ಈ ಕಾಲದಲ್ಲಿ ಮೇಕಪ್​ ಮಾಡದ ಹುಡುಗಿರನ್ನು  ನೊಡಲು ಸಾದ್ಯವೇ ಇಲ್ಲ. ಇಂದಿನ ಜೀವನ ಶೈಲಿಯೇ ಹಾಗೇ, ಸುಂದರವಾಗಿ ಕಾಣ ಬೇಕೇಂದು ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ.  ಎಲ್ಲಾ ಹುಡುಗಿಯರೂ ಕೂಡ ತಾನೂ ನೋಡುವುದಕ್ಕೆ ಆಕರ್ಷಕವಾಗಿರ ಬೇಕು, ಸುಂದರವಾಗಿರ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಿಕ್ಕಾಪಟ್ಟೆ  ಸರ್ಕಸ್​ ನಡೆಸುತ್ತಾರೆ. ಬ್ಯೂಟಿ ಪಾರ್ಲರ್​ ಗಳಿಗೆ   ಹೋಗುವುದು ಸಾಮಾನ್ಯ. ಇನ್ನೂ ವಾರಕ್ಕೆ 2-3 ಬಾರಿಯಾದ್ರೂ ಪಾರ್ಲರ್​ ಗಳಿಗೆ ಹೋಗುವುದನ್ನ ನಾವು ನೋಡಿದ್ದೇವೆ. ಆದರೆ ಮನೆಯಲ್ಲಿಯೇ ಕೇವಲ ಒಂದು ಸ್ಫೂನ್​ ಸಬ್ಬಕ್ಕಿಯಿಂದ ಮುಖ ಬೆಳ್ಳಗಾಗುತ್ತದೆ ಎಂದರೆ ನಂಬ್ತೀರಾ…..ಏನೆಲ್ಲಾ ಮಾಡಿದ್ದೀರಂತೆ ಇದನ್ನೊಮ್ಮೆ ಪ್ರಯತ್ನಿಸಿ  ನೋಡ ಬಾರದೇಕೆ?

ಖಂಡಿತಾ…. ನಿಮ್ಮ ಮುಖ ಬೆಳ್ಳಗಾಗಬೇಕಾದರೆ , ಸಬ್ಬಕ್ಕಿಯನ್ನು ನೀವು ತಿನ್ನುವ ಆಹಾರ ಪಧಾರ್ಥಗಳೊಂದಿಗೆ ಬಳಸಿದರೆ ಖಂಡಿತಾ ಆರೋಗ್ಯಕರ ಬಿಳುಪು ನಿಮ್ಮದಾಗುತ್ತದೆ. ಇನ್ನೂ ಸಬ್ಬಕ್ಕಿಯನ್ನು ಪುಡಿ ಮಾಡಿ ಹಾಲಿನೊಂದಿಗೆ ಮಿಕ್ಸ್​ ಮಾಡಿ ಮುಖಕ್ಕೆ ಹಚ್ಚಿದರೆ  ಮುಖದ ಬಣ್ಣ ಬಿಳಿಯಾಗುತ್ತದೆ.  ಸಬ್ಬಕ್ಕಿಯನ್ನು ನಿಂಬೆರಸ ಮತ್ತು ಜೇನು ತುಪ್ಪದೊಂದಿಗೆ ಮಿಕ್ಸ್​ ಮಾಡಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಕಲೆ ನಿವಾರಣೆ ಯಾಗುತ್ತದೆ. ಮುಖದ ತುಂಬಾ ಮೊಡವೆಗಳು ಇದ್ದರೆ ಸಬ್ಬಕ್ಕಿ ಪುಡಿ ಮಾಡಿ ರೋಸ್​ ವಾಟರ್​ ಬಳಕೆ ಮಾಡಿ, ಹಳದಿ ಜೊತೆ ಮಿಕ್ಸ್​ ಮಾಡಿ ಮುಖಕ್ಕೆ ಹಚ್ಚಿಕೊಂಡರೇ ಖಂಡಿತವಾಗಿಯೂ ಮೊಡವೆ ಮಾಯವಾಗುತ್ತವೆ.

