ಬೆಂಗಳೂರು : 
‘ಭ್ರಮರಾ ಸಂಜೀವ್ ಶೆಟ್ಟರ್’  ಈ  ಪುಟ್ಟ ಬಾಲಕಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ  ಎಂಇಎಸ್ ಕಿಶೋರ್ ಕೇಂದ್ರದಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದೆ. ತಂದೆ ಸಂಜೀವ್ ಎಸ್ ಶೆಟ್ಟರ್ ಕಾಳಜಿ, ತಾಯಿ ಜಯಲಕ್ಷ್ಮಿ ಕಾಳಜಿ, ಅಜ್ಜಿ ಪ್ರೇಮ ಶೆಟ್ಟರ್  ಅವರ ಮಮತೆಯಲ್ಲಿ ಬೆಳೆಯುತ್ತಿದೆ ಈ ಪುಟ್ಟ ಬಾಲಕಿ. ಎಲ್ಲ ಮಕ್ಕಳಂತೆ  ಆಟವಾಡುತ್ತಾ,  ಟಿವಿ ನೋಡುತ್ತಲೇ ಹೋಮ್ ವರ್ಕ್​ ಮಾಡುವ ಈ ಹುಡುಗಿ ಉಳಿದವರಿಗಿಂತ ಹೆಚ್ಚಾಗಿ ತನ್ನಲ್ಲಿ ಆಗಾಧ ಪ್ರತಿಭೆಯನ್ನು ಅಡಿಗಿಸಿಕೊಂಡಿದ್ದಾಳೆ. ಓದಿನಲ್ಲೂ ಮುಂದು, ಆಟದಲ್ಲೂ ಮುಂದಿರುವ ಈ ಪ್ರತಿಭೆಯ ಮೆಮೋರಿ ಕೂಡಾ ತುಂಬಾ ಶಾರ್ಪ್​. ಮುದ್ದು ಮೊಗದ ಈ ಬಾಲಕಿಯ  ಬಹುಮುಖ ಪ್ರತಿಭೆಯ ಸಾಧನೆಗೆ  ಅಕ್ಷರರೂಪ ಕೊಟ್ಟು ನಿಮ್ಮ ಮುಂದೆ ಇಡುತ್ತಿದ್ದೇವೆ.

ಶಾಲಾ ಮಟ್ಟದಿಂದ ರಾಜ್ಯಮಟ್ಟದ ಒರೆಗಿನ  ಸ್ಪರ್ಧೆ ಇರಲಿ, ಯಾವುದೇ ಖಾಸಗಿ ಸಂಘ-ಸಂಸ್ಥೆಗಳ ಕಾರ್ಯಕ್ರಮವಿರಲಿ ಅಲ್ಲಿ ಭ್ರಮರಾ ಇದ್ದಾಳೆ ಎಂದರೆ  ಆ ಕಾರ್ಯಕ್ರಮದ ರಸವತ್ತತೆಯೇ ಬೇರೆಯದ್ದಾಗಿರುತ್ತದೆ. ವೇದಿಕೆಯ ಮೇಲೇರಿ ಯಾವುದೇ ಭಯವಿಲ್ಲದೆ ತನ್ನ ಪ್ರತಿಭೆಯನ್ನ ಆನಾವರಣ ಗೊಳಿಸಿದಳು ಅಂದರೆ  ನೆರೆದಿದ್ದ ಜನರಿಂದ ಚಪ್ಪಾಳೆ ಗ್ಯಾರಂಟಿ. ಈ ಚಿಕ್ಕ ವಯಸ್ಸಿನಲ್ಲೇ ಸುಮಾರು 20 ಕ್ಕೂ ಹೆಚ್ಚು ಪ್ರಶಸ್ತಿ, ಪಾರಿತೋಷಕ ಪಡೆದಿರುವುದು ಭ್ರಮರಾಳ ಸಾಧನೆಗೆ ಹಿಡಿದ ಕನ್ನಡಿಯಾಗಿದೆ.

 

ಇನ್ನು ಇವಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಎಷ್ಟು ಹುಚ್ಚೆಂದರೆ ,  ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ ಉತ್ಸವದ ಸಂದರ್ಭದಲ್ಲಿ  ಮಧ್ಯ ರಾತ್ರಿ 12 ರಲ್ಲಿ ನಡೆದ ಕಾರ್ಯಕ್ರಮದಲ್ಲಿ  ರಾಣಿ ಚೆನ್ನಮ್ಮನವರ ವೇಷ ಧರಿಸಿ ಭಾಗವಹಿಸಿದ್ದಲ್ಲದೆ, ಅಯೋಜಕರ ಮೆಚ್ಚುಗೆಗೆ ಕೂಡಾ ಪಾತ್ರಳಾಗಿದ್ದಳು.

