿಮಾನಿಗಳಿಗೆ ಆಗಿಂದಾಗ್ಗೆ  ಸೋಶಿಯಲ್​ ಮಿಡಿಯಾದಲ್ಲಿ ವಾರ್​ ನಡೆಸುತ್ತಲೇ ಇರುತ್ತಾರೆ. ಇದೀಗ ವಿಲನ್​ ನಲ್ಲಿ ಶಿವಣ್ಣನ ಸಾಂಗ್​ ನಿನ್ನೆ-ಮೊನ್ನೆ ಬಂದೋರೆಲ್ಲಾ ನಂ.1 ಅಂತೆ ಅ್ನನೋ ಸಾಂಗ್​  ರಿಲೀಸ್​ ಆದರೆ ಮತ್ತಷ್ಟು ಅಭಿಮಾನಿಗಳ ನಟುವೆ ಕ್ಲ್ಯಾಷ್​  ಆಗಬಹುದು ಎನ್ನುತ್ತಿವೆ ಕೆಲ  ಮೂಲಗಳು. ಈ ಹಾಡು  ರಿಲೀಸ್​ ಆದಮೇಲೆ ಖಂಡಿತವಾಗಿಯೂ ಕೆಲ ಸ್ಟಾರ್​ನಟರ ಅಭಿಮಾನಿಗಳಲ್ಲಿ ವಾರ್​ ಆರಂಭವಾಗುತ್ತದೆ. ಈ ಹಾಡು ಸಿಕ್ಕಾಙಪಟ್ಟೆ ಟ್ರೊಲ್​ ಆಗೋದ್ರಲ್ಲಿ ಸಂಶಯವೇ ಇಲ್ಲ ಎನ್ನುತ್ತಿವೆ ಕೆಲ ಸಿನಿಮಾ ಮೂಲಗಳು. ಬಾಸ್​ ಕಾದಾಟದಲ್ಲಿ ಈ ಹಾಡನ್ನು ಬರೆಯುವುದರ ಮೂಲಕ ಜೋಗಿ  ಪ್ರೇಮ್​ ವೊಲನ್​ ಆಗ್ತಾರಾ ಎಂಬುದೇ ಅಭಿಮಾನಿಗಳ  ಪ್ರಶ್ನೆ.

Please follow and like us:
0
http://bp9news.com/wp-content/uploads/2018/06/shivanna-sudeepimage4-12-1468313789.jpghttp://bp9news.com/wp-content/uploads/2018/06/shivanna-sudeepimage4-12-1468313789-150x150.jpgBP9 Bureauಸಿನಿಮಾಕಿಚ್ಚ ಸುದೀಪ್​ ಅಭಿನಯದ ದಿ ವಿಲನ್ ಸಿನಿಮಾದಲ್ಲಿ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರ ಮಾಸ್​ ಎಂಟ್ರಿಗೆ,  ಜೋಗಿ ಪ್ರೇಮ್​ ಒಂದು ಸೂಪರ್​ ಸಾಂಗ್ ಮಾಡಿದ್ದಾರೆ.  ನಿನ್ನೆ-ಮೊನ್ನೆ ಬಂದೋರೆಲ್ಲಾ ನಂಬರ್​  ಒನ್​ ಅಂತಾರೋ...! ಅನ್ನೋ ಲಿರಿಕ್ಸ್​ನಿಂದ ಆರಂಭವಾಗುವ ಹಾಡಿಗೆ ಕೋ ಡ್ಯಾನ್ಸರ್​ಗಳ ಜೊತೆಗೆ  ಶಿವಣ್ಣ ಸಖತ್​ ಎನರ್ಜಿಟಿಕ್​ ಆಗಿ ಹೆಜ್ಜೆ ಹಾಕಿದ್ದಾರೆ.  ಈ ಹಾಡಿನ ಶೂಟ್​ ಮೂಲಕ ಬಹುತೇಕ  ದಿ ವಿಲನ್​ ಸಿನಿಮಾ  ಶೂಟಿಂಗ್  ಮುಕ್ತಾಯವಾಗಿದ್ದು, ಅಭಿಮಾನಿಗಳು ಸಿನಿಮಾ ರಿಲೀಸ್​ಗಾಗಿ...Kannada News Portal