ಗೋಧಿ ಬಣ್ಣ ನಿಮ್ಮದಾಗಿದ್ದರೆ ಸಬ್ಬಕ್ಕಿಯನ್ನು ಕಡ್ಲೆಹಿಟ್ಟು ಮತ್ತು ಮೊಸರಿನೊಂದಿಗೆ ಮಿಕ್ಸ್​ ಮಾಡಿ ಹಚ್ಚಿಕೊಂಡರೆ ನಿಮ್ಮ ಮುಖ ಫೇರ್​ ಆಗಿ ಕಾಣೋದ್ರಲ್ಲಿ ಸಂಶಯವಿಲ್ಲ.

ಇದೂ ಸಬ್ಬಕ್ಕಿಯ ಮುಖಕ್ಕಿರುವ ಟಿಪ್ಸ್​ ಗಳಾದರೆ, ಕೂದಲಿನ ಆರೋಗ್ಯಕ್ಕೆ ಟಿಪ್ಸ್​ ಏನಪ್ಪಾ ಅಂದ್ರೆ, ಆಲೀವ್​ ಆಯಿಲ್​ನೊಂದಿಗೆ ಸಬ್ಬಕ್ಕಿಯನ್ನು ಪುಡಿ ಮಾಡಿ ಕೂದಲಿಗೆ ಹಚ್ಚಿಕೊಂಡ್ರೆ   ಕೂದಲು ಸೊಂಪಾಗಿ ಬೆಳೆಯುತ್ತದೆ. ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಸಬ್ಬಕ್ಕಿಯನ್ನು ರೋಸ್​ವಾಟರ್​ ಮತ್ತು  ಜೇನು ತುಪ್ಪದೊಂದಿಗೆ ಮಿಕ್ಸ್​ ಮಾಡಿ ಕೂದಲಿಗೆ  ಹಾಕಿದರೆ ನಯವಾದ,ಸೊಂಪಾದ ರೇಶಿಮೆಯಂತ ಕೂದಲು ನಿಮ್ಮದಾಗುತ್ತದೆ.

Please follow and like us:
0
http://bp9news.com/wp-content/uploads/2018/03/images-7-1.jpghttp://bp9news.com/wp-content/uploads/2018/03/images-7-1-150x150.jpgBP9 Bureauಆರೋಗ್ಯಇತರೆಲೈಫ್​ ಸ್ಟೈಲ್​​ ಗುರುಈ ಕಾಲದಲ್ಲಿ ಮೇಕಪ್​ ಮಾಡದ ಹುಡುಗಿರನ್ನು  ನೊಡಲು ಸಾದ್ಯವೇ ಇಲ್ಲ. ಇಂದಿನ ಜೀವನ ಶೈಲಿಯೇ ಹಾಗೇ, ಸುಂದರವಾಗಿ ಕಾಣ ಬೇಕೇಂದು ಯಾರಿಗೇ ತಾನೇ ಇಷ್ಟ ಇಲ್ಲ ಹೇಳಿ.  ಎಲ್ಲಾ ಹುಡುಗಿಯರೂ ಕೂಡ ತಾನೂ ನೋಡುವುದಕ್ಕೆ ಆಕರ್ಷಕವಾಗಿರ ಬೇಕು, ಸುಂದರವಾಗಿರ ಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಸಿಕ್ಕಾಪಟ್ಟೆ  ಸರ್ಕಸ್​ ನಡೆಸುತ್ತಾರೆ. ಬ್ಯೂಟಿ ಪಾರ್ಲರ್​ ಗಳಿಗೆ   ಹೋಗುವುದು ಸಾಮಾನ್ಯ. ಇನ್ನೂ ವಾರಕ್ಕೆ 2-3 ಬಾರಿಯಾದ್ರೂ ಪಾರ್ಲರ್​ ಗಳಿಗೆ ಹೋಗುವುದನ್ನ ನಾವು ನೋಡಿದ್ದೇವೆ....Kannada News Portal