 

ಭ್ರಮರಾಳಿಗೆ ಸಿಕ್ಕಿದೆ ಪ್ರಶಸ್ತಿಯ ರಾಶಿ

ಗೀತಾ ಗೋವಿಂದ ಸಂಸ್ಕೃತಿ ಸಂಘ ಬೆಂಗಳೂರು ಇವರು 2016ರಲ್ಲಿ ಅಯೋಜಿಸಿದ್ದ ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ಭ್ರಮರಾ ಆಂಜನೇಯನ ಪಾತ್ರವನ್ನು ಮಾಡಿ  ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಅಲ್ಲದೆ 2017 ರಲ್ಲಿ ಕೂಡಾ ಶ್ರೀ ರಾಮಚಂದ್ರನ ಭಕ್ತೆ ಶಬರಿ ಪಾತ್ರವನ್ನು ಮಾಡಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು.

 

2017ರಲ್ಲಿ ವೀರಶೈವ ಲಿಂಗಾಯಿತ ಮಹಿಳಾ ಒಕ್ಕೊಟ ಅಯೋಜಿಸಿದ್ದ ಮಹಿಳಾ ದಿನಾಚರಣೆಯ ಅಂಗವಾಗಿ ಭ್ರಮರಾ ಕರ್ನಾಟಕ ತಾಯಿ ಭುವನೇಶ್ವರಿಯ ಛದ್ಮವೇಶ ಧರಿಸಿ  ಸಾವಿರಾರು ಜನರ ಪ್ರಸಂಶೆಗೆ ಪಾತ್ರಳಾಗಿ,  ಈ ಪಾತ್ರಕ್ಕೆ ವಿಶೇಷ ಬಹುಮಾನ ಪಡೆದುಕೊಂಡಿದ್ದಳು. ಹಾಗೆ 2017 ರ ಸಂಕ್ರಾತಿ ಹಬ್ಬದ ಪ್ರಯುಕ್ತ ನಡೆದ ಸ್ಪದೆರ್ಯಲ್ಲಿ ಹಳ್ಳಿ ಹುಡುಗಿಯ ವೇಷ ಹಾಕಿ  ಪ್ರಥಮ ಸ್ಥಾನ ಗಳಿಸಿಕೊಂಡಿದ್ದಳು. ಮಕ್ಕಳ ದಿನಾಚರಣೆ ಪ್ರಯುಕ್ತ ಬೆಂಗಳೂರಿನ ಐಓನ್ ಕಂಪನಿಯು ಅಯೋಜಿಸಿದ್ದ 2017ರ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಭ್ರಮರಾ ಏಕಾಪಾತ್ರಾಭಿನಯ ಮಾಡಿ ಉತ್ತಮ ಪ್ರತಿಭೆ ಎಂಬ  ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯವರು ಅಯೋಜಿಸಿದ್ದ ಮಕ್ಕಳ ಹಬ್ಬ-2017 ಕಾರ್ಯಕ್ರಮದಲ್ಲಿ ಏಕಪಾತ್ರಾಭಿನಯ ಮಾಡಿ  ಉತ್ತಮ ಪ್ರತಿಭೆಯಾಗಿ ಗುರಿತಿಸಿಕೊಂಡು ಇಲಾಖೆ ವತಿಯಿಂದ ಪಾರಿತೋಷಕವನ್ನು ಪಡೆದು ಎಲ್ಲರ ಮೆಚ್ಚುಗೆಯ ಪ್ರತಿಭೆಯಾಗಿದ್ದಳು.

ಏಕಪಾತ್ರಾಭಿನಯವನ್ನ ಲೀಲಾಜಾಲವಾಗಿ ಮಾಡುವ ಭ್ರಮರಾ ಶಾಲೆಯಲ್ಲಿನ ಪ್ರತಿಭಾಕಾರಂಜಿಗಳಲ್ಲಿ ರಾಜ್ಯಮಟ್ಟದವರೆಗೂ ಹೋಗಿ ಪ್ರಶಸ್ತಿಯನ್ನ ಗೆದ್ದು ಶಾಲೆಯ ಕಿರ್ತಿಯನ್ನ ಹೆಚ್ಚಿಸಿದ್ದಾಳೆ. ಅಲ್ಲದೆ ಖಾಸಗಿ-ಸಂಘ ಸಂಸ್ಥೆಗಳ ಹಲವಾರು ಕಾರ್ಯಕ್ರಮಗಳ್ಲಿ ಭಾಗವಹಿಸಿ ಪ್ರಶಸ್ತಿ ಗರಿಯನ್ನ ಮುಡೀಗೆರಸಿಕೊಂಡಿದ್ದಾಳೆ. ಬಸವೇಶ್ವರ, ಶೂರ್ಪನಖಿ, ಕಿತ್ತೂರು ರಾಣಿ ಚೆನ್ನಮ್ಮ, ಶಬರಿ ಹೀಗೆ  ಯಾವುದೇ ಪಾತ್ರವನ್ನ ಸಲೀಸಾಗಿ ಮಾಡುವ ಭ್ರಮರಾಳಿಗೆ ಪ್ರಶಸ್ತಿಯ ಜೊತೆಗೆ ಸನ್ಮಾನಗಳು ಕೂಡಾ ದೊರೆತಿವೆ.

