ವಾಟ್ಸಾಪ್ ನಲ್ಲಿ ಹೊಸದಾಗಿ ಎರಡು ಫೀಚರ್ ಗಳನ್ನು ಪರಿಚಯಿಸಲಾಗಿದೆ. ಬಹುನಿರೀಕ್ಷಿತ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಈಗ ವಾಟ್ಸಾಪ್ ನಲ್ಲಿ ಲಭ್ಯವಿದೆ. ಅದರ ಜೊತೆಜೊತೆಗೆ ಟೆಕ್ಸ್ಟ್ ಸ್ಟೇಟಸ್ ಕೂಡ ಹಾಕಬಹುದು. ಈ ಹೊಸ ಫೀಚರ್ ಆಯಂಡ್ರಾಯ್ಡ್ ಹಾಗು ಐಫೋನ್ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿದೆ.

 

ವಾಟ್ಸಾಪ್ ಪಿಕ್ಚರ್ ಇನ್ ಪಿಕ್ಚರ್ ನಲ್ಲಿ ಬಳಕೆದಾರರು ವಿಡಿಯೋ ಕಾಲಿಂಗ್ ವಿಂಡೋ ಅನ್ನು ರಿಸೈಝ್ ಮಾಡಬಹುದು. ಮಲ್ಟಿ ಟಾಸ್ಕ್ ಮಾಡಬೇಕು ಎನಿಸಿದ್ರೆ ವಿಡಿಯೋವನ್ನು ಮೂಲೆಗೆ ಮೂವ್ ಮಾಡಬಹುದು. ಪಿಐಪಿ ಅನ್ನೋ ಹೊಸ ಫೀಚರ್ ಕೂಡ ಪರೀಕ್ಷೆಯ ಹಂತದಲ್ಲಿದೆ.

 

 

ಫೇಸ್ಬುಕ್ ಅಂಗಸಂಸ್ಥೆಯಾಗಿರೋ ವಾಟ್ಸಾಪ್, ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ವಾಟ್ಸಾಪ್ ಫಾರ್ ಬ್ಯುಸಿನೆಸ್ ಅನ್ನೋ ಆ್ಯಪ್ ಅನ್ನು ಕೂಡ ಸದ್ಯದಲ್ಲೇ ಲಾಂಚ್ ಮಾಡಲಿದೆ. ಈ ಆ್ಯಪ್ ಮೂಲಕ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ಗ್ರಾಹಕರೊಂದಿಗೆ ನೇರವಾಗಿ ಮಾತನಾಡಬಹುದು.

Please follow and like us:
0
http://bp9news.com/wp-content/uploads/2017/09/wwww.pnghttp://bp9news.com/wp-content/uploads/2017/09/wwww-150x150.pngFilm Bureauತಂತ್ರಜ್ಞಾನವಾಟ್ಸಾಪ್ ನಲ್ಲಿ ಹೊಸದಾಗಿ ಎರಡು ಫೀಚರ್ ಗಳನ್ನು ಪರಿಚಯಿಸಲಾಗಿದೆ. ಬಹುನಿರೀಕ್ಷಿತ ಪಿಕ್ಚರ್-ಇನ್-ಪಿಕ್ಚರ್ ಫೀಚರ್ ಈಗ ವಾಟ್ಸಾಪ್ ನಲ್ಲಿ ಲಭ್ಯವಿದೆ. ಅದರ ಜೊತೆಜೊತೆಗೆ ಟೆಕ್ಸ್ಟ್ ಸ್ಟೇಟಸ್ ಕೂಡ ಹಾಕಬಹುದು. ಈ ಹೊಸ ಫೀಚರ್ ಆಯಂಡ್ರಾಯ್ಡ್ ಹಾಗು ಐಫೋನ್ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿದೆ.   ವಾಟ್ಸಾಪ್ ಪಿಕ್ಚರ್ ಇನ್ ಪಿಕ್ಚರ್ ನಲ್ಲಿ ಬಳಕೆದಾರರು ವಿಡಿಯೋ ಕಾಲಿಂಗ್ ವಿಂಡೋ ಅನ್ನು ರಿಸೈಝ್ ಮಾಡಬಹುದು. ಮಲ್ಟಿ ಟಾಸ್ಕ್ ಮಾಡಬೇಕು ಎನಿಸಿದ್ರೆ ವಿಡಿಯೋವನ್ನು ಮೂಲೆಗೆ ಮೂವ್ ಮಾಡಬಹುದು. ಪಿಐಪಿ ಅನ್ನೋ ಹೊಸ...Kannada News Portal