ನವ ಚೈತನ್ಯ ಉದಯ ಪ್ರತಿಷ್ಠಾನದವರು  ವಾರ್ಷಿಕೋತ್ಸವದ ಕಾರ್ಯಕ್ರಮಕ್ಕೆ ವಿಶೇಷ ಅಹ್ವಾನಿತರಾಗಿ ಕರೆಸಿ ಸನ್ಮಾಸಿದ್ದರು.  ಹಾವೇರಿಯ ಶ್ರೀ ಸಿಂದಗಿ ಶಾಂತವೀರೇಶ್ವರ ಧಾರ್ಮಿಕ ಪಾಠಶಾಲೆಯವರು ಭ್ರಮರಾಳ ಸಾಧನೆ ಗುರುತಿಸಿ ಸನ್ಮಾನಿಸಿದ್ದಾರೆ. ಅಲ್ಲದೆ ಶ್ರೀ ಹುಕ್ಕೇರಿ ಮಠದವರು ಸಹಿತ ಪುಟ್ಟ ಬಾಲಕಿಯ ಸಾಧನೆ ಗುರುತಿಸಿ ಸನ್ಮಾಸಿದ್ದಾರೆ. ಮಕ್ಕಳ ದಿನಾಚರಣೆಯ ದಿನ ಪ್ರತಿಷ್ಠಿತ ಎಫ್​​ಎಮ್​​​ ರೇಡಿಯೋ ಕೇಂದ್ರ 91.1 ರೇಡಿಯೋಸಿಟಿಯಲ್ಲಿ ಒಂದು ದಿನದ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ ಹಿರಿಮೆ ಕೂಡಾ ಭ್ರಮರಾಳದ್ದು. ಅಲ್ಲದೆ ಬೆಂಗಳೂರಿನ ಬಸವೇಶ್ವರನಗರದ ಮಾಸ್ಟರ್ ಕಿಡ್ಸ್​​​ ಅವರು ಈ ಮುದ್ದು ಬಾಲಕಿಯ ಸಾಧನೆ ಪರಿಗಣಿಸಿ ಕಿತ್ತೂರು ರಾಣಿ ಚೆನ್ನಮ್ಮ ಬಿರುದು ನೀಡಿ ಸನ್ಮಾನಿಸಿದ್ದಾರೆ.  ಒಟ್ಟಾರೆ ಚಿಕ್ಕ ವಯಸ್ಸಿನಲ್ಲೇ ಸಾಧನೆಯ ಮೆಟ್ಟಿಲು ಹತ್ತುತ್ತಿರುವ ಭ್ರಮರಾಳ ಸಾಧನೆಯ ದಾರಿ ಇನ್ನು ಮುಂದಕ್ಕೆ ಸಾಗಿ ದೇಶ ಮೆಚ್ಚುವ ಪ್ರತಿಭೆಯಾಗಲಿ ಎನ್ನುವುದು ಎಲ್ಲರ ಆಶಯ.

Please follow and like us:
0
http://bp9news.com/wp-content/uploads/2018/07/IMG_20180610_174625715-2.jpghttp://bp9news.com/wp-content/uploads/2018/07/IMG_20180610_174625715-2-150x150.jpgBP9 Bureauಅಂಕಣಪ್ರಮುಖಬೆಂಗಳೂರುಸಾಧಕರುಬೆಂಗಳೂರು :  'ಭ್ರಮರಾ ಸಂಜೀವ್ ಶೆಟ್ಟರ್'  ಈ  ಪುಟ್ಟ ಬಾಲಕಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ  ಎಂಇಎಸ್ ಕಿಶೋರ್ ಕೇಂದ್ರದಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗಮಾಡುತ್ತಿದೆ. ತಂದೆ ಸಂಜೀವ್ ಎಸ್ ಶೆಟ್ಟರ್ ಕಾಳಜಿ, ತಾಯಿ ಜಯಲಕ್ಷ್ಮಿ ಕಾಳಜಿ, ಅಜ್ಜಿ ಪ್ರೇಮ ಶೆಟ್ಟರ್  ಅವರ ಮಮತೆಯಲ್ಲಿ ಬೆಳೆಯುತ್ತಿದೆ ಈ ಪುಟ್ಟ ಬಾಲಕಿ. ಎಲ್ಲ ಮಕ್ಕಳಂತೆ  ಆಟವಾಡುತ್ತಾ,  ಟಿವಿ ನೋಡುತ್ತಲೇ ಹೋಮ್ ವರ್ಕ್​ ಮಾಡುವ ಈ ಹುಡುಗಿ ಉಳಿದವರಿಗಿಂತ ಹೆಚ್ಚಾಗಿ ತನ್ನಲ್ಲಿ ಆಗಾಧ ಪ್ರತಿಭೆಯನ್ನು...Kannada News